ಈ ಇಲಿಗೆ ತಾಯಿ ಇಲ್ಲ.. ಇಬ್ಬರು ತಂದೆಯಂದಿರಂತೆ – ಸಲಿಂಗಿಗಳಿಂದ ಜನಿಸುತ್ತವೆ ಜೈವಿಕ ಮಕ್ಕಳು!

Public TV
1 Min Read
Rat 3

ಟೋಕಿಯೋ: ಜೀವಿಗಳ ಸಂತಾನೋತ್ಪತ್ತಿ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಮೊದಲ ಬಾರಿಗೆ ಎರಡು ಗಂಡು ಇಲಿಗಳನ್ನು (Rat) ಉಪಯೋಗಿಸಿ ಸಂತಾನೋತ್ಪತ್ತಿ ಪ್ರಕ್ರಿಯೆ ನಡೆಸಲಾಗಿದೆ.

ಭವಿಷ್ಯದಲ್ಲಿ ಇಬ್ಬರು ಪುರುಷರು ಸೇರಿ ಮಕ್ಕಳನ್ನು ಹೇರಲು ಈ ವಿಧಾನ ಅವಕಾಶ ಮಾಡಿಕೊಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದನ್ನೂ ಓದಿ: ಮಹಿಳಾ ಮಾಡೆಲ್‌ಗಳಿಗೆ ನಿಷೇಧ – ಒಳ ಉಡುಪು ಜಾಹೀರಾತಿಗೆ ಎಂಟ್ರಿ ಕೊಟ್ಟ ಪುರುಷರು

Rat

ಪ್ರಕ್ರಿಯೆ ಹೇಗೆ?
ಜಪಾನ್‌ನ ಕ್ಯುಷು, ಒಸಾಕಾ ವಿವಿಯ (Kyushu University) ತಜ್ಞರು ಮೊದಲು ಇಲಿಯ ಚರ್ಮ ಕಣಗಳನ್ನು ಸಂಗ್ರಹಿಸಿ, ಇಂಡ್ಯೂಸ್ಡ್ ಫ್ಲೋರಿಪೋಟೆಂಟ್ ಸ್ಟೆಮ್ ಕಣಗಳನ್ನು ಸೃಷ್ಟಿಸಲು ಈ ಚರ್ಮಕಣಗಳನ್ನು ಮೂಲ ಕಣಗಳ ಸ್ಥಿತಿಗೆ ಸೇರಿಸಿದ್ದರು. ನಂತರ ಅವುಗಳಿಂದ ವೈ ಕ್ರೋಮೋಸೋಮ್ಸ್ ಬೇರ್ಪಡಿಸಿ ಆ ಸ್ಥಾನದಲ್ಲಿ ಮತ್ತೊಂದು ಎಕ್ಸ್ ಕ್ರೋಮೋಸೋಮ್ಸ್ ಇರಿಸಿದರು.

ಈ ಕಣಗಳನ್ನು ಅಂಡಾಣುಗಳನ್ನಾಗಿ ಪರಿವರ್ತಿಸಿ, ನಂತರ ಈ ಅಂಡಾಣುಗಳನ್ನು ಮತ್ತೊಂದು ಇಲಿಯ ವೀರ್ಯದಲ್ಲಿ ಸೇರಿಸಿದರು. ಈ ವಿಧಾನದಲ್ಲಿ 600 ಪಿಂಡಗಳು ಸೃಷ್ಟಿಯಾದವು. ಇವನ್ನು ಸರೋಗೇಟ್ ಇಲಿಗಳಲ್ಲಿ ಇರಿಸಿದ ನಂತ್ರ ಏಳು ಇಲಿ ಮರಿಗಳು ಹುಟ್ಟಿದ್ದು, ಅವು ಆರೋಗ್ಯವಾಗಿವೆ. ಈ ಇಲಿಗಳಿಗೆ ಜೀವಶಾಸ್ತ್ರದ ಲೆಕ್ಕದಲ್ಲಿ ಹೇಳೋದಾದ್ರೆ ಇಬ್ಬರು ತಂದೆ (ಬಯಾಲಾಜಿಕಲ್ ಫಾದರ್) (Biological Fathers) ಇಲಿಗಳಿವೆ ಎಂದು ಹೇಳಲಾಗಿದೆ.

rAT 2

ಮಾನವ ಕಣಗಳ ಮೇಲೆಯೂ ಈ ವಿಧಾನವನ್ನು ಪ್ರಯೋಗ ಮಾಡುವ ಬಗ್ಗೆ ಇದೀಗ ಪರಿಶೀಲಿಸಲಾಗುತ್ತಿದೆ. ಭವಿಷ್ಯದಲ್ಲಿ ಇಬ್ಬರು ಪುರುಷರು ಸೇರಿಕೊಂಡು ಸಂತಾನೋತ್ಪತ್ತಿ ಮಾಡುವುದಕ್ಕೆ ಈ ವಿಧಾನ ಅವಕಾಶ ಮಾಡಿಕೊಡುವ ಸಂಭವ ಇದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಪಾಕ್ ಇತಿಹಾಸ ಪುಸ್ತಕಗಳಲ್ಲಿ ಭಾರತ, ಹಿಂದೂ ವಿರೋಧಿ ನಿಲುವು – ಪಠ್ಯದಲ್ಲಿ ಗಾಂಧಿ ಹಿಂದೂ ನಾಯಕ ಎಂದು ಪರಿಚಯ

Share This Article
Leave a Comment

Leave a Reply

Your email address will not be published. Required fields are marked *