ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ನೋಡಲು ಚಾಲೆಂಜಿಗ್ ಸ್ಟಾರ್ ದರ್ಶನ್ ಹೆಚ್ಚು ಅವರ ಮನೆಗೆ ಹೋಗುತ್ತಿದ್ದರು.
ಅಂಬರೀಶ್ ಅವರ ಮನೆಗೆ ತಾರೆಯರು ಆಗಾಗ ಹೋಗುತ್ತಿರುತ್ತಾರೆ. ಆದರೆ ಪ್ರಮುಖವಾಗಿ ದರ್ಶನ್ ಅವರು ಅತಿ ಹೆಚ್ಚು ಬಾರಿ ಅಂಬರೀಶ್ ಅವರ ಮನೆಗೆ ಹೋಗಿದ್ದಾರೆ. ಅವರನ್ನು ಹೊರತುಪಡಿಸಿ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹೋಗುತ್ತಿದ್ದರು. ಅಲ್ಲದೇ ಮೋಹನ್ ಬಾಬು, ರಜನಿಕಾಂತ್, ಚಿರಂಜೀವಿ ಬೆಂಗಳೂರಿಗೆ ಬಂದಾಗ ಅವರ ಮನೆಗೆ ಭೇಟಿ ನೀಡುತ್ತಿದ್ದರು. ಆದರೆ ದರ್ಶನ್ ಅವರು ಬಿಡುವು ಇದ್ದಾಗಲೆಲ್ಲಾ ಅಂಬಿ ಮನೆಗೆ ಹೋಗುತ್ತಿದ್ದರು ಎಂದು ಅಂಬರೀಶ್ ಅವರ ಆಪ್ತರಾದ ಸೀನಣ್ಣ ಜೇಳಿದ್ದಾರೆ.
Advertisement
Advertisement
ದರ್ಶನ್ ಅಂಬಿ ಮನೆಯಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದರು. ದರ್ಶನ್ ಅಂಬಿಯ ಮತ್ತೊಂದು ಮಗನಂತೆ ಇದ್ದರು. ಅಂಬಿ, ದರ್ಶನ್‍ಗೆ ಲೇ ಹುಷಾರಾಗಿರು. ಕೆಟ್ಟ ಕೆಲಸ ಮಾಡಬೇಡ ಹಾಗೂ ಕೆಟ್ಟವರ ಜೊತೆ ಸೇರಬೇಡ ಎಂದು ಹೇಳುತ್ತಿದ್ದರು. ಅಣ್ಣ ಅವರ ಮಗ ಅಭಿಷೇಕ್‍ಗೂ ಇದೇ ಮಾತು ಹೇಳುತ್ತಿದ್ದರು. ದರ್ಶನ್ ಅವರು ಕೂಡ ಅಣ್ಣನ ಯಾವುದೇ ಮಾತು ಇಲ್ಲ ಎಂದು ಹೇಳುತ್ತಿರಲಿಲ್ಲ. ಅದು ಸಿನಿಮಾಗೆ ಸಂಬಂಧಿಸಬಹುದು ಅಥವಾ ಅವರ ಖಾಸಗಿ ವಿಷಯಕ್ಕೆ ಸಂಬಂಧಿಸಬಹುದು. ದರ್ಶನ್ ಅವರ ಮಾತನ್ನು ಪಾಲಿಸುತ್ತಿದ್ದರು.
Advertisement
Advertisement
ದರ್ಶನ್ ಶೂಟಿಂಗ್‍ನಲ್ಲಿ ಬ್ಯುಸಿಯಾಗಿ ಮನೆಗೆ ಬರಲು ಆಗದೇ ಇದ್ದಾಗ ಫೋನ್ ಮಾಡುತ್ತಿದ್ದನು. ಕೆಲವೊಮ್ಮೆ ನಾನು ಫೋನ್ ರಿಸೀವ್ ಮಾಡುತ್ತಿದ್ದೆ. ಆಗ ಅವರು ಮೊದಲು ಅಣ್ಣನಿಗೆ ಫೋನ್ ಕೊಡಿ ಎಂದು ಹೇಳಿ ಹೇಗಿದ್ದೀಯಾ ಅಣ್ಣ ಎಂದು ಕೇಳುತ್ತಿದ್ದರು. ಆಗ ಅವರು ‘ನಾನು ಚೆನ್ನಾಗೇ ಇದ್ದೀನಿ. ನನಗೆ ಏನಾಗಿದೆ. ನೀನ್ ಹೇಗೆ ಇದ್ದೀಯಾ. ಎಲ್ಲಿಇದ್ದಿಯಾ ಎಂದು ಕೇಳಿತ್ತಿದ್ದರು. ಹೀಗೆ ಅವರಿಬ್ಬರ ಮಾತು ಶುರುವಾಗುತ್ತಿತ್ತು ಎಂದು ಸೀನಣ್ಣ ತಿಳಿಸಿದ್ದಾರೆ.
ಸದ್ಯ ಅಂಬಿ ನಿಧನರಾಗಿದ್ದಾಗ ದರ್ಶನ್ ಸ್ವೀಡನ್‍ನಲ್ಲಿ ಯಜಮಾನ ಚಿತ್ರದ ಶೂಟಿಂಗ್‍ನಲ್ಲಿದ್ದರು. ನಂತರ ಅಂಬಿ ಅವರ ನಿಧನ ಸುದ್ದಿ ಕೇಳಿ ದರ್ಶನ್ ವಿದೇಶದಲ್ಲಿ ಶೂಟಿಂಗ್ ತಮ್ಮ ಚಿತ್ರದ ಚಿತ್ರೀಕರಣವನ್ನು ನಿಲ್ಲಿಸಿ ಬಹಳ ಅಡೆ ತಡೆಗಳನ್ನು ದಾಟಿ ಬೆಂಗಳೂರಿಗೆ ಲ್ಯಾಂಡ್ ಆಗಿದರು. ಎಚ್‍ಎಎಲ್ ವಿಮಾನ ನಿಲ್ದಾಣದಿಂದ ಕಂಠೀರವ ಸ್ಟೇಡಿಯಂಗೆ ಅಂಬುಲೆನ್ಸ್ ಮೂಲಕ ಮೃತ ಶರೀರ ಬಂದ ಬಳಿಕ ದರ್ಶನ್ ಅಂಬಿ ಅಂತಿಮ ನಮನ ಸಲ್ಲಿಸಿದರು. ಇದೇ ವೇಳೆ ಅಂಬಿ ಮೃತದೇಹಕ್ಕೆ ದರ್ಶನ್ ಹೆಗಲು ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv