ಬೆಂಗಳೂರು/ಮೈಸೂರು: ಈ ಬಾರಿ ಮೈಸೂರು ದಸರಾ (Mysuru Dasara) ಮಹೋತ್ಸವವನ್ನು ರಾಷ್ಟ್ರಪತಿ (President of India) ದ್ರೌಪದಿ ಮುರ್ಮು (Draupadi Murmu) ಅವರು ಉದ್ಘಾಟಿಸಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಎಂ, ಸೆ.26 ರಂದು ನಡೆಯಲಿರುವ ದಸರಾ ಮಹೋತ್ಸವವನ್ನು ರಾಷ್ಟ್ರಪತಿಗಳು ಉದ್ಘಾಟಿಸಲಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಗೇಮಿಂಗ್ ಆ್ಯಪ್ ಸ್ಕ್ಯಾಮ್- ಉದ್ಯಮಿ ಮನೆಯಿಂದ 12 ಕೋಟಿ ನಗದು ವಶ
Advertisement
Advertisement
ದಸರಾ ಉದ್ಘಾಟನೆಗೆ ಯಾರನ್ನು ಕರೆಯಬೇಕು ಎಂದು ಚರ್ಚೆ ನಡೆಯುತ್ತಿದ್ದಾಗ ಈ ತೀರ್ಮಾನ ಕೈಗೊಳ್ಳಲಾಗಿದೆ. ರಾಷ್ಟ್ರಪತಿಗಳೂ ಬರಲು ಒಪ್ಪಿಕೊಂಡಿದ್ದಾರೆ. ಅವರಿಂದಲೇ ದಸರಾ ಉದ್ಘಾಟನೆಯಾಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 6 ತಿಂಗಳು ರಜೆ ಹಾಕಿ- ಡೀನ್ ವಿರುದ್ಧ ಸಚಿವ ಸೋಮಣ್ಣ ಗರಂ
Advertisement
Advertisement
ಈಗಾಗಲೇ ಪೂರ್ವಭಾವಿ ಸಭೆಯಲ್ಲಿ ರಾಷ್ಟ್ರಪತಿ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಗಿತ್ತು. ರಾಷ್ಟ್ರಪತಿಗಳಿಗೂ ಅಧಿಕೃತವಾಗಿ ಪತ್ರ ಬರೆದು, ಅವರೊಂದಿಗೆ ಮಾತನಾಡಿದ್ದೆವು. ದಸರಾ ಉದ್ಘಾಟನೆಗೆ ಒಪ್ಪಿ ರಾಷ್ಟ್ರಪತಿ ಅವರಿಂದ ಈಗ ಪತ್ರ ಬಂದಿದೆ. ಹಾಗಾಗಿ ಅವರಿಂದಲೇ ಈ ಬಾರಿ ದಸರಾ ಉದ್ಘಾಟನೆಯಾಗಲಿದೆ. ರಾಷ್ಟ್ರಪತಿಗಳಿಗೆ ಈಗ ನಿಯೋಜಿಸಿರುವ ಭದ್ರತೆಯೊಂದಿಗೆ ನಮ್ಮ ಕಡೆಯಿಂದಲೂ ವಿಶೇಷ ಭದ್ರತಾ ವ್ಯವಸ್ಥೆ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಕಳೆದ ಬಾರಿ ರಾಜಕೀಯ ಮುತ್ಸದ್ಧಿ ಎಸ್.ಎಂ ಕೃಷ್ಣ ಅವರು ದಸರಾ ಉದ್ಘಾಟನೆ ನೆರವೇರಿಸಿದ್ದರು.