– ಸಾಮಾಜಿಕ ಜಾಲತಾಣದಲ್ಲಿ ಧರ್ಮ ವಿಜಯ ಸಂಭ್ರಮ
ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ (Dharmasthala Mass Burials) ಎಂದು ಬುರುಡೆ ಬಿಟ್ಟಿದ್ದ ಮಾಸ್ಕ್ ಮ್ಯಾನ್ (Mask Man) ಚಿನ್ನಪ್ಪ ಅಲಿಯಾಸ್ ಚೆನ್ನನನ್ನು ಎಸ್‌ಐಟಿ (SIT) ಬಂಧಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವೀರೇಂದ್ರ ಹೆಗಡೆಯವರು (Veerendra Heggade) ಈ ಮೊದಲು ಅಣ್ಣಪ್ಪ ಸ್ವಾಮಿಯ ಪವಾಡದ ಬಗ್ಗೆ ಮಾತನಾಡಿದ್ದ ವೀಡಿಯೋ ಮತ್ತೆ ವೈರಲ್ ಆಗಿದೆ.
ಹೌದು, ಮಾಸ್ಕ್ ಮ್ಯಾನ್ ಬಂಧನವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳ ಭಕ್ತರು ಧರ್ಮ ವಿಜಯ ಆಚರಿಸುತ್ತಿದ್ದಾರೆ. ಈ ಬೆನ್ನಲ್ಲೇ ವೀರೇಂದ್ರ ಹೆಗಡೆಯವರು ಅಣ್ಣಪ್ಪ ಸ್ವಾಮಿಯ (Annappa Swamy) ಪವಾಡದ ಬಗ್ಗೆ ಈ ಮೊದಲು ಮಾತನಾಡಿದ್ದ ವೀಡಿಯೋ ಮತ್ತೆ ವೈರಲ್ ಆಗುತ್ತಿದೆ. ಇದು ಅಣ್ಣಪ್ಪ ಸ್ವಾಮಿಯ ಸತ್ಯ ದರ್ಶನ ಎಂಬ ಹೆಗಡೆಯವರ ಮಾತು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಮುಸುಕುಧಾರಿ ಮುಖ್ಯ ಅಲ್ಲ, ಇದರ ಹಿಂದೆ ಇರೋರು ಯಾರು ಅಂತ ತನಿಖೆ ಆಗ್ಬೇಕು: ಅಶೋಕ್
ಹೆಗಡೆಯವರು ಹೇಳಿದ್ದೇನು?
ಧರ್ಮಸ್ಥಳದಲ್ಲಿ ಮಂಜುನಾಥ ಅನುಗ್ರಹ ನೀಡುವ ದೇವರು. ಮಂಜುನಾಥನಿಗೆ ಕೋಪ ಬರಲ್ಲ, ಆದ್ರೆ ಅಣ್ಣಪ್ಪ ಸ್ವಾಮಿ ಕೋಪಿಷ್ಟ. ಅನ್ಯಾಯಿಗಳನ್ನು ಅಧರ್ಮಿಗಳನ್ನು ಶಿಕ್ಷಿಸದೇ ಅಣ್ಣಪ್ಪ ಬಿಡಲ್ಲ. ಧರ್ಮದೇವತೆಗಳ ಬಂಟ ಅಣ್ಣಪ್ಪ ಸ್ವಾಮಿಯ ಪವಾಡವಿದು. ಅಣ್ಣಪ್ಪ ಸ್ವಾಮಿ ಧರ್ಮಸ್ಥಳ ದೇಗುಲದ ಕಾವಲುಗಾರ ಅನ್ನೋ ನಂಬಿಕೆಯಿದೆ ಎಂದು ಈ ಹಿಂದೆ ಹೆಗಡೆಯವರು ಹೇಳಿದ್ದರು. ಇದನ್ನೂ ಓದಿ: 10 ದಿನಗಳ ಎಸ್‌ಐಟಿ ಕಸ್ಟಡಿಗೆ ಬುರುಡೆ ಚಿನ್ನಯ್ಯ