ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫೋಟೋಗಳು ಹಾಗೂ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಆದರೆ ಮುದ್ದಾದ ಮಕ್ಕಳು ಚಪ್ಪಲಿ ಹಿಡಿದು ಸೆಲ್ಫಿ ತೆಗೆದುಕೊಳ್ಳುತ್ತಿರುವ ವೈರಲ್ ಫೋಟೋವೊಂದು ಎಲ್ಲರ ಮನಸ್ಸು ಗೆಲ್ಲುತ್ತಿದೆ.
ಐದು ಜನ ಮುದ್ದಾದ ಮಕ್ಕಳು ಚಪ್ಪಲಿ ನೋಡಿ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಮಕ್ಕಳು ಸೆಲ್ಫಿಗೆ ಪೋಸ್ ನೀಡುವಾಗ ಅನಾಮಿಕ ವ್ಯಕ್ತಿಯೊಬ್ಬರು ಆ ಫೋಟೋವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವೈರಲ್ ಫೋಟೋವನ್ನು ಎಲ್ಲರೂ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ವೈರಲ್ ಆಗಿರುವ ಈ ಫೋಟೋ ಎಲ್ಲಿ ಸೆರೆ ಹಿಡಿದಿದ್ದು ಎಂಬ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಸೆಲ್ಫಿಗೆ ಬಾಲಿವುಡ್ ಕಲಾವಿದರಾದ ಸುನೀಲ್ ಶೆಟ್ಟಿ, ಬೋಮನ್ ಇರಾನಿ ಹಾಗೂ ಅತುಲ್ ಕಸ್ಬೆಕರ್ ಈ ವೈರಲ್ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪೋಸ್ಟ್ ಹಾಗೂ ಟ್ವೀಟ್ ಮಾಡಿದ್ದಾರೆ.
“You’re only as happy as you choose to be”. A saying that holds true for one and all!!
And I’m sure this selfie deserves more likes than most. pic.twitter.com/KafEzq3mg8
— Boman Irani (@bomanirani) February 3, 2019
ಸುನೀಲ್ ಶೆಟ್ಟಿ ಈ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಅದಕ್ಕೆ, “ಈ ಸುಂದರವಾದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದೆ. ಈ ಫೋಟೋ ಹಂಚಿಕೊಳ್ಳಬೇಕು ಎಂದು ಅನಿಸಿತು” ಎಂದು ಪೋಸ್ಟ್ ಮಾಡಿದ್ದಾರೆ. ನಟ ಬೋಮನ್ ಇರಾನಿ ಕೂಡ ಈ ಫೋಟೋವನ್ನು ಟ್ವಿಟ್ಟರಿನಲ್ಲಿ ಹಾಕಿ, “ನೀವು ಇಚ್ಚಿಸಿದಂತೆ ಮಾತ್ರ ನೀವು ಸಂತೋಷವಾಗಿರುತ್ತೀರಿ. ಈ ಸೆಲ್ಫಿಯನ್ನು ಹೆಚ್ಚು ಮಂದಿ ಇಷ್ಟಪಡುತ್ತಾರೆ” ಎಂದು ಟ್ವೀಟ್ ಮಾಡಿದ್ದಾರೆ.
View this post on Instagram
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv