ಚೆನ್ನೈ: ಟೊಮೆಟೊ (Tometo) ಬೆಲೆ ಬಹುತೇಕ ರಾಜ್ಯಗಳಲ್ಲಿ 100 ರೂ. ಗಡಿ ದಾಟಿದೆ. ಟೊಮೆಟೊ ದರ ದಿಢೀರ್ ಏರಿಕೆಯಿಂದ ಮಾರಾಟಗಾರರ ಮುಖದಲ್ಲಿ ಮಂದಹಾಸ ಮೂಡಿದೆ. ಆದರೆ ಗ್ರಾಹಕರಿಗೆ ಅಡುಗೆಗೆ ಬಳಸಲಾಗದಷ್ಟು ಹುಳಿಯಾಗಿ ಪರಿಣಮಿಸಿದೆ. ಗ್ರಾಹಕರಿಗೆ ತಟ್ಟಿರುವ ಬೆಲೆ ಏರಿಕೆ ಬಿಸಿ ತಪ್ಪಿಸಲು ತಮಿಳುನಾಡು ಸರ್ಕಾರ (Tamil Nadu) ಮಹತ್ವದ ನಿರ್ಧಾರ ಕೈಗೊಂಡಿದೆ.
ಹೌದು, ತಮಿಳುನಾಡು ಸರ್ಕಾರವು ಪಡಿತರ ಅಂಗಡಿಗಳು ಅಥವಾ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಮಳಿಗೆಗಳ ಮೂಲಕ ಸಬ್ಸಿಡಿ ದರದಲ್ಲಿ ಟೊಮೆಟೊ ಮಾರಾಟ ಪ್ರಾರಂಭಿಸಿದೆ. ಇದನ್ನೂ ಓದಿ: ದೆಹಲಿಯಲ್ಲಿ ಕೆ.ಜಿ ಟೊಮೆಟೋಗೆ 129 ರೂ., ಯುಪಿಯಲ್ಲಿ 150 ರೂ.!
- Advertisement -
ರಾಜ್ಯಾದ್ಯಂತ ಸದ್ಯ ಟೊಮೆಟೊ ಕೆಜಿಗೆ 120-140 ರೂ.ಗೆ ಮಾರಾಟವಾಗುತ್ತಿದೆ. ಆದರೆ ಪಡಿತರ ಕೇಂದ್ರಗಳಲ್ಲಿ ಟೊಮೆಟೊ ಕೆಜಿಗೆ 60 ರೂ.ಗೆ ಸಿಗುತ್ತಿದೆ.
ತಮಿಳುನಾಡು ಸಹಕಾರಿ ಸಚಿವ ಎಸ್. ಪೆರಿಯಕರುಪ್ಪನ್ ಅವರು ಟೊಮೆಟೊ ಮಾರಾಟಕ್ಕೆ ಸಂಬಂಧಿಸಿದಂತೆ ಸೂಕ್ಷ್ಮ ವಿಚಾರಗಳ ಬಗ್ಗೆ ಚರ್ಚಿಸಲು ರಾಜ್ಯ ಸಚಿವಾಲಯದಲ್ಲಿ ಸಭೆ ನಡೆಸಿದ್ದರು. ಟೊಮೆಟೊ ಬೆಲೆ ಏರಿಕೆಯಾಗುತ್ತಲೇ ಇದ್ದರೆ ಗ್ರಾಹಕರಿಗೆ ತೊಂದರೆಯಾಗುತ್ತದೆ. ಅವರಿಗೆ ಸಮಸ್ಯೆಯಾಗದಂತೆ ಹೆಚ್ಚಿನ ಉತ್ಪನ್ನ ಖರೀದಿಸಲು ಮತ್ತು ಕಡಿಮೆ ಬೆಲೆಗೆ ಮಾರಾಟ ಮಾಡಲು ರಾಜ್ಯ ಸರ್ಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ಸೇಬಿಗಿಂತ ಟೊಮೆಟೊ ರೇಟೇ ಜಾಸ್ತಿ!
ಎಲ್ಲೆಲ್ಲಿ ದರ ಎಷ್ಟು?
ಪಶ್ಚಿಮ ಬಂಗಾಳದಲ್ಲಿ ಟೊಮೆಟೊ ಕೆಜಿಗೆ 155 ರೂ., ಉತ್ತರ ಪ್ರದೇಶದಲ್ಲಿ 150 ರೂ., ನವದೆಹಲಿಯಲ್ಲಿ 110 ರೂ., ಕೋಲ್ಕತ್ತಾದಲ್ಲಿ 148 ರೂ., ಚೆನ್ನೈನಲ್ಲಿ (ನ್ಯಾಯಬೆಲೆ ಅಂಗಡಿಗಳಲ್ಲಿ) 60 ರೂ.ಗೆ ಟೊಮೆಟೊ ಮಾರಾಟ ಮಾಡಲಾಗುತ್ತಿದೆ.
Web Stories