ವಿಮಾನ ನಿಲ್ದಾಣದಲ್ಲಿ ಬೇಜಾರು ಕಳೆಯಲು ಸ್ಟಂಟ್: ವಿಡಿಯೋ ವೈರಲ್

Public TV
1 Min Read
limbo

ನ್ಯೂಯಾರ್ಕ್: ಸಮಯಕ್ಕೆ ಸರಿಯಾಗಿ ಬಸ್ಸು, ಟ್ರೈನ್, ವಿಮಾನ ಬರದಿದ್ದರೆ ನಿಲ್ದಾಣದಲ್ಲಿ ಸಮಯ ಕಳೆಯಲು ಬೇಜಾರು ಆಗುತ್ತದೆ. ಕೆಲವರು ಇಂತಹ ಸಮಯದಲ್ಲಿಯೇ ತಮ್ಮ ಪ್ರತಿಭೆಯ ಅನಾವರಣಗೊಳಿಸುತ್ತಾರೆ.

ಇಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮನಸ್ಸು ಗೆದ್ದಿದೆ. ಫಿಲಿಡೆಲ್ಫಿಯಾ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರು ತಮ್ಮ ಅನಿಶ್ಚಿತ ಸ್ಥಿತಿಯನ್ನು ಸಾಹಸದ ಮೂಲಕ ಕಳೆದು, ಪ್ರಯಾಣಿಕರನ್ನು ರಂಜಿಸಿ, ಪ್ರತಿಭೆಯನ್ನು ತೆರೆದಿಟ್ಟಿದ್ದಾರೆ.

ನ್ಯೂಯಾರ್ಕ್ ನ ಬಫಲೋ ಪ್ರದೇಶದ ಶೆಮಿಕಾ ಚಾರ್ಲೆಸ್ ಎಂಬವರು ಫಿಲಿಡೆಲ್ಫಿಯಾ ವಿಮಾನ ನಿಲ್ದಾಣದಲ್ಲಿ ವಿಮಾನಕ್ಕಾಗಿ ಕಾಯುತ್ತಾ ಕುಳಿತ್ತಿದ್ದರು. ಆಗ ಕೆಲ ಪ್ರಯಾಣಿಕರು ಫೋನ್ ಹಾಗೂ ಇನ್ನು ಕೆಲವರು ಪರಿಚಿತರ ಜೊತೆಗೆ ಮಾತನಾಡುವಲ್ಲಿ ನಿರತರಾಗಿದ್ದರು. ಆದರೆ ಶೆಮಿಕಾ ಏಕಾಂಗಿ ಆಗಿದ್ದರಿಂದ ಸ್ಟಂಟ್ (ಲಿಂಬೋ ಪ್ರದರ್ಶನ) ಮಾಡಿದ್ದಾರೆ.

limbo 1

ಶೆಮಿಕಾ ತಮ್ಮ ಕಾಲುಗಳನ್ನು ಅಗಲಿಸಿ, ನಿಧಾನವಾಗಿ ಹಿಂದಕ್ಕೆ ಬಾಗಿದ್ದರು. ಬಳಿಕ ಕೇವಲ ಕಾಲು ಬೆರಳುಗಳ ಸಹಾಯದಿಂದ ಮುಂದೆ ಇದ್ದ ಚೇರ್ ಕೆಳಗೆ ನುಸುಳಿ ಹೊರ ಬರುತ್ತಾರೆ. ಅಲ್ಲಿಯೇ ಕುಳಿತ್ತಿದ್ದ ಕೆಲವರು ಆಕೆಯ ಸಾಹಸ ನೋಡಿ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರೆ, ಇತ್ತ ಶೆಮಿಕಾ ಚಾರ್ಲೆಸ್ ಪತಿ, ಈ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದು ಕೆಲವೇ ಸೆಕೆಂಡ್‍ಗಳಲ್ಲಿ ವೈರಲ್ ಆಗಿ, ನೆಟ್ಟಿಗರ ಮೆಚ್ಚುಗೆ ಗಿಟ್ಟಿಸಿಕೊಂಡಿದೆ.

ಶೆಮಿಕಾ ಈಗಾಗಲೇ ಎರಡು ಬಾರಿ ಲಿಂಬೋ ಪ್ರದರ್ಶನದ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ. 2010ರಲ್ಲಿ 8.5 ಇಂಚು ಎತ್ತರದ ಕಿರಿದಾದದ ಜಾಗದಿಂದ ನುಸುಳಿ ನಡೆದಿದ್ದರು. 2016ರಲ್ಲಿ ಒಂದು ಅಡಿಗಿಂತ ಕಡಿಮೆ ಎತ್ತರವಿರುವ ಕಿರಿದಾದ ಜಾಗದಿಂದ 3.048 ಮೀಟರ್ ವರೆಗೆ ಶೆಮಿಕಾ ಕ್ರಮಿಸಿ ದಾಖಲೆ ಬರೆದಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *