ಬೆಂಗಳೂರು: ಕಾರುಗಳಲ್ಲಿರುವ ಏರ್ ಬ್ಯಾಗ್ ನಲ್ಲಿ ಈಗ ಮೊಬೈಲ್ ಅನ್ನು ರಕ್ಷಿಸಲು ಏರ್ ಬ್ಯಾಗ್ ನಿರ್ಮಾಣಗೊಂಡಿದೆ.
ಹೌದು, ಜರ್ಮನಿಯ ವಿದ್ಯಾರ್ಥಿಯೊಬ್ಬ ಮೊಬೈಲ್ ಏರ್‍ಬ್ಯಾಗ್ ಅನ್ನು ಅಭಿವೃದ್ಧಿ ಪಡಿಸಿದ್ದಾನೆ. ಆಲೇನ ವಿಶ್ವವಿದ್ಯಾನಿಲಯದ ಎಂಜಿನಿಯರಿಂಗ್ ವಿದ್ಯಾರ್ಥಿ ಫಿಲಿಪ್ ಪ್ರೆಂಜಲ್ ನೂತನ ಮೊಬೈಲ್ ಏರ್ ಬ್ಯಾಗ್ ತಯಾರಿಸಿದ್ದಾನೆ. ಈತನ ಈ ಸಾಧನೆಗೆ ಜರ್ಮನಿಯ `ಜರ್ಮನ್ ಸೊಸೈಟಿ ಫಾರ್ ಮೆಕಾಟ್ರೋನಿಕ್ಸ್’ ಸಂಸ್ಥೆಯು ಪ್ರಶಸ್ತಿ ನೀಡಿ ಗೌರವಿಸಿದೆ.
Advertisement
ಹೇಗೆ ತೆರೆದುಕೊಳ್ಳುತ್ತೆ?
ಎಂಟು ತೆಳುವಾದ ಮೆಟಲ್ ಸುರುಳಿಗಳ ಸ್ಪ್ರಿಂಗ್ ಅನ್ನು ಹೊಂದಿರುವಂತೆ ಈ ಕೇಸನ್ನು ವಿನ್ಯಾಸಗೊಳಿಸಲಾಗಿದೆ. ಈ ಕೇಸ್‍ನಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಮೊಬೈಲ್ ಫೋನ್ ಬಿದ್ದರೂ, ಯಾವುದೇ ತೊಂದರೆ ಆಗುವುದಿಲ್ಲ. ಮೊಬೈಲ್ ಬೀಳುವಾಗ ಕೇಸ್‍ನಲ್ಲಿರುವ ಸೆನ್ಸರ್ ಅಲರ್ಟ್ ಆಗಿ ಸ್ಪ್ರಿಂಗ್ ಓಪನ್ ಆಗುವಂತೆ ಮಾಡುತ್ತದೆ. ಆಗ ಸ್ಪ್ರಿಂಗ್ ಓಪನ್ ಆಗಿ ಮೊಬೈಲನ್ನು ರಕ್ಷಿಸುತ್ತದೆ.