ಆಲಿಘರ್: 65 ವರ್ಷದ ವ್ಯಕ್ತಿಯ ದೇಹದಲ್ಲಿ ಹೃದಯ ಹಾಗೂ ಶ್ವಾಸಕೋಶದ ಮಧ್ಯೆ ಇದ್ದ 3 ಕೆಜಿ ತೂಕದ ಗೆಡ್ಡೆಯನ್ನು ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
Advertisement
ಆಲಿಘರ್ ನಿವಾಸಿಯಾದ ಹೇಮಂದ್ರ ಗುಪ್ತಾ ಶಸ್ತ್ರಚಿಕಿತ್ಸೆಗೆ ಒಳಗದ ವ್ಯಕ್ತಿ. ಇಲ್ಲಿನ ಎಎಮ್‍ಯು ಮೆಡಿಕಲ್ ಕಾಲೇಜಿನಲ್ಲಿ ಗುರುವಾರದಂದು ವೈದ್ಯರು ಈ ಬಗ್ಗೆ ತಿಳಿಸಿದ್ದಾರೆ. ಇದೊಂದು ಅಪರೂಪದ ಪ್ರಕರಣ. ವ್ಯಕ್ತಿಗೆ ಹುಟ್ಟಿನಿಂದಲೂ ದೇಹದೊಳಗೆ ಗೆಡ್ಡೆ ಇದ್ದು, ಬೆಳೆಯುತ್ತಲಿತ್ತು ಎಂದು ಪ್ರೊಫೆಸರ್ ಎಮ್‍ಹೆಚ್ ಬೇಗ್ ಹೇಳಿದ್ದಾರೆ.
Advertisement
ಬೇಗ್ ಅವರ ನೇತೃತ್ವದಲ್ಲಿ ವೈದ್ಯರ ತಂಡ 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ಗೆಡ್ಡೆಯನ್ನ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
Advertisement
ಹೇಮೇಂದ್ರ ಅವರು ತನ್ನ ದೇಹದಲ್ಲಿ ಗೆಡ್ಡೆ ಇಟ್ಟುಕೊಂಡೇ ಇಷ್ಟು ದಿನ ಬದುಕಿದ್ದರು. ಆದ್ರೆ ಇತ್ತೀಚೆಗೆ ತೀವ್ರ ನೋವು ಕಾಣಿಸಿಕೊಂಡಾಗ ಗೆಡ್ಡೆ ಇರುವ ಬಗ್ಗೆ ಗೊತ್ತಾಗಿದೆ ಎಂದು ಬೇಗ್ ಹೇಳಿದ್ದಾರೆ.
ಹೇಮೇಂದ್ರ ಅವರ ವಯಸ್ಸು ಶಸ್ತ್ರಚಿಕಿತ್ಸೆಗೆ ಸವಾಲಾಗಿತ್ತು ಎಂದು ವೈದ್ಯರ ತಂಡದಲ್ಲಿದ್ದ ಮೊಹಮ್ಮದ್ ಅಜಾಮ್ ಹಸೀನ್ ಹೇಳಿದ್ದಾರೆ.