Connect with us

Bollywood

ನ್ಯೂಯಾರ್ಕ್ ನಲ್ಲಿ ಐಸಿಸ್ ದಾಳಿ: ಅಪಾಯದಿಂದ ಪ್ರಿಯಾಂಕಾ ಚೋಪ್ರಾ ಪಾರು

Published

on

ನ್ಯೂಯಾರ್ಕ್: ಪಿಕಪ್ ವಾಹನ ಹರಿಸಿ 8 ಜನರನ್ನು ಹತ್ಯೆಗೈದ ಉಗ್ರನ ಕೃತ್ಯ ನಟಿ ಪ್ರಿಯಾಂಕಾ ಚೋಪ್ರಾ ವಾಸವಿರುವ ಮನೆಯ 5 ಬ್ಲಾಕ್ ದೂರದಲ್ಲಿ ನಡೆದಿದೆ.

ಕೆಲಸ ಮುಗಿಸಿಕೊಂಡು ಮನೆಯತ್ತ ತೆರಳುತ್ತಿರುವ ವೇಳೆ ಆಂಬುಲೆನ್ಸ್ ಸೈರನ್ ಗಳಿಂದ ಉಗ್ರರ ದಾಳಿ ನಡೆದಿದೆ ಎಂದು ಗೊತ್ತಾಯಿತು. ಈ ದಾಳಿಯನ್ನು ನಾನು ಖಂಡಿಸುತ್ತೇನೆ. ದುರಂತದಲ್ಲಿ ಸಾವನ್ನಪ್ಪಿದ ಕುಟುಂಬದವರಿಗೆ ನನ್ನ ವಿಷಾದ ಎಂದು ಪ್ರಿಯಾಂಕ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಸದ್ಯ ಪ್ರಿಯಾಂಕಾ ಹಾಲಿವುಡ್ ನ ಸಿನಿಮಾ ಮತ್ತು ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದರಿಂದ ಸದ್ಯ ನ್ಯೂಯಾರ್ಕ್ ಸಿಟಿಯಲ್ಲಿ ವಾಸವಾಗಿದ್ದಾರೆ. ಕ್ವಾಂಟಿಕೋ ಸೀಸನ್-3ರಲ್ಲಿ ಶೂಟಿಂಗ್ ನಲ್ಲಿ ಪ್ರಿಯಾಂಕ ಬ್ಯೂಸಿಯಾಗಿದ್ದಾರೆ. ಹಾಲಿವುಡ್ ಚಿತ್ರಗಳ ಬಳಿಕ ಪ್ರಿಯಾಂಕ ಮರಳಿ ಪಿ.ಟಿ.ಉಷಾ ಜೀವನಾಧರಿತ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.

ಘಟನಾ ಸ್ಥಳದಲ್ಲಿ ಅಧಿಕಾರಿಗಳಿಗೆ ದಾಳಿ ನಡೆದ ಸ್ಥಳದಲ್ಲಿ ಇಂಗ್ಲೀಷ್‍ನಲ್ಲಿ ಬರೆದಿರುವ ಒಂದು ನೋಟ್ ಸಿಕ್ಕಿದ್ದು, ಅದರ ಆಧಾರದ ಮೇಲೆ ಐಸಿಸ್ ಉಗ್ರ ಸಂಘಟನೆಗೆ ಸೇರಿದ ವ್ಯಕ್ತಿಯೊಬ್ಬ ಈ ದಾಳಿಯನ್ನು ನಡೆಸಿದ್ದಾನೆ ಎನ್ನುವ ಶಂಕೆ ವ್ಯಕ್ತವಾಗಿದೆ. ಮೂಲಗಳ ಪ್ರಕಾರ, ದಾಳಿಕೋರನನ್ನು 29 ವರ್ಷದ ಸೈಫಲೋಲೋ ಹಬಿಬುಲ್ಲೇವಿಕ್ ಸೈಪೋವ್ ಎಂದು ಗುರುತಿಸಲಾಗಿದೆ. ಈತ ಏಷ್ಯಾದ ಕೇಂದ್ರ ರಾಷ್ಟ್ರವಾದ ಉಜ್ಬೇಕಿಸ್ತಾನ್‍ನ ಪ್ರಜೆಯಾಗಿದ್ದು, 2010ರಲ್ಲಿ ಅಮೆರಿಕಕ್ಕೆ ಬಂದಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಟ್ರಕ್ ಚಾಲಕ ‘ಅಲ್ಲಾಹು ಅಕ್ಬರ್’ ಎಂಬುದಾಗಿ ಚೀರುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪಿಸ್ತೂಲ್ ಹಿಡಿದುಕೊಂಡು ಮತ್ತಷ್ಟು ಜನರನ್ನು ಹತ್ಯೆ ಮಾಡಲು ಮುಂದಾಗುತ್ತಿದ್ದ ವೇಳೆ ಭದ್ರತಾ ಸಿಬ್ಬಂದಿ ಆತನನ್ನು ಸುತ್ತುವರೆದು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

 

https://twitter.com/UAEFraud/status/925615460980211712

https://twitter.com/TheAndroid2011/status/925615353794883584

Click to comment

Leave a Reply

Your email address will not be published. Required fields are marked *