ನವದೆಹಲಿ: ಯುವಕ ಮತ್ತು ಯುವತಿ ತಬ್ಬಿಕೊಂಡ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಚಿತ್ರದಲ್ಲಿ ಯಾರು ಯಾರನ್ನ ತಬ್ಬಿಕೊಂಡಿದ್ದಾರೆ ಎನ್ನುವ ದ್ವಂದ್ವವು ನೋಡುಗರನ್ನು ಕಾಡುತ್ತದೆ.
ಈ ಚಿತ್ರವನ್ನು ಮೇ 24 ರಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಕೇವಲ ಐದು ದಿನಗಳಲ್ಲಿ 1 ಲಕ್ಷಕ್ಕೂ ಅಧಿಕ ಲೈಕ್ ಮತ್ತು 45 ಸಾವಿರ ಬಾರಿ ರೀ ಟ್ವೀಟ್ ಆಗಿದೆ. ಈ ಮೂಲಕ ಅಂತರ್ಜಾಲದಲ್ಲಿ ಬಾರಿ ಸದ್ದು ಮಾಡಿ ರೆಕಾರ್ಡ್ ಮಾಡಿದೆ.
At first i thought he was wearing the heels pic.twitter.com/GSqurm3AcE
— Charles Joseph (@Boom_likean808) May 24, 2018
ಚಿತ್ರ ನೋಡಿದ ಕೆಲವರು ಯುವಕ ಹೈಹೀಲ್ಸ್ ಹಾಕಿಕೊಂಡಿದ್ದಾನೆ. ಚೇರ್ ಮೇಲೆ ಯುವತಿ ಕುಳಿತಿದ್ದು, ಅವಳನ್ನು ಯುವಕ ತಬ್ಬಿಕೊಂಡಿದ್ದಾನೆ ಎಂದು ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದ್ರೆ ಯಾರು ಯಾರನ್ನು ತಬ್ಬಿಕೊಂಡಿದ್ದಾರೆ ಎಂದು ಕಂಡುಹಿಡಿಯುವಲ್ಲಿ ಬಹಳಷ್ಟು ಮಂದಿಯ ಪ್ರಯತ್ನ ವಿಫಲವಾಗಿದೆ. ಹೀಗಾಗಿ ನೀವು ಒಮ್ಮೆ ಗುರುತಿಸಲು ಪ್ರಯತ್ನಿಸಿ.
ಇಲ್ಲಿದೆ ಉತ್ತರ:
ಇದು ನಮ್ಮ ದೃಷ್ಟಿಗೆ ಸವಾಲುವೊಡ್ಡುವ ಚಿತ್ರವಾಗಿದ್ದು, ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ನೀಲಿ ಮಾರ್ಕರ್ ನಿಂದ ಗೆರೆ ಎಳೆದಿರುವುದು ಯುವತಿಯ ದೇಹವಾಗಿದ್ದು, ಹಳದಿ ಮಾರ್ಕರ್ ನಿಂದ ಗೆರೆ ಎಳೆದಿರುವುದು ಯುವಕನ ದೇಹ. ಯುವತಿಯೊಬ್ಬಳು ಯುವಕನನ್ನು ತಬ್ಬಿಕೊಂಡಿರುವುದನ್ನು ನೀವು ಕಾಣಬಹುದು.