ಮಲೇಶಿಯಾ: ಈ ಫೋಟೋ ನೋಡಿದ ತಕ್ಷಣ ಯುವತಿ ನೋಡುವುದಕ್ಕೆ ಸುಂದರವಾಗಿದ್ದಾಳೆ ಎಂದು ಎಲ್ಲರೂ ಎಂದುಕೊಳ್ಳುತ್ತಾರೆ. ಆದರೆ ಈ ಸುಂದರವಾಗಿರುವಾಕೆ ಯುವತಿ ಅಲ್ಲ. ಈ ಫೋಟೋ ನೋಡಿ ಯುವತಿ ಎಂದುಕೊಂಡವರು ಸತ್ಯ ತಿಳಿದುಕೊಂಡಾಗ ಬೆಚ್ಚಿಬೀಳುತ್ತಾರೆ.
ಈ ಚಿತ್ರದಲ್ಲಿರುವುದು ಯುವಕನಾಗಿದ್ದು, ಈತನ ಹೆಸರು ಅಬ್ದುಸ್ ಸಲಾಂ ಫಿರ್ದೋಜ್ ಅಜೀಜ್. ಅಬ್ದುಸ್ ಮಲೇಶಿಯಾದಲ್ಲಿ ವಾಸಿಸುತ್ತಿದ್ದು, ಅಲ್ಲಿನ ಕೋಲಾ ಲಮ್‍ಪುರ್ ಯೂನಿರ್ವಸಿಟಿಯಲ್ಲಿ ಓದುತ್ತಿದ್ದಾನೆ. ಅಬ್ದುಸ್‍ನನ್ನು ಮೊದಲ ಬಾರಿ ನೋಡಿದವರು ಆತನನ್ನು ಯುವತಿ ಎಂದುಕೊಳ್ಳುತ್ತಾರೆ. ಆದರೆ ಅಬ್ದುಸ್ ತನ್ನ ಲಿಂಗವನ್ನು ಸಾಬೀತುಪಡಿಸಲು ಐಡಿ ಕಾರ್ಡ್ ತೋರಿಸಬೇಕಾಗುತ್ತದೆ.
Advertisement
Advertisement
ಅಬ್ದುಸ್‍ನ ಮುಖ ಯುವತಿಯ ರೀತಿ ಕಾಣಿಸುತ್ತದೆ. ಹಾಗಾಗಿ ಆತನನ್ನು ಯುವತಿ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಅಬ್ದುಸ್ ತನ್ನ ಪರಿಚಯ ಮಾಡಿಸಿಕೊಳ್ಳಲು ಐಡಿ ಕಾರ್ಡ್ ತೋರಿಸಬೇಕಾಗುತ್ತದೆ. ಈ ಹಿಂದೆ ಅಬ್ದುಸ್ ಫುಟ್ ಬಾಲ್ ಮ್ಯಾಚ್ ನೋಡಲು ಹೋಗಿದ್ದನು. ಈ ವೇಳೆ ಸೆಕ್ಯೂರಿಟಿ ಗಾರ್ಡ್ ಅಬ್ದುಸ್‍ನನ್ನು ಯುವತಿ ಎಂದು ತಿಳಿದು ಆತನನ್ನು ಪರಿಶೀಲಿಸಲು ನಿರಾಕರಿಸಿದ್ದರು. ಆಗ ಅಬ್ದುಸ್ ತನ್ನ ಲಿಂಗವನ್ನು ಸಾಬೀತುಪಡಿಸಲು ಐಡಿ ಕಾರ್ಡ್ ತೋರಿಸಿದ್ದಾನೆ.
Advertisement
Advertisement
ಅಬ್ದುಸ್ ಇದರಿಂದ ಸಾಕಷ್ಟು ಬೇಸರಗೊಂಡಿದ್ದನು. ಅಲ್ಲದೇ ತನಗಾಗುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ಆತ ತನ್ನ ಉದ್ದ ಕೂದಲನ್ನು ಕೂಡ ಕತ್ತರಿಸಿಕೊಂಡಿದ್ದನು. ಕೂದಲು ಕತ್ತರಿಸಿದ ಬಳಿಕ ಆತನಿಗೆ ಸಮಸ್ಯೆ ಕಡಿಮೆಯಾಗಲಿಲ್ಲ. ಬದಲಿಗೆ ಆತನನ್ನು ಟಾಮ್ ಬಾಯ್ ಎಂದು ಕರೆಯುತ್ತಿದ್ದರು. ಕೆಲವರು ಅಬ್ದುಸ್‍ನನ್ನು ಮೀಸೆ, ಗಡ್ಡ ಬಿಡು ಎಂದು ಸಲಹೆ ನೀಡಿದರು. ಆದರೆ ಗಡ್ಡ, ಮೀಸೆ ಬಿಟ್ಟರೆ ಕ್ಯಾಟ್‍ಫೀಶ್ ರೀತಿ ಕಾಣಿಸುತ್ತೇನೆ ಎಂದು ಅಬ್ದುಸ್ ಅವರ ಸಲಹೆಯನ್ನು ನಿರಾಕರಿಸಿದ್ದಾನೆ.
ಅಬ್ದುಸ್ ತನ್ನ ಮುಖದಿಂದ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಯಾಗುತ್ತಿದ್ದಾನೆ. ಅಲ್ಲದೇ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಂನಲ್ಲಿ ಆತನಿಗೆ ಫ್ಯಾನ್ ಫಾಲೋವಿಂಗ್ ಹೆಚ್ಚಾಗಿದ್ದಾರೆ. ಅಬ್ದುಸ್‍ನ ಈ ಸುಂದರವಾದ ಮುಖವನ್ನು ‘ವಲ್ರ್ಡ್ ಪ್ರೀಟಿಯಸ್ಟ್ ಮೆನ್’ ಎಂದು ಕರೆಯುತ್ತಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv