– ಡೌನ್ ಸಿಂಡ್ರೋಮ್ ಮಗುವನ್ನು ದತ್ತು ಪಡೆದು ಆರೈಕೆ
– ಮಗುವಿನ ಪಾಲನೆಗಾಗಿ ಸಾಫ್ಟ್‌ವೇರ್ ಕೆಲಸ ತೊರೆದ್ರು
ಮುಂಬೈ: ಮಹಾರಾಷ್ಟ್ರದ ಪುಣೆ ಮೂಲದ ಟೆಕ್ಕಿಯೊಬ್ಬರು ‘ವಿಶ್ವದ ಅತ್ಯುತ್ತಮ ಮಮ್ಮಿ’ ಪ್ರಶಸ್ತಿಯನ್ನು ಪಡೆಯುತ್ತಿದ್ದಾರೆ.
ಟೆಕ್ಕಿ ಆದಿತ್ಯ ತಿವಾರಿ 2016ರಲ್ಲಿ ಡೌನ್ ಸಿಂಡ್ರೋಮ್‍ನಿಂದ ಬಳಲುತ್ತಿರುವ ಮಗುವನ್ನು ದತ್ತು ಪಡೆದುಕೊಂಡಿದ್ದರು. ಮಗು ದತ್ತು ಪಡೆಯಲು ಆದಿತ್ಯ ದೀರ್ಘ ಕಾಲ ಕಾನೂನಿನ ಹೋರಾಟ ಕೂಡ ಮಾಡಿ ಗೆಲುವು ಸಾಧಿಸಿದ್ದರು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂದರೆ ಮಾರ್ಚ್ 8ರಂದು ದೇಶಾದ್ಯಂತ ಅನೇಕ ಮಹಿಳೆಯರೊಂದಿಗೆ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಆದಿತ್ಯ ಅವರಿಗೆ ವಿಶ್ವದ ಅತ್ಯುತ್ತಮ ಮಮ್ಮಿ ಎಂಬ ಬಿರುದನ್ನು ನೀಡಲಾಗುತ್ತದೆ.
Advertisement
Advertisement
ಅರೆ ತಾಯಿಗೆ ಪ್ರಶಸ್ತಿ ನೀಡುವುದು ಸಹಜ. ಆದರೆ ತಂದೆಗೆ ‘ಬೆಸ್ಟ್ ಮಮ್ಮಿ’ ಪ್ರಶಸ್ತಿ ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ ತಾಯಿಯ ಕರ್ತವ್ಯವನ್ನು ನಿಭಾಯಿಸುವ ಪ್ರತಿಯೊಬ್ಬ ಪುರುಷನೂ ತಾಯಿಯಂದೇ ಪರಿಗಣಿಸಲಾಗುತ್ತದೆ. ಈ ಕಾರಣಕ್ಕೆ ಆದಿತ್ಯ ತಿವಾರಿ ಅವರು ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಆದಿತ್ಯ, ವಿಶ್ವದ ಅತ್ಯುತ್ತಮ ಮಮ್ಮಿಗಳಲ್ಲಿ ಒಬ್ಬನಾಗಿ ಆಯ್ಕೆಯಾಗಿದ್ದಕ್ಕೆ ಸಂತೋಷವಾಗಿದೆ. ವಿಶೇಷ ಮಗುವನ್ನು ನೋಡಿಕೊಂಡ ನನ್ನ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ. ನಾನು ಸಿಂಗಲ್ ಪೇರೆಂಟ್ ಆಗಿ ಮಗುವನ್ನು ದತ್ತು ಪಡೆದಿದ್ದೇನೆ. 22 ತಿಂಗಳ ಮಗು ಅವನೀಶ್‍ನನ್ನು ದತ್ತು ಪಡೆಯಲು ನಾನು ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೆಲಸ ಕೂಡ ಬಿಟ್ಟೆ. ಇದೀಗ ಭಾರತದಲ್ಲಿ ವಿಶೇಷ ಮಕ್ಕಳ ಪೋಷಕರಿಗೆ ಕೌನ್ಸಲಿಂಗ್ ನೀಡುತ್ತೇನೆ ಹಾಗೂ ಅವರಿಗೆ ಪ್ರೋತ್ಸಾಹ ಮಾಡುತ್ತೇನೆ ಎಂದರು.
Advertisement
ಆದಿತ್ಯ 2016 ಅವನೀಶ್ ದತ್ತು ಪಡೆದುಕೊಂಡಿದ್ದು, ಮಗು ಡೌನ್ ಸಿಂಡ್ರೋಮ್‍ನಿಂದ ಬಳಲುತ್ತಿದೆ. ಸುಮಾರು ಒಂದೂವರೆ ವರ್ಷಗಳ ಕಾಲ ಆದಿತ್ಯ ಕಾನೂನಿನ ಹೋರಾಟ ನಡೆಸಿ ಗೆದ್ದಿದ್ದಾರೆ. ಆದಿತ್ಯ ಅವರ ಈ ನಿರ್ಧಾರವನ್ನು ಅವರ ಕುಟುಂಬಸ್ಥರು ವಿರೋಧಿಸಿದ್ದರು. ಆದರೆ ಇದು ಯಾವುದನ್ನು ಲೆಕ್ಕಿಸದೇ ಆದಿತ್ಯ ಮಗುವನ್ನು ದತ್ತು ಪಡೆದಿದ್ದರು. ಮಗುವಿನ ತಾಯಿ ಆಶ್ರಮದ ಮುಂದೆ ಬಿಟ್ಟು ಹೋಗಿದ್ದಳು. ಆದರೆ ಆದಿತ್ಯ ಮಗುವನ್ನು ತಾಯಿಯಂತೆ ನೋಡಿಕೊಂಡಿದ್ದಾರೆ.
ನಾನು ಹಾಗೂ ಅವನೀಶ್ 22 ರಾಜ್ಯಗಳಲ್ಲಿ ವಾಸವಿದ್ದು, 400 ಸ್ಥಳಗಳಲ್ಲಿ ಮೀಟಿಂಗ್ಸ್, ವರ್ಕ್‍ಶಾಪ್, ಟಾಕ್ಸ್ ಹಾಗೂ ಕಾನ್ಫರೆನ್ಸ್ ಮಾಡಿದ್ದೇನೆ. ಭಾರತದಾದ್ಯಂತ 10,000 ಪೋಷಕರ ಜೊತೆ ನಾವು ಸೇರಿದ್ದೇವೆ. ಈ ಸಂದರ್ಭದಲ್ಲಿ ವಿಶೇಷ ಮಕ್ಕಳನ್ನು ನಿಭಾಯಿಸುವ ಬಗ್ಗೆ ಮಾತನಾಡಬೇಕಾದ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ವಿಶ್ವಸಂಸ್ಥೆಯಿಂದ ನಮ್ಮನ್ನು ಕರೆಯಲಾಯಿತು ಎಂದು ತಿಳಿಸಿದ್ದಾರೆ.