‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ರಿಯಾಲಿಟಿ ಶೋ ಇನ್ನೇನು 10 ದಿನಗಳಲ್ಲಿ ಮುಗಿಯಲಿದೆ. ಇನ್ನೂ ಈ ವಾರ ಮಿಡ್ ವೀಕ್ ಎಲಿಮಿನೇಷನ್ ರದ್ದಾಗಿರುವ ಹಿನ್ನೆಲೆ ಈ ವೀಕೆಂಡ್‌ನಲ್ಲಿ ಡಬಲ್ ಎಲಿಮಿನೇಷನ್ ನಡೆಯಲಿದೆ. 5 ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಯಾವ ಡಬಲ್ ಎಲಿಮಿನೇಷನ್‌ಗೆ ಬಲಿಯಾಗ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಈ ವಾರ ಫಿನಾಲೆ ಹಂತ ತಲುಪಲು ಟಾಸ್ಕ್‌ಗಳಲ್ಲಿ ಸಾಕಷ್ಟು ಟ್ವಿಸ್ಟ್ ಮತ್ತು ಭಿನ್ನವಾಗಿರೋ ಆಟವನ್ನೇ ಬಿಗ್ ಬಾಸ್ ನೀಡಿದ್ದರು. ಅದರಲ್ಲಿ ಕನ್ನಡಿ ನೋಡಿ ಧನರಾಜ್ (Dhanraj Achar) ಆಟ ಪೂರ್ಣಗೊಳಿಸಿದರು ಎಂಬ ಕಾರಣಕ್ಕೆ ಅವರಿಗೆ ನೀಡಿದ್ದ ಇಮ್ಯೂನಿಟಿಯನ್ನು ಬಿಗ್ ಬಾಸ್ ಹಿಂಪಡೆದರು. ಹಾಗಾಗಿ ಮಿಡ್ ವೀಕ್ ಎಲಿಮಿನೇಷನ್ ಪ್ಲ್ಯಾನ್ ಅನ್ನು ರದ್ದು ಮಾಡಲಾಯ್ತು. ಇದನ್ನೂ ಓದಿ:BBK 11: ಗೆದ್ದರೆ ಅತ್ತೆ ಮನೆಗೆ ಹೋಗಿ ಹುಡುಗಿ ಕೇಳುತ್ತೇನೆ: ಹನುಮಂತ
ಹಾಗಾಗಿ ಈ ವಾರ ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಉಗ್ರಂ ಮಂಜು, ಭವ್ಯಾ, ಗೌತಮಿ, ರಜತ್, ಧನರಾಜ್ ಆಚಾರ್ ನಾಮಿನೇಟ್ ಆಗಿದ್ದಾರೆ. 5 ಮಂದಿ ನಾಮಿನೇಷನ್ ಹಾಟ್ ಸೀಟ್‌ನಲ್ಲಿದ್ದಾರೆ. ಇದರಲ್ಲಿ ಇಬ್ಬರೂ ಡಬಲ್ ಎಲಿಮಿನೇಟ್ ಆಗಿದ್ದಾರೆ. ತ್ರಿವಿಕ್ರಮ್ ನಾಮಿನೇಟ್ ಆಗದ ಹಿನ್ನೆಲೆ ಅವರು ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ.
ಇನ್ನೂ ಫಿನಾಲೆ ವಾರಕ್ಕೆ ಹನುಮಂತ, ಮೋಕ್ಷಿತಾ ಪೈ ಮತ್ತು ತ್ರಿವಿಕ್ರಮ್ ಕಾಲಿಟ್ಟಿದ್ದಾರೆ. ಸದ್ಯಕ್ಕೆ ಅವರು ಸೇಫ್ ಝೋನ್‌ನಲ್ಲಿದ್ದಾರೆ. ಹಾಗಾದ್ರೆ ನಾಮಿನೇಟ್ ಆಗಿರುವ ಸ್ಪರ್ಧಿಗಳಲ್ಲಿ ಯಾರಿಗೆ ಗೇಟ್ ಪಾಸ್ ಸಿಗಲಿದೆ? ಎಂದು ಕಾಯಬೇಕಿದೆ.