PGCET: ಕಂಪ್ಯೂಟರ್ ಸೈನ್ಸ್ ಕೋರ್ಸ್ ಪ್ರವೇಶಕ್ಕೆ ಈ ಬಾರಿ ಸಿಬಿಟಿ – ಕೆಇಎ

Public TV
1 Min Read
kea

ಬೆಂಗಳೂರು: ಪಿಜಿಸಿಇಟಿ-25ಕ್ಕೆ ಸಂಬಂಧಿಸಿದಂತೆ ಎಂ.ಇ ಮತ್ತು ಎಂ.ಟೆಕ್‌ನ ಕಂಪ್ಯೂಟರ್ ಸೈನ್ಸ್ ಕೋರ್ಸ್ ಪ್ರವೇಶಕ್ಕೆ ಮಾತ್ರ ಇದೇ ಮೊದಲ ಬಾರಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ(CBT) ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ತೀರ್ಮಾನಿಸಿದೆ.

ಜೂನ್ 2 ರಂದು ಪಿಜಿಸಿಇಟಿ(PGCET) ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸವಾಗಲಿ ಎನ್ನುವ ಕಾರಣಕ್ಕೆ ಮೇ 26 ಮತ್ತು 27ರಂದು ಅಣಕು ಪರೀಕ್ಷೆ ನಡೆಸಲಾಗುತ್ತದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ(H Prasanna) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬುರ್ಖಾಧಾರಿ ಮಹಿಳೆಯರಿಂದ ಮಗು ಕಿಡ್ನ್ಯಾಪ್‍ಗೆ ಯತ್ನ – ತಡೆಯಲು ಬಂದ ತಾಯಿಗೆ ಚಾಕು ಇರಿತ

ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿದ ನಂತರ ಪರೀಕ್ಷಾಭ್ಯಾಸಕ್ಕೆ ಪ್ರಾಯೋಗಿಕ ಲಿಂಕ್ ನೀಡಲಾಗುವುದು. ಲಿಂಕ್ ಮೂಲಕ ಅಭ್ಯಾಸ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ | ಆರ್‌ಸಿಬಿ-ಕೆಕೆಆರ್‌ ಪಂದ್ಯಕ್ಕೆ ಅಡ್ಡಿ

ಕಂಪ್ಯೂಟರ್ ಸೈನ್ಸ್ ಹೊರತುಪಡಿಸಿ, ಎಂಇ ಮತ್ತು ಎಂ.ಟೆಕ್‌ನ ಇತರ ಕೋರ್ಸ್‌ಗಳ ಪ್ರವೇಶಕ್ಕೆ ಮೇ 31 ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಪ್ರಾಯೋಗಿಕವಾಗಿ ಇದೇ ಮೊದಲ ಬಾರಿಗೆ ಮಾಡಲು ತೀರ್ಮಾನಿಸಿದ್ದು, ಮೂಲಸೌಕರ್ಯ ನೋಡಿಕೊಂಡು ಮುಂದಿನ ದಿನಗಳಲ್ಲಿ ಇತರ ಕೋರ್ಸ್‌ಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.

Share This Article