ನರ್ಸ್, ಫಾರ್ಮಾಸಿಸ್ಟ್ ಜೋಡಿಯ ಟ್ಯಾಬ್ಲೆಟ್ ವೆಡ್ಡಿಂಗ್ ಕಾರ್ಡ್ ವೈರಲ್

Public TV
2 Min Read
tablet wedding 1

ಹೈದರಾಬಾದ್: ಮದುವೆ ಪ್ರತಿಯೊಬ್ಬರ ಜೀವನದಲ್ಲೂ ಮಹತ್ವದ ಘಟ್ಟವಾಗಿದ್ದು, ಈ ಪ್ರಮುಖ ಘಟ್ಟದಲ್ಲಿ ಹಲವಾರು ಕನಸುಗಳನ್ನು ಕಂಡಿರುತ್ತಾರೆ. ಪ್ರತಿಯೊಂದು ಹಂತದಲ್ಲೂ ಕಂಡಿರುವ ಕನಸನ್ನು ನನಸು ಮಾಡಿಕೊಳ್ಳಬೇಕೆಂಬ ಹಂಬಲ ಇರುತ್ತೆ. ಅದೇ ರೀತಿ ಇಲ್ಲೊಂದು ಜೋಡಿ ವಿಶೇಷ ರೀತಿಯಲ್ಲಿ ಮದುವೆ ಕಾರ್ಡ್‍ನ್ನು ಮಾಡಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹೌದು.. ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ವರ ಎಜಿಲರಸನ್ ಹಾಗೂ ವಿಲ್ಲುಪುರಂ ಜಿಲ್ಲೆಯ ಗೆಂಜಿಯ ವಧು ವಸಂತಕುಮಾರಿ ಇಬ್ಬರೂ ಮುಂದಿನ ತಿಂಗಳು ಅಂದರೆ ಸೆ. 5 ರಂದು ಮದುವೆ ಆಗಲಿದ್ದಾರೆ. ಮೂಲತಃ ಈ ಇಬ್ಬರು ಜೋಡಿಗಳು ವೈದ್ಯಕೀಯ ವೃತ್ತಿಯಲ್ಲಿದ್ದಾರೆ. ವರ ಫಾರ್ಮಾಸಿಸ್ಟ್ ಹಾಗೂ ವಧು ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ತಮ್ಮ ವೃತ್ತಿಗೆ ಅನುಗುಣವಾಗಿಯೇ ಇರಲಿ ಎಂದು ಟ್ಯಾಬ್ಲೆಟ್ ಕಾರ್ಡ್ ಮಾದರಿಯ ಆಮಂತ್ರಣ ಪತ್ರವನ್ನು ಮಾಡಿಸಿದ್ದಾರೆ.

ಈ ಕಾರ್ಡಿನ ವಿಶೇಷ ಏನೆಂದರೆ ಟ್ಯಾಬ್ಲೆಟ್ ಶಿಟ್‍ನಲ್ಲಿ ಯಾವ ರೀತಿಯಾಗಿ ಬರೆದಿರುತ್ತಾರೋ ಅದೇ ರೀತಿಯಾಗಿ ತಮ್ಮ ಮದುವೆ ಕಾರ್ಡ್‍ನ್ನು ಬರೆಸಿದ್ದಾರೆ. ನೀವು ಒಮ್ಮೆಲೇ ನೋಡಿದರೇ ಅರೇ.. ಇದೇನಪ್ಪ ಈ ಟ್ಯಾಬ್ಲೆಟ್ ಶಿಟ್ ನೀಡಿದ್ದಾರಲ್ಲ ಅಂದುಕೊಳ್ಳಬೇಕು, ಆ ರೀತಿಯೇ ಇದೆ. ಇದನ್ನೂ ಓದಿ: ಷರತ್ತಿನೊಂದಿಗೆ ಗಣೇಶೋತ್ಸವಕ್ಕೆ BBMP ಗ್ರೀನ್ ಸಿಗ್ನಲ್ – ಈದ್ಗಾ ಮೈದಾನ ಗಣಪನಿಗೆ ಸಿಕ್ಕಿಲ್ಲ ಪರ್ಮಿಷನ್

ಈ ವೆಡ್ಡಿಂಗ್ ಕಾರ್ಡ್‍ನಲ್ಲಿ ಎಲ್ಲ ಸ್ನೇಹಿತರು ಮತ್ತು ಬಂಧುಗಳು ತಪ್ಪದೇ ವಿವಾಹ ಸಮಾರಂಭಕ್ಕೆ ಆಗಮಿಸಬೇಕು ಎಂದು ತಿಳಿಸಲಾಗಿದೆ. ಅಷ್ಟೇ ಅಲ್ಲ, ನೀಲಿ ಬಣ್ಣದಲ್ಲಿ ಮದುವೆ ಮತ್ತು ಆರತಕ್ಷತೆ ನಡೆಯುವ ದಿನಾಂಕ ಮತ್ತು ಸಮಯ ತಿಳಿಸಲಾಗಿದೆ. ಮ್ಯಾನುಫ್ಯಾಕ್ಚರ್ ವಿಭಾಗದಲ್ಲಿ ವರನ ತಂದೆ-ತಾಯಿ, ವಧುವಿನ ತಂದೆ-ತಾಯಿ ಹೆಸರಿನೊಂದಿಗೆ ಅವರ ವಿಳಾಸ ಇದೆ.

ಟ್ಯಾಬ್ಲೆಟ್ ಕಾರ್ಡ್‍ಗಳಲ್ಲಿ ಸೂಚಿಸುವ ವಾರ್ನಿಂಗ್ ಸ್ಥಳದಲ್ಲಿ ಎಲ್ಲ ಸ್ನೇಹಿತರೇ, ಬಂಧುಗಳೇ ನಮ್ಮ ಮದುವೆಯ ಶುಭಕಾರ್ಯಕ್ರಮಕ್ಕೆ ಮಿಸ್ ಮಾಡದೆ ಬನ್ನಿ ಎಂದು ಕೆಂಪು ಬಣ್ಣದಲ್ಲಿ ಮುದ್ರಿಸಲಾಗಿದೆ. ಇನ್ನು ತಮ್ಮ ಮದುವೆ ದಿನದ ವಿಶೇಷ ದಿನಗಳನ್ನೂ ಸ್ಮರಿಸಿದ್ದು, ಶಿಕ್ಷಕರ ದಿನ ಮತ್ತು ಮದರ್ ತೆರೇಸಾ ಸ್ಮರಣೆ ದಿನವಿದೆ ಎಂದಿದ್ದಾರೆ. ಮದುವೆ ಕರೆಯೋಲೆ ಪತ್ರಿಕೆಯಲ್ಲಿ ವಧು-ವರನ ಹೆಸರು ದೊಡ್ಡ ಅಕ್ಷರದಲ್ಲಿದ್ದು, ಪಕ್ಕದಲ್ಲೇ ಇಬ್ಬರ ಶಿಕ್ಷಣದ ವಿವರವೂ ಇದೆ. ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷರಾಗಲು ನೋ ಎಂದ ರಾಹುಲ್ ಗಾಂಧಿ; ಗಾಂಧಿಯೇತರರಿಗೆ ಅವಕಾಶ- ಮೂಲಗಳು

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *