ಬೆಂಗಳೂರು: ಈ ಬಾರಿಯ ದೀಪಾವಳಿ ಹಬ್ಬಕ್ಕೆ (Deepavali Festival) ಗ್ರಹಣದ ಕಾರ್ಮೋಡ ಕವಿದಿದೆ.
3 ವರ್ಷಗಳ ಬಳಿಕ ದೇಶದಲ್ಲಿ ಪಾರ್ಶ್ವ ಸೂರ್ಯಗ್ರಹಣ (Solar eclipse) ಗೋಚರವಾಗುತ್ತಿದೆ. ನಾಡಿದ್ದು ಅಂದ್ರೆ, ಅಕ್ಟೋಬರ್ 25ರ ಸಂಜೆ 5 ಗಂಟೆ 12 ನಿಮಿಷಕ್ಕೆ ಆರಂಭವಾಗಿ, 6 ಗಂಟೆ 27 ನಿಮಿಷಕ್ಕೆ ಕೇತುಗ್ರಸ್ಥ ಸೂರ್ಯಗ್ರಹಣ ಅಂತ್ಯ ಕಾಣುತ್ತದೆ. ರಾಜ್ಯದ ಎಲ್ಲಾ ಭಾಗಗಳಲ್ಲಿ ಸೂರ್ಯಾಸ್ತದ ಹೊತ್ತಿನಲ್ಲಿ ಗ್ರಹಣ ಗೋಚರಿಸಲಿದೆ. ಇದನ್ನೂ ಓದಿ: ಪಾಕಿಸ್ತಾನದ ವಿರುದ್ಧ ಭಾರತ ಗೆದ್ದಿರೋದು ಕೆಲವರಿಗೆ ಬೇಸರ ತರಿಸಿದೆ – ಕಲ್ಲಡ್ಕ ಪ್ರಭಾಕರ್ ಭಟ್
Advertisement
Advertisement
ಬೆಂಗಳೂರಿನಲ್ಲಿ (Bengaluru) ಶೇ.10ರಷ್ಟು ಮಾತ್ರ ಗ್ರಹಣ ಗೋಚರಿಸಲಿದೆ. ಗ್ರಹಣ ವೀಕ್ಷಣೆಗೆ ಉಡುಪಿ ಉತ್ತಮ ಪ್ರದೇಶವಾಗಿದೆ. ದೇಶದ ಪೂರ್ವ ಭಾಗಗಳಲ್ಲಿ ಸೂರ್ಯಾಸ್ತದ ವೇಳೆ ಗ್ರಹಣ ಸಂಭವಿಸಿದರೇ, ಈಶಾನ್ಯ ಭಾಗಗಳಲ್ಲಿ ಸೂರ್ಯಾಸ್ತದ ಬಳಿಕ ಗ್ರಹಣ ಕಾಣಿಸಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಶೇ.55ರಷ್ಟು, ಲೇಹ್ ಲಡಾಖ್‌ನಲ್ಲಿ ಶೇ.54ರಷ್ಟು ಗ್ರಹಣ ಗೋಚರವಾಗಲಿದೆ. ಇದನ್ನೂ ಓದಿ: ನಂಗೆ ಎರಡು ಮುಖವಿಲ್ಲ, ಇರೋದು ಒಂದೇ ಮುಖ: ಹೆಚ್‍ಡಿಕೆಗೆ ಸೋಮಣ್ಣ ಟಾಂಗ್
Advertisement
Advertisement
ಭಾರತ ಮಾತ್ರವಲ್ಲದೇ ಯುರೋಪ್ (Europe), ಉತ್ತರ ಆಫ್ರಿಕಾ, ಮಧ್ಯ ಪ್ರಾಚ್ಯ ಮತ್ತು ಏಷ್ಯಾದ ಇತರ ಭಾಗಗಳಲ್ಲೂ ಸೂರ್ಯಗ್ರಹಣ ಗೋಚರಿಸಲಿದೆ. ರಷ್ಯಾದ ಉಗಾರದಲ್ಲಿ ಶೇ.85ರಷ್ಟು ಅಂದ್ರೆ ಅತಿ ಹೆಚ್ಚು ಭಾಗ ಗ್ರಹಣ ಕಾಣಿಸಲಿದೆ.