ಮುಂಬೈ: ಭಯ ಎನ್ನುವ ಸಾರ್ವತ್ರಿಕ ಸಮಸ್ಯೆ. ಅದರಲ್ಲೂ ಅತ್ತೆಯ ಭಯ ಜಗತ್ತಿನ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ ಎನ್ನುವ ಸಂದೇಶ ಹೊತ್ತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪತ್ನಿಯ ಪಾದಗಳನ್ನು ತೊಳೆಯುತ್ತಿರುವ ವ್ಯಕ್ತಿಯೊಬ್ಬ ತನ್ನ ತಾಯಿಯು ಮನೆ ಒಳಗೆ ಬಂದಿದ್ದು ತಿಳಿದು ಹೆದರಿ ತಬ್ಬಿಬ್ಬಾಗುತ್ತಾನೆ. ಅವನ ಹಾಗೂ ಪತ್ನಿಯ ವರ್ತನೆ ನೋಡುಗರಲ್ಲಿ ಭಾರೀ ನಗುವನ್ನು ತರಿಸುತ್ತದೆ. ಅಲ್ಲದೇ ಈ ವಿಡಿಯೋ ಕೆಲವೊಬ್ಬರ ಅನುಭವವನ್ನು ಕೆರಳಿಸುತ್ತದೆ.
ವಿಡಿಯೋದಲ್ಲಿ ಏನಿದೆ?:
ಮನೆಯಲ್ಲಿ ಯಾರು ಇಲ್ಲದಿರುವಾಗ ವ್ಯಕ್ತಿಯೊಬ್ಬ ಟಬ್ ನಲ್ಲಿ ನೀರು ತುಂಬಿಕೊಂಡು ಅದರಲ್ಲಿ ತನ್ನ ಹೆಂಡತಿಯ ಪಾದಗಳನ್ನು ತೊಳೆಯುತ್ತಿರುತ್ತಾನೆ. ದಂಪತಿ ಏಕಾಂತದಲ್ಲಿ ಏನ್ನನೋ ಮಾತನಾಡುತ್ತ ಕಾಲ ಕಳೆಯುತ್ತಿರುತ್ತಾರೆ. ಈ ವೇಳೆ ಸಡನ್ ಆಗಿ ಅತ್ತೆ ಒಳಗೆ ಬರುತ್ತಾರೆ. ಅತ್ತೆ ಬಂದಿರುವುದನ್ನು ಗಮನಿಸಿದ ಸೊಸೆ ತನ್ನ ಕಾಲನ್ನು ಟಬ್ ನಿಂದ ಹಿಂದಕ್ಕೆ ತಗೆಯುತ್ತಾಳೆ. ಇತ್ತ ವ್ಯಕ್ತಿಯೂ ಕೂಡ ತನ್ನ ತಾಯಿಗೆ ಯಾವುದೇ ರೀತಿಯ ಸಂದೇಹ ಬಾರದಿರಲಿ ಎಂದು ಹೆದರಿಕೆಯಿಂದ ಪತ್ನಿಯ ಪಾದ ತೊಳೆದ ನೀರನ್ನು ತಲೆ ಮೇಲೆ ಹಾಕಿಕೊಳ್ಳುತ್ತಾನೆ. ಇದಕ್ಕೆ ಪತ್ನಿಯೂ ಕೂಡ ಸಹಾಯ ಮಾಡುತ್ತಾಳೆ.
https://twitter.com/FarooqFantastic/status/1001350970234818560
ಈ ದೃಶ್ಯವು ಕೆಲವರಿಗೆ ಅಷ್ಟೊಂದು ಪರಿಣಾಮಕಾರಿ ಅಲ್ಲ ಅನಿಸಬಹುದು. ಆದರೆ ಯಾವುದೇ ತಾಯಿಯು ಮಗ ಹೀಗೆ ಮಾಡುವುದನ್ನು ಇಷ್ಟಪಡುವುದಿಲ್ಲ. ಅಲ್ಲದೇ ಸೊಸೆ ಕೂಡಾ ಅತ್ತೆಗೆ ಹೆದರುತ್ತಾಳೆ ಎನ್ನುವುದನ್ನು ವಿಡಿಯೋ ಹೇಳುತ್ತದೆ.
ಸದ್ಯ ಈ ವಿಡಿಯೋ ಫೇಸ್ ಬುಕ್, ವ್ಯಾಟ್ಸಪ್, ಟ್ವೀಟ್ಟರ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.