ತಮಿಳು ನಟ ಸೂರ್ಯ ಬಗ್ಗೆ ಸುದೀಪ್ ಟ್ವಿಟ್ಟರ್ ನಲ್ಲಿ ಹೇಳಿದ್ದು ಹೀಗೆ!

Public TV
1 Min Read
SUDEEP SURYA COLLAGE

ಬೆಂಗಳೂರು: ತಮಿಳು ಅಭಿಮಾನಿಯೊಬ್ಬರು ಕಿಚ್ಚ ಸುದೀಪ್ ತಮಿಳು ನಟ ಸೂರ್ಯ ಜೊತೆ ಒಂದೇ ವೇದಿಕೆಯಲ್ಲಿ ನಿಂತಿರುವ ವಿಡಿಯೋವೊಂದನ್ನು ಕರುನಾಡ ಕಿಚ್ಚನಿಗೆ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ತಮಿಳು ಸಿನಿಮಾ ಹಾಗೂ ಸೂರ್ಯ ಜೊತೆ ಸಿನಿಮಾ ಮಾಡಬೇಕೆಂದು ಕೋರಿದ್ದಾರೆ.

ಸೂರ್ಯ ನಟಿಸಿದ ಸಿಗಂ-2 ಚಿತ್ರದ ಆಡಿಯೋ ಲಾಂಚ್ ವೇಳೆ ಕಿಚ್ಚ ಸುದೀಪ್ ಆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದರು. ಅಷ್ಟೇ ಅಲ್ಲದೇ ಅವರ ಜೊತೆ ವೇದಿಕೆ ಕೂಡ ಹಂಚಿಕೊಂಡಿದ್ದರು. ಆದರೆ ಈಗ ಆ ವಿಡಿಯೋವನ್ನು ಅಭಿಮಾನಿಯೊಬ್ಬರು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ, ತಮಿಳು ಸಿನಿಮಾಗಳಲ್ಲಿ ಹಾಗೂ ಸೂರ್ಯನ ಜೊತೆ ನಟಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

sudeep surya

ಅಭಿಮಾನಿಯ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಕಿಚ್ಚ, ವಿಡಿಯೋ ನೋಡಿ ಸಂತಸಗೊಂಡಿದ್ದು, ಈ ವಿಡಿಯೋ ಟ್ವೀಟ್ ಮಾಡಿದ್ದಕ್ಕೆ ಧನ್ಯವಾದ ಫ್ರೆಂಡ್. ಸೂರ್ಯ ಅವರು ಗ್ರೇಟ್ ವ್ಯಕ್ತಿ ಹಾಗೂ ನನ್ನ ಆತ್ಮೀಯ ಸ್ನೇಹಿತ. ಅವರ ಜೊತೆ ವೇದಿಕೆ ಹಂಚಿಕೊಂಡಿದ್ದ ಕ್ಷಣ ಅದ್ಭುತವಾಗಿತ್ತು ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

sudeep surya 2

ಕಿಚ್ಚ ಸುದೀಪ್ ಕನ್ನಡ ಭಾಷೆಯಲ್ಲದೇ ಬೇರೆ ಬೇರೆ ಭಾಷೆಗಳಲ್ಲಿ ನಟಿಸಿದ್ದು, ಈ ಹಿಂದೆ ತೆಲುಗು ಅಭಿಮಾನಿಯೊಬ್ಬರು ಕಿಚ್ಚ ಅವರಿಗೆ ಟ್ವೀಟ್ ಮಾಡಿ, “ಸುದೀಪ್ ಅಣ್ಣ ನಾನು ಆಂಧ್ರದವನು. ನಿಮ್ಮ ಸಿನಿಮಾಗಳನ್ನು ಹೆಚ್ಚು ಇಷ್ಟ ಪಡುತ್ತೀನಿ. ಅದರಲ್ಲೂ `ಹೆಬ್ಬುಲಿ’ ಅಂದರೆ ನನಗೆ ತುಂಬಾ ಇಷ್ಟ. ದಯವಿಟ್ಟು ತೆಲುಗು ಸಿನಿಮಾ ಮಾಡಿ. ನಾವು ನಿಮ್ಮನ್ನ ಮತ್ತು ನಿಮ್ಮ ಧ್ವನಿಯನ್ನ ಹೆಚ್ಚು ಮಿಸ್ ಮಾಡಿಕೊಳ್ಳುತ್ತಿದ್ದೇವೆ” ಎಂದು ಕೇಳಿಕೊಂಡಿದ್ದರು.

ಆ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಸುದೀಪ್ ”ಒಳ್ಳೆ ಸ್ಕ್ರಿಪ್ಟ್ ಸಿಕ್ಕರೆ ಖಂಡಿತವಾಗಿಯೂ ತೆಲುಗು ಸಿನಿಮಾ ಮಾಡುತ್ತೇನೆ” ಎಂದು ಅಭಿಮಾನಿಯ ಮನವಿಗೆ ಉತ್ತರಿಸಿದ್ದರು.

https://twitter.com/Suriyafan_1/status/977216721571397632

Share This Article
Leave a Comment

Leave a Reply

Your email address will not be published. Required fields are marked *