ಬೆಂಗಳೂರು: ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ಗುರುವಾರ ನಗರದ ಹೆಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಟ ಪುನೀತ್ ರಾಜ್‍ಕುಮಾರ್ ದಂಪತಿ ಸ್ವಾಗತಿಸಿದರು.
ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಪುನೀತ್ ರಾಜ್‍ಕುಮಾರ್ ಅವರಿಗೆ ಸ್ಯಾಂಡಲ್‍ವುಡ್ ನವರಸನಾಯಕ ಜಗ್ಗೇಶ್ ಅವರು ಸಹಾಯ ಮಾಡಿದ್ದಾರೆ. ಈ ಬಗ್ಗೆ ನಟ ಜಗ್ಗೇಶ್ ತಮ್ಮ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡಿದ್ದಾರೆ.
ನಾನೆ ಈ ಬೇಟಿಗೆ ವ್ಯೆವಸ್ಥೆ ಮಾಡಿಸಿದ್ದು..
ಮಾರ್ಚ17 ಹುಟ್ಟಿದ ನಾವಿಬ್ಬರು ಒಂದೆ
ದಿನ ಬೇಟಿಮಾಡುವ ಉದ್ದೇಶ..
ಅಪ್ಪು ನಮ್ಮ ಯಜಮಾನರ ಮುದ್ದಿನ ಮಗ..ನನ್ನ ನೆಚ್ಚಿನ ಸಹೋದರ.. https://t.co/vKHsHdwsvo
— ನವರಸನಾಯಕ ಜಗ್ಗೇಶ್ (@Jaggesh2) May 4, 2018
“ನಾನೇ ಈ ಭೇಟಿಗೆ ವ್ಯವಸ್ಥೆ ಮಾಡಿಸಿದ್ದು. ಮಾರ್ಚ್ 17 ಹುಟ್ಟಿದ ನಾವಿಬ್ಬರೂ ಒಂದೇ ದಿನ ಭೇಟಿ ಮಾಡುವ ಉದ್ದೇಶ. ಅಪ್ಪು ನಮ್ಮ ಯಜಮಾನರ ಮುದ್ದಿನ ಮಗ. ನನ್ನ ನೆಚ್ಚಿನ ಸಹೋದರ” ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಪುನೀತ್ ರಾಜ್‍ಕುಮಾರ್ ದಂಪತಿ ಅವರನ್ನು ಸ್ವಾಗತ ಕೋರಿ ಡಾ. ರಾಜಕುಮಾರ್ ಆತ್ಮಚರಿತ್ರೆಯನ್ನು ಕಾಣಿಕೆಯಾಗಿ ನೀಡಿದ್ದರು. ಬಳಿಕ ಪುನೀತ್ ರಾಜ್‍ಕುಮಾರ್, ಮೋದಿ ಅವರನ್ನು ಭೇಟಿ ಮಾಡಿದ ಫೋಟೋಗಳನ್ನು ತಮ್ಮ ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಫೋಟೋಗಳನ್ನು ಅಭಿಮಾನಿಗಳು ಕೂಡ ಶೇರ್ ಮಾಡಿ `ಪವರ್ ಮೀಟ್ಸ್ ಪವರ್’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮೋದಿಗೆ ರಾಜ್ ಆತ್ಮ ಚರಿತ್ರೆಯನ್ನು ನೀಡಿದ ಪುನೀತ್ ದಂಪತಿ