ಮುಂಬೈ: ಭಾರತೀಯ ಸಿನಿಮಾ ಲೋಕದಲ್ಲಿ ಹೊಸ ಛಾಪನ್ನು ಮೂಡಿಸಿರುವ ಸಿನಿಮಾ ಬಾಹುಬಲಿ. ಸಿನಿಮಾ ಬಿಡುಗಡೆಗೊಂಡು 8 ತಿಂಗಳಾದರೂ ಅಭಿಮಾನಿಗಳು ಮಾತ್ರ ಬಾಹುಬಲಿ ಮೇನಿಯಾದಿಂದ ಇನ್ನೂ ಹೊರ ಬಂದಿಲ್ಲ. ಪದೇ ಪದೇ ನೋಡಬೇಕು ಎನ್ನುವ ಸುಂದರ ಕಥೆಯನ್ನು ಸಿನಿಮಾ ಹೊಂದಿದೆ. ಸಿನಿಮಾದ ಹಾಡುಗಳು ಸಹ ಎಲ್ಲರ ಮನದಲ್ಲಿ ಇನ್ನೂ ಗುಣುಗುಟ್ಟುತ್ತಿವೆ.
ಇಂದು ಯೂಟ್ಯೂಬ್ ನಲ್ಲಿ `ಕಿಂಗ್ಸ್ ಯುನೈಟೈಡ್ ನೇಷನ್’ ಖಾತೆಯಲ್ಲಿ ಜಿಯೋ ಬಾಹುಬಲಿ ಹಾಡಿಗೆ ಸಖತ್ ಡ್ಯಾನ್ಸ್ ಮಾಡಿರುವ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಕಿಂಗ್ಸ್ ಯುನೈಟೈಡ್ ನೇಷನ್ ತಂಡದ ಸದಸ್ಯರು ಕೇವಲ ಮೂರು ನಿಮಿಷಗಳಲ್ಲಿ ರಾಜಮೌಳಿ ಅವರ ಸುಂದರ ಬಾಹುಬಲಿ ಸಿನಿಮಾವನ್ನು ತೋರಿಸಿದ್ದಾರೆ.
Advertisement
Advertisement
ಖಾಸಗಿ ಚಾನೆಲ್ ನಲ್ಲಿ ನಡೆಯುತ್ತಿರುವ `ಡ್ಯಾನ್ಸ್ ಚಾಂಪಿಯನ್ ಶಿಪ್’ ರಿಯಾಲಿಟಿ ಶೋನಲ್ಲಿ ಈ ತಂಡ ಸ್ಪರ್ಧೆ ಮಾಡಿದೆ. ಈ ವೇಳೆ ಶೋಗಾಗಿ ಕಿಂಗ್ಸ್ ತಂಡ ಬಾಹುಬಲಿ ಸಿನಿಮಾದ ಜಿಯೋ ರೇ ಬಾಹುಬಲಿ ಹಾಡನ್ನು ಆಯ್ಕೆ ಮಾಡಿಕೊಂಡಿದೆ. ಬಾಹುಬಲಿಯ ಎರಡನೇ ಭಾಗದ ಕಥೆಯನ್ನು ಸಂಕ್ಷಿಪ್ತವಾಗಿ ಮತ್ತು ಸುಂದರವಾಗಿ ತೋರಿಸಿದೆ. ಬಾಹುಬಲಿ ಸಿನಿಮಾದಲ್ಲಿ ಬರುವ ಆ್ಯಕ್ಷನ್ ಗಳನ್ನು ನಾವು ಹಾಡಿನಲ್ಲಿ ಕಾಣಬಹುದಾಗಿದೆ. ಸಿನಿಮಾದ ಆ್ಯಕ್ಷನ್ ಜೊತೆಗೆ ಡ್ಯಾನ್ಸ್ ಸಹವನ್ನು ನೋಡಬಹುದು.
Advertisement
ಫವರ್ ಫುಲ್ ಡೈಲಾಗ್: ಮೊದಲನೇಯದಾಗಿ ನಾಯಕ ಪ್ರಭಾಸ್, ಅನುಷ್ಕಾ ರನ್ನು ಭೇಟಿಯಾಗುವ ವೇಳೆಯಲ್ಲಿ ನಡೆಯುವ ಆ್ಯಕ್ಷನ್ ಸೀನ್ ಗಳನ್ನು ಅಚ್ಚುಕಟ್ಟಾಗಿ ತೋರಿಸಲಾಗಿದೆ. ನಾಯಕಿ ಸಹೋದರನ ಅರಮನೆ ಮೇಲೆ ದಾಳಿ ನಡೆದಾಗ ಅಲ್ಲಿಯ ಕೆಲ ತುಣುಕುಗಳನ್ನು ಡ್ಯಾನ್ಸ್ ಒಳಗೊಂಡಿದೆ. ಸಿನಿಮಾದ ಮತ್ತೋರ್ವ ಪ್ರಮುಖ ಪಾತ್ರಧಾರಿ ಕಟ್ಟಪ್ಪ ಸಹ ಹಾಡಿನಲ್ಲಿದ್ದಾರೆ. ಹಾಡಿನ ಮಧ್ಯೆ ಬಾಹುಬಲಿ ಹೇಳುವ ಕೆಲವು ಪವರ್ ಫುಲ್ ಡೈಲಾಗ್ ಗಳನ್ನು ಮಿಕ್ಸ್ ಮಾಡಲಾಗಿದೆ.
Advertisement
ಕಟ್ಟಪ್ಪನ ಎಂಟ್ರಿ: ಬಾಹುಬಲಿ ರಾಜಕುಮಾರನಾಗಿದ್ದರೂ, ತನ್ನ ಸೇನಾಧಿಪತಿಯಾಗಿರುವ ಕಟ್ಟಪ್ಪನನ್ನು ತನ್ನ ಸೋದರ ಮಾವನಂತೆ ಕಾಣುತ್ತಿರುತ್ತಾನೆ. ಸಿನಿಮಾದಲ್ಲಿ ಪ್ರಭಾಸ್ ಹೇಳುವ `ಮಾವ ನೀನಿರುವಾಗ ನನ್ನನ್ನು ಯಾರು ಕೊಲ್ಲುತ್ತಾರೆ’ ಎಂಬ ಡೈಲಾಗ್ ಅತ್ಯಂತ ಹೃದಯ ಸ್ಪರ್ಶಿಯಾಗಿ ಹಾಡಿನಲ್ಲಿ ತೋರಿಸಲಾಗಿದೆ. ಅಂತೆಯೇ ಶಿವಗಾಮಿ ಪತಿ ಬಿಜ್ಜಳದೇವ ಮತ್ತು ಮಗ ಬಲ್ಲಾಳದೇವ ಮೂವರು ಬಾಹುಬಲಿಯನ್ನು ಕೊಲ್ಲುವಂತೆ ಕಟ್ಟಪ್ಪನಿಗೆ ಹೇಳುವುದನ್ನು ಅತ್ಯಂತ ಚೊಕ್ಕಟವಾಗಿ ತೋರಿಸಲಾಗಿದೆ.
ಕೋಟೆಯಿಂದ ಬರುವ ಬಾಣಗಳಿಂದ ಬಾಹುಬಲಿ ತಪ್ಪಿಸಿಕೊಳ್ಳುವುದು ಹೀಗೆ ಹಲವು ಸಿನಿಮಾದ ತುಣುಕುಗಳನ್ನು ಡ್ಯಾನ್ಸ್ ನಲ್ಲಿ ತೋರಿಸಲಾಗಿದೆ. ಕೊನೆಗೆ ಕಟ್ಟಪ್ಪ ಬಾಹುಬಲಿಯನ್ನು ಕೊಲ್ಲುವ ದೃಶ್ಯದೊಂದಿಗೆ ಡ್ಯಾನ್ಸ್ ಮುಕ್ತಾಯವಾಗುತ್ತದೆ.
ರಿಯಾಲಿಟಿ ಶೋದ ತೀರ್ಪುಗಾರರಾದ ರೆಮೋ ಡಿಸೋಜಾ ಮತ್ತು ಟೆರೆನ್ಸ್ ತಂಡದ ನೃತ್ಯಗಾರರನ್ನು ಹಾಡಿ ಹೊಗಳಿದ್ದಾರೆ. ಇದೇ ವೇಳೆ ಪ್ರಭುದೇವ ಮತ್ತು ನಟ ವರುಣ್ ಧವನ್ ಇಬ್ಬರೂ ವಿಡಿಯೋ ಮೂಲಕ ತಂಡಕ್ಕೆ ಶುಭಕೋರಿದ್ದಾರೆ. ಈ ಡ್ಯಾನ್ಸ್ ವಿಡಿಯೋ ಶನಿವಾರ ಯೂಟ್ಯೂಬ್ ನಲ್ಲಿ ಅಪ್ಲೋಡ್ ಆಗಿದ್ದು ಇದೂವರೆಗೂ 2.5 ಲಕ್ಷಕ್ಕೂ ಆಧಿಕ ವ್ಯೂವ್ ಗಳನ್ನು ಪಡೆದುಕೊಂಡಿದೆ.