ನೋ 50:50 ಫಾರ್ಮುಲಾ, ನಾನೇ 5 ವರ್ಷ ಸಿಎಂ: ದೇವೇಂದ್ರ ಫಡ್ನವೀಸ್

Public TV
1 Min Read
Devendra Fadnavis 3

ಮುಂಬೈ: ಯಾವುದೇ 50:50 ಫಾರ್ಮುಲಾ ಇಲ್ಲ. ನಾನೇ ಮುಂದಿನ ಐದು ವರ್ಷ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಸಿಎಂ ದೇವೇಂದ್ರ ಫಡ್ನವೀಸ್ ಸ್ಪಷ್ಟಪಡಿಸಿದ್ದಾರೆ.

ಮಹಾರಾಷ್ಟ್ರದ ಚುನಾವಣಾ ಫಲಿತಾಂಶ ಹೊರ ಬಂದು ಐದು ದಿನ ಕಳೆದರೂ ಸರ್ಕಾರ ರಚನೆಯಾಗಿಲ್ಲ. ಶಿವಸೇನೆ ಮತ್ತು ಬಿಜೆಪಿ ನಡುವೆ ಸಿಎಂ ಪದವಿಗಾಗಿ ಪೈಪೋಟಿ ನಡೆಯುತ್ತಿದೆ. ಈ ನಡುವೆ ದೇವೇಂದ್ರ ಫಡ್ನವಿಸ್ ಮಾತ್ರ ಸಿಎಂ ಸ್ಥಾನವನ್ನು ಬಿಜೆಪಿ ಯಾರೊಂದಿಗೆ ಹಂಚಿಕೊಳ್ಳಲ್ಲ. ಶಿವಸೇನೆ ಯಾವುದೇ ಬೇಡಿಕೆಯನ್ನ ನಮ್ಮ ಮುಂದಿ ಇರಿಸಿಲ್ಲ. ಒಂದು ವೇಳೆ ಬೇಡಿಕೆಗಳನ್ನು ಮುಂದಿಟ್ಟರೆ ಮೆರಿಟ್ ಆಧಾರದಲ್ಲಿ ಬಗೆಹರಿಸಿಕೊಳ್ಳಲಾಗುವುದು ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿಯೇ ಸರ್ಕಾರ ರಚನೆ ಮಾಡಲಿದೆ ಎಂಬ ಭರವಸೆಯನ್ನು ನೀಡುತ್ತೇನೆ. ಮುಂದಿನ ಐದು ವರ್ಷ ಸಹ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ. ಚುನಾವಣೆಗೂ ಮುನ್ನವೇ ಶಿವಸೇನೆ ಮತ್ತು ಬಿಜೆಪಿ ಮೈತ್ರಿಗೆ ಅಂತಿಮ ಸ್ವರೂಪ ನೀಡಲಾಗಿದೆ. ಮೈತ್ರಿ ರಚನೆ ವೇಳೆ ಶಿವಸೇನೆ ಎರಡೂವರೆ ವರ್ಷ ಸಿಎಂ ಸ್ಥಾನ ನೀಡಬೇಕೆಂಬ ಷರತ್ತು ಹಾಕಿರಲಿಲ್ಲ. ಹಾಗಾಗಿ ಸಿಎಂ ಸ್ಥಾನ ಹಂಚಿಕೆ ಆಗಲ್ಲ ಎಂದು ಫಡ್ನವೀಸ್ ಕಡ್ಡಿ ಮುರಿದಂತೆ ಹೇಳಿದ್ದಾರೆ.  ಇದನ್ನೂ ಓದಿ: ಇಲ್ಲಿ ಯಾರು ಜೈಲಿನಲ್ಲಿರುವ ಪುತ್ರ ದುಷ್ಯಂತ್ ಚೌಟಾಲಾ ಇಲ್ಲ: ಶಿವಸೇನೆ, ಬಿಜೆಪಿ-ಜೆಜೆಪಿ ಮೈತ್ರಿಯನ್ನ ಟೀಕಿಸಿದ ಶಿವಸೇನೆ

ಸೋಮವಾರ ಬಿಜೆಪಿಯ ನೂತನ ಶಾಸಕರು ಮತ್ತು ಮುಖಂಡರ ಸಭೆಯನ್ನು ಕರೆಯಲಾಗಿತ್ತು. ಇಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕುರಿತಾಗಿ ಚರ್ಚೆಗಳು ನಡೆದಿವೆ ಎಂದು ವರದಿಯಾಗಿದೆ. ಶಿವಸೇನೆ ಮತ್ತು ಬಿಜೆಪಿ ನಡುವೆ ಉಂಟಾಗಿರುವ ವೈಮನಸ್ಸು ದೂರ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂಬೈಗೆ ಆಗಮಿಸುವ ಸಾಧ್ಯತೆಗಳಿವೆ. ನವೆಂಬರ್ 8ಕ್ಕೆ ಬಿಜೆಪಿ ಮಹಾರಾಷ್ಟ್ರದಲ್ಲಿ ಎರಡನೇ ಬಾರಿ ಸರ್ಕಾರ ರಚನೆ ಮಾಡಲಿದೆ ಎಂದು ವರದಿಗಳು ಬಿತ್ತರವಾಗಿವೆ.

ಏನದು 50:50 ಫಾರ್ಮುಲಾ?
ಶಿವಸೇನೆ ತಮ್ಮ ಪಕ್ಷದ ನಾಯಕ ಎರಡೂವರೆ ವರ್ಷ ಸಿಎಂ ಆಗಬೇಕು. ಬಿಜೆಪಿಯ ನಾಯಕ ಎರಡೂವರೆ ಸಿಎಂ ಆಗಬೇಕು ಎಂಬ ಷರತ್ತನ್ನು ಶಿವಸೇನೆ ಕಮಲ ನಾಯಕರ ಮುಂದೆ ಇರಿಸಿದೆ. ಶಿವಸೇನೆಗೆ ಡಿಸಿಎಂ ಸ್ಥಾನದ ಆಯ್ಕೆಯನ್ನು ನೀಡಿ, ಷರತ್ತನ್ನು ಒಪ್ಪಿಲ್ಲ.

Share This Article
Leave a Comment

Leave a Reply

Your email address will not be published. Required fields are marked *