ಅವಹೇಳನಕಾರಿ ಟ್ವಿಟ್ ಗೆ ಸಂಬಂಧಿಸಿದಂತೆ ಬಂಧನವಾಗಿದ್ದ ನಟ, ನಿರ್ಮಾಪಕ ಕಮಲ್ ಆರ್ ಖಾನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆ ಅನ್ನುವ ಕಾರಣಕ್ಕಾಗಿ ಇವತ್ತು ಮತ್ತೆ ಬಂಧನವಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಬಾಂದ್ರಾ ನ್ಯಾಯಾಲಯ ಆದೇಶ ನೀಡಿದೆ.
ಶಿವಸೇನೆ ನಾಯಕರೊಬ್ಬರ ಮೇಲೆ ವಿವಾದ್ಮಾತಕ ಕಾಮೆಂಟ್ ಆರೋಪಗಳ ಮೇಲೆ ಕೆ.ಆರ್.ಕೆ ಆಗಸ್ಟ್ 30 ವರೆಗೂ ನ್ಯಾಯಾಂಗ ಬಂಧನದಲ್ಲಿದ್ದರು. ಆದರೆ ಇದೀಗ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪಕ್ಕಾಗಿ ಮತ್ತೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಘಟನೆಯು 2017ರಲ್ಲೇ ನಡೆದಿದ್ದು, ತಾವು ನಿರ್ಮಾಣ ಮಾಡುವ ಚಿತ್ರದಲ್ಲಿ ಅವಕಾಶ ಕೊಡಿಸುವುದಾಗಿ ಆ ನಟಿಗೆ ನಂಬಿಸಿ ಮೋಸ ಮಾಡಿದ್ದಾರೆಂದು ಆ ನಟಿ ದೂರಿದ್ದಾರೆ. ಇದನ್ನೂ ಓದಿ:ವಿಜಯ್ ಸೇತುಪತಿ ಅಭಿಮಾನಿಗಳಿಗೆ ಡಬಲ್ ಧಮಾಕಾ: ‘ವಿಡುದಲೈ’ ಸಿನಿಮಾ ಎರಡು ಭಾಗಗಳಲ್ಲಿ ರಿಲೀಸ್
ಕಮಲ್ ತಾವೊಬ್ಬ ನಿರ್ಮಾಪಕರು ಎಂದು ಪರಿಚಯ ಮಾಡಿಕೊಂಡು, ಆ ನಂತರ ನಟಿಯ ನಂಬರ್ ಪಡೆದಿದ್ದರಂತೆ. ಮೊದ ಮೊದಲು ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದರಂತೆ. ತನ್ನ ಹುಟ್ಟು ಹಬ್ಬದಲ್ಲಿ ಪಾಲ್ಗೊಳ್ಳಲು ನಟಿಗೆ ಕಮಲ್ ಆಹ್ವಾನ ಮಾಡಿದ್ದರಂತೆ. ಈ ಸಂದರ್ಭದಲ್ಲಿ ಜ್ಯೂಸ್ ಕುಡಿಸಿ, ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದರಂತೆ. ಆ ನಟಿ ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದರು ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.