ಹಾವೇರಿ: ಸಂಪುಟ ಪುನರ್ ರಚನೆಯಲ್ಲಿ ಏನ್ ನಿರ್ಧಾರ ಆಗುತ್ತೋ ನೋಡಬೇಕು. ಯಾವುದೇ ಕಾರಣಕ್ಕೆ ನನ್ನ ಕೈ ಬಿಡಲ್ಲ ಅಂತ ಸಿಎಂ ಹೇಳಿದ್ದಾರೆ. ಮೊನ್ನೆ ಕೆಲ ಕಾರಣಗಳಿಂದ ನಿಮಗೆ ಅವಕಾಶ ಕೈ ತಪ್ಪಿತ್ತು. ಈಗ ನಿಮಗೆ ಖಂಡಿತಾ ಅವಕಾಶ ಸಿಗುತ್ತದೆ ಎಂದು ಹೇಳಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ಹೇಳಿದ್ದಾರೆ.
Advertisement
ಹಾವೇರಿಯಲ್ಲಿ ಮಾತನಾಡಿದ ಅವರು, ನಿಮಗೂ ಹಾಗೂ ಶ್ರಿಮಂತ ಪಾಟೀಲ್ ಅವರನ್ನ ಕೈ ಬಿಡಲ್ಲ. ನಮ್ಮನ್ನು ಖಂಡಿತಾ ಮಾಡ್ತಾರೆ ಅಂತಾ ಭರವಸೆ ನೀಡಿದ್ದಾರೆ. ಮೊನ್ನೆ ಸಿಎಂ ಭೇಟಿ ಮಾಡಿದ್ದೇನೆ. ಈ ಸಾರಿ ಕನ್ಸಿಡರ್ ಮಾಡ್ತೀನಿ ಅಂತಾ ಹೇಳಿದ್ದಾರೆ. ಈ ಬಾರಿ ಖಂಡಿತಾ ವಿಶ್ವಾಸ ಇದೆ ನನಗೆ ಎಂದರು. ಇದನ್ನೂ ಓದಿ: ಜನಾರ್ದನ ರೆಡ್ಡಿ ಚುನಾವಣೆಗೆ ನಿಂತರೆ ಗೆಲ್ಲದಂತೆ ಜನ ನೋಡಿಕೊಳ್ಬೇಕು: ಎಸ್.ಆರ್.ಹಿರೇಮಠ
Advertisement
Advertisement
ಮುಂದೆ ನನಗೆ ವಿಧಾನಸಭೆ ಸ್ಪರ್ಧೆಗೆ ಅವಕಾಶ ಕೊಡುವುದು ಬಿಡುವುದು ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ. ಅವರು ಹೇಗೆ ನಿರ್ಣಯ ತೆಗೆದುಕೊಳ್ಳುತ್ತಾರೋ ಅದರಂತೆ ನಡೆದುಕೊಳ್ಳುತ್ತೇನೆ. ನಾನು ಪಕ್ಷ ಹೇಳಿದಂತೆ ನಡೆದುಕೊಳ್ಳುತ್ತೇನೆ. ಈಗ ಅದು ಸದ್ಯಕ್ಕೆ ಬೇಡ. ಮತ್ತೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಪ್ರಶ್ನೆಗೆ ಉತ್ತರ. ಈಗಾಗಲೇ ಸಾಕಷ್ಟು ಬಾರಿ ನೆಗಟಿವ್ ಆಗಿದೆ. ಈ ಸಾರಿ ಪಾಸಿಟಿವ್ ಆಗುತ್ತೆ ಎಂಬ ವಿಶ್ವಾಸ ಇದೆ ಎಂದರು. ಇದನ್ನೂ ಓದಿ: ಮಹಿಳೆ ಬ್ಲಾಕ್‍ಮೇಲ್ ಮಾಡ್ತಿದ್ದು, ನನ್ನದೇನೂ ತಪ್ಪಿಲ್ಲ: ಶಾಸಕ ತೇಲ್ಕೂರ್ ಕಣ್ಣೀರು
Advertisement
ರಾಜ್ಯದಲ್ಲಿ ಕೇಸರಿ ಮತ್ತು ಹಿಜಬ್ ಗಲಾಟೆ ನಡೆದಿದೆ. ಇದು ಆಗಬಾರದು, ಭಾರತ ದೇಶ ಸೌಹಾರ್ದಯುತ ದೇಶ. ಇಂತಹ ವಿಷ ಬೀಜಕ್ಕೆ ಕಡಿವಾಣ ಹಾಕಬೇಕು. ಶಾಂತಿ ನೆಮ್ಮದಿ ತರುವ ಕೆಲಸ ಸರ್ಕಾರ ಮಾಡುತ್ತಿದೆ. ನಾವೆಲ್ಲರೂ ಅದನ್ನು ಪಾಲಿಸಿಕೊಂಡು ಹೋಗಬೇಕು ಎಂದರು.