ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಸುದ್ದಿ ವಾಹಿನಿಯೊಂದರ ಕಚೇರಿಯಲ್ಲಿ ಹಾವು ಕಾಣಿಸಿಕೊಂಡಿದ್ದು ಅದನ್ನ ಸಿಬ್ಬಂದಿಯೊಬ್ಬರು ಅತ್ಯಂತ ಸಲುಭವಾಗಿ ಹಿಡಿದಿರೋ ವಿಡಿಯೋ ಇದೀಗ ಇಂಟರ್ನೆಟ್‍ನಲ್ಲಿ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. 9 ನ್ಯೂಸ್ ಡಾರ್ವಿನ್ ವಾಹಿನಿ ಫೇಸ್‍ಬುಕ್‍ನಲ್ಲಿ ಇದರ ವಿಡಿಯೋವನ್ನ ಅಪ್‍ಲೋಡ್ ಮಾಡಿದೆ.
Advertisement
ಸೋಮವಾರದಂದು ಕಚೇರಿಯ ಎಡಿಟಿಂಗ್ ವಿಭಾಗದಲ್ಲಿ ಕಂಪ್ಯೂಟರ್ ಟೇಬಲ್ ಮೇಲೆ ಹಾವು ಇದ್ದಿದ್ದನ್ನು ಮೊದಲಿಗೆ ಕ್ಯಾಮೆರಾಮ್ಯಾನ್ ನೋಡಿದ್ದರು. ನಂತರ ಹಾವುಗಳನ್ನ ಹಿಡಿಯೋದ್ರಲ್ಲಿ ಅನುಭವ ಹೊಂದಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಬಂದು ಸುಮಾರು 6 ಅಡಿ(2 ಮೀಟರ್) ಉದ್ದವಿದ್ದ ಹಾವನ್ನ ಹಿಡಿದರು ಎಂದು ಫೇಸ್ ಬುಕ್‍ನಲ್ಲಿ ವಿವರಿಸಲಾಗಿದೆ.
Advertisement
Advertisement
ಆ ಮಹಿಳೆ ಒಂದಿಷ್ಟೂ ಭಯ ಪಡದೆ ಒಂದು ತಂತಿಯಲ್ಲಿ ಸ್ಪೀಕರ್ ಹಿಂದಿದ್ದ ಹಾವನ್ನ ಎಳೆದು ಬ್ಯಾಗ್‍ನೊಳಗೆ ಹಾಕಿದ್ದಾರೆ. ಈ ವೇಳೆ ಆ ಹಾವು ಒದ್ದಾಡೋದು ನೋಡಿದ್ರೆ ಒಂದು ಕ್ಷಣ ಎಂಥವರಿಗೂ ಮೈ ಜುಮ್ಮೆನದೇ ಇರದು.
Advertisement
ಈ ವಿಡಿಯೋವನ್ನ ನ್ಯೂಸ್ ಡೈರೆಕ್ಟರ್ ಕೇಟ್ ಲೈಮನ್ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು, ಟ್ವಿಟ್ಟರಿಗರು ತಮಾಷೆಯಾಗಿ ಇದಕ್ಕೆ ಕಮೆಂಟ್‍ಗಳನ್ನ ಹಾಕಿದ್ದಾರೆ. ಹಾವನ್ನ ಅರಣ್ಯಕ್ಕೆ ಬಿಡಲಾಗಿದೆ ಎಂದು ಲೈಮನ್ ಹೇಳಿದ್ದಾರೆ.
https://www.youtube.com/watch?v=F91k2fBocg8