ಬೆಂಗಳೂರು: ದೇಶಾದ್ಯಂತ ಕೆಜಿಎಫ್ ತನ್ನ ಹವಾ ಸೃಷ್ಟಿ ಮಾಡಿದೆ. ಚಿತ್ರೀಕರಣದ ಆರಂಭದಿಂದ ಒಂದಿಲ್ಲೊಂದು ವಿಷಯಕ್ಕೆ ಕೆಜಿಎಫ್ ಸದ್ದು ಮಾಡುತ್ತಾ ಬರುತ್ತಿದೆ. ಈಗಾಗಲೇ ಟೀಸರ್ ಮತ್ತು ಟ್ರೇಲರ್ ಬಿಡುಗಡೆ ಆಗಿದ್ದು, ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿ ಆಗುತ್ತಿವೆ. ಆದ್ರೆ ಒಬ್ಬ ಸಾಮಾನ್ಯ ನಾಗರೀಕ ಅಥವಾ ವೀಕ್ಷಕ ‘ಕೆಜಿಎಫ್’ ಸಿನಿಮಾ ಯಾಕೆ ನೋಡಬೇಕೆಂದು ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪ್ರಶಾಂತ್ ನೀಲ್, ತಾಯಿ ಮತ್ತು ಒಂದು ಮಗುವಿನ ಬಾಂಧವ್ಯವನ್ನ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ಟ್ರೇಲರ್ ಮತ್ತು ಟೀಸರ್ ನೋಡಿದವರು 70ರ ದಶಕದ ಅಂತಾನೇ ತಿಳಿದಿರ್ತಾರೆ. ಆದ್ರೆ ತಾಯಿ ಮತ್ತು ಮಗನ ಸೆಂಟೆಮೆಂಟ್ ನಮ್ಮ ಚಿತ್ರದ ಮೂಲ ಕಥೆ ಅಂತಾ ಹೇಳಿದರು.
ನಾನು 1970ರ ಕಾಲದಲ್ಲಿ ಬೆಳೆದವನು. ಅಂದು ಅಮಿತಾಬ್ ಬಚ್ಚನ್ ಅವರ ಸಿನಿಮಾ ನೋಡಿ, ಅವರ ಆ್ಯಕ್ಷನ್, ಗನ್ ಹಿಡಿಯುವ ಶೈಲಿ ಎಲ್ಲವೂ ನನ್ನ ಮೇಲೆ ಪ್ರಭಾವ ಬೀರಿದ್ದವು. ಈ ಎಲ್ಲ ಅಂಶಗಳಿಂದ ನನಗೆ 1970 ಕಾಲಘಟ್ಟದ ಸಿನಿಮಾ ಮಾಡಬೇಕು ಎಂಬ ಯೋಚನೆ ನನಗೆ ಬಂತು. 1970ರಲ್ಲಿಯೇ ಚಿನ್ನದ ಬೆಲೆ ಏರಿಕೆ ಆಯಿತು. ಇದನ್ನೇ ಆಧಾರವಾಗಿಯೇ ಒಂದು ಕಥೆ ರಚನೆ ಆಯ್ತು. ಕಥೆಯನ್ನು ವಿಜಿ ಸರ್ ಮತ್ತು ಯಶ್ ಅವರಿಗೆ ಹೇಳಿದಾಗ ಸ್ವಲ್ಪ ಕಷ್ಟವಾದರೂ ಪರವಾಗಿಲ್ಲ, ಸಿನಿಮಾ ಮಾಡೋಣ ಅಂತಾ ಹೇಳಿದರು.
1970ರ ದಶಕವನ್ನ ಚಿತ್ರಕ್ಕಾಗಿ ಪುನರ್ ನಿರ್ಮಾಣ ಮಾಡಬೇಕಿತ್ತು. ಹಾಗಾಗಿ ಅಂದಿನ ಉಡುಪು, ಮಾತಿನ ಶೈಲಿ, ಜೀವನ ಕ್ರಮ, ಸ್ಥಳ ಆಯ್ಕೆಯ ಬಗ್ಗೆ ರಿಸರ್ಚ್ ಮಾಡಲು ನಮ್ಮ ತಂಡ ಎರಡು ವರ್ಷ ಕೆಲಸ ಮಾಡಿದೆ. ಚಿತ್ರದ ಪ್ರತಿಯೊಂದು ಅಂಶವನ್ನು ಪ್ರಾಯೋಗಿಕವಾಗಿ ಪ್ರಯತ್ನಿಸಲಾಯಿತು. ಫೋಟೋ ಶೂಟ್, ಸ್ಕೆಚ್ ಮಾಡಿ ಎಲ್ಲವನ್ನು 1970ರ ಕಾಲದಂತೆ ನಿರ್ಮಿಸಿಲು ಮಾಡಲು ಚಿತ್ರತಂಡ ಸಾಕಷ್ಟು ಪ್ರಯತ್ನ ಮಾಡಿದೆ ಎಂದು ಪ್ರಶಾಂತ್ ತಿಳಿಸಿದರು.
ಕೆಜಿಎಫ್ ಒಟ್ಟು ಎರಡು ಭಾಗಗಳಲ್ಲಿ ತೆರೆ ಕಾಣಲಿದೆ. ಒಂದು ಕಥೆಯನ್ನು ಎರಡು ಭಾಗಗಳಲ್ಲಿ ಹೇಳುತ್ತಿದ್ದು, 3ನೇ ಭಾಗ ಮಾಡಲು ಕಥೆಯಲ್ಲಿ ಆಸ್ಪದವಿಲ್ಲ. ಮುಂಬೈ, ಬೆಂಗಳೂರು ಮತ್ತು ಕೆಜಿಎಫ್ ಎಂಬ ಮೂರು ಹಂತಗಳಲ್ಲಿ ಕಥೆ ನಡೆಯುತ್ತದೆ. ಹಾಗಾಗಿ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಿಲ್ಲ. ಕೆಜಿಎಫ್ ಬಳಿಕ ಮುಂದೆ ಯಾವ ಸಿನಿಮಾ ಮಾಡಬೇಕೆಂದು ಯೋಚಿಸಿಲ್ಲ. ಚಿತ್ರ ರಿಲೀಸ್ ಬಳಿಕ ಅರು ತಿಂಗಳು ವಿಶ್ರಾಂತಿ ಪಡೆದುಕೊಂಡು ಮುಂದೆ ಪ್ಲಾನ್ ಮಾಡ್ತೀನಿ ಅಂತಾ ಪ್ರಶಾಂತ್ ಸ್ಪಷ್ಟಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews