ನವದೆಹಲಿ: ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ. ನನ್ನ ಪ್ರಕಾರ ಕಾಂಗ್ರೆಸ್ 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಸರ್ಕಾರ ರಚನೆ ಮಾಡೋದು ಗ್ಯಾರಂಟಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾವು 150 ಸ್ಥಾನ ಗೆಲ್ಲುವ ಗುರಿ ಹೊಂದಿದ್ದೇವೆ. ಮುಖ್ಯಮಂತ್ರಿಗಳ ಅಭಿಪ್ರಾಯ ಬೇರೆ, ಜನರ ಅಭಿಪ್ರಾಯ ಬೇರೆ. ಸಮೀಕ್ಷೆಯಲ್ಲಿ ಜನರು ಹೇಳಿದ್ದನ್ನೇ ಹೇಳ್ತಾರೆ. ಆದರೆ ಸಿಎಂ ಜನರ ಅಭಿಪ್ರಾಯ ಒಪ್ಪಲ್ಲ. ಈ ಬಾರಿ ಉತ್ತಮ ನಂಬರ್‌ಗಳೊಂದಿಗೆ ಕಾಂಗ್ರೆಸ್ ಸರ್ಕಾರ ರಚನೆ ಮಾಡುತ್ತೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮದರಸಾಗಳಲ್ಲಿ ಮಕ್ಕಳಿಗೆ ರುಂಡ ಕತ್ತರಿಸುವ ಕಾನೂನನ್ನೇ ಬೋಧಿಸಲಾಗುತ್ತಿದೆ – ಆರಿಫ್ ಖಾನ್ ಕಿಡಿ
ಜೆಡಿಎಸ್, ಬಿಜೆಪಿಯವರೂ ಸಂಪರ್ಕದಲ್ಲಿದ್ದಾರೆ: ಬಿಜೆಪಿ, ಜೆಡಿಎಸ್ ನಾಯಕರೂ ನಮ್ಮ ಸಂಪರ್ಕದಲ್ಲಿದ್ದಾರೆ. ಚುನಾವಣೆ ಇನ್ನೂ ದೂರ ಇದೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಬರುವವರನ್ನು ಸೇರ್ಪಡೆ ಮಾಡಿಕೊಳ್ತೇವೆ. ಅವರಿಗೆ ಟಿಕೆಟ್ ನೀಡ್ತೇವೆ. ಎಷ್ಟು ಜನ ಸಂಪರ್ಕದಲ್ಲಿದ್ದಾರೆಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಜಿಎಸ್‌ಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇಷ್ಟು ದಿನ ಜಿಎಸ್‌ಟಿ ನಷ್ಟವನ್ನು ಕೇಂದ್ರದಿಂದ ರಾಜ್ಯಗಳಿಗೆ ನೀಡಲಾಗುತ್ತಿತ್ತು. ಈ ಬೆಳವಣಿಗೆ ಇಂದಿಗೆ ಅಂತ್ಯವಾಗುತ್ತಿದ್ದು, ಕರ್ನಾಟಕಕ್ಕೆ 20 ಸಾವಿರ ಕೋಟಿ ನಷ್ಟವಾಗಲಿದೆ. ಸರ್ಕಾರಕ್ಕೆ ಒಂದು ಆದಾಯ ಮೂಲ ಕಡಿತವಾಗಲಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಬುದ್ದಿ ಹೇಳಲು ಬಂದವರಿಗೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೂಪ
ನನ್ನ ಪ್ರಕಾರ ಇನ್ನೂ 5 ವರ್ಷ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ನೀಡಬೇಕು. ಬಿಜೆಪಿ ಆಡಳಿತ ರಾಜ್ಯಗಳು ಹೇಳಲು ಶಕ್ತಿಯಿಲ್ಲದೇ ಕೇಂದ್ರದ ನಿರ್ಧಾರವನ್ನು ಒಪ್ಪಿಕೊಂಡಿವೆ. ಆದರೆ ಪರಿಹಾರ ಮುಂದುವರಿಸುವ ಬಗ್ಗೆ ಇನ್ನು ತಿರ್ಮಾನ ಆಗಿಲ್ಲ. ಹೀಗಾಗಿ ಪರಿಹಾರ ನೀಡದಿದ್ದರೂ ಸೆಸ್ ಹಾಕುವುದು ಮುಂದುವರಿಯಲಿದೆ. ಇದರಿಂದ ರಾಜ್ಯಗಳಿಗೆ ಯಾವುದೇ ಆದಾಯ ಬರಲ್ಲ. ಆದ್ದರಿಂದ ಸರ್ಕಾರ ಜಿಎಸ್‌ಟಿ ನೀಡುವುದನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಿಎಸ್‌ಟಿ ತೆರಿಗೆಯಲ್ಲಿ ಬದಲಾವಣೆ ಮಾಡಿದ್ದಾರೆ. ಕೆಲವು ವಸ್ತುಗಳ ಮೇಲೆ ಜಿಎಸ್‌ಟಿ ಏರಿಕೆ ಮಾಡಲಾಗಿದೆ. ಕೃಷಿ ಉಪಯೋಗಿ ಪೈಪುಗಳ ಮೇಲಿನ ಜಿಎಸ್‌ಟಿ ಏರಿಕೆ ಮಾಡಿದೆ. ಹಾಲು ಕರೆಯುವ ಮಷಿನ್‌ಗಳ ಮೇಲೆ ಶೇ.12 ರಿಂದ ಶೇ.18 ಜಿಎಸ್‌ಟಿ ಏರಿಕೆ ಮಾಡಲಾಗಿದೆ. ಮೊದಲೇ ಅವೈಜ್ಞಾನಿಕವಾಗಿದ್ದ ಜಿಎಸ್‌ಟಿಯಿಂದ ಈಗ ಹೆಚ್ಚುವರಿ ಟ್ಯಾಕ್ಸ್ ಮೂಲಕ ಬರೆ ಎಳೆಯಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.