ಹುಬ್ಬಳ್ಳಿ: ಸಿದ್ದರಾಮಯ್ಯನವರಿಗೆ (CM Siddaramaiah) ಇದು ಕೊನೆಯ ವಿಜಯದಶಮಿ. ಈ ವಿಜಯದಶಮಿಯಾದ ಬಳಿಕ ಸಿಎಂ ರಾಜೀನಾಮೆ ನೀಡುತ್ತಾರೆ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ (mahesh Tenginkai) ಹೇಳಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ನಮಗಿರೋ ಮಾಹಿತಿ ಪ್ರಕಾರ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರೆ. ಈಗಾಗಲೇ ಕೆಲವರು ಸಿಎಂ ಸೀಟಿಗೆ ಟವಲ್ ಹಾಕಿದ್ದಾರೆ. ಮುಡಾ ಹಾಗೂ ವಾಲ್ಮೀಕಿ ಹಗರಣದಲ್ಲಿ ಕಾಂಗ್ರೆಸ್ ಸಿಲುಕಿದೆ. ವಿಷಯ ಮರೆಮಾಚಲು ಕಾಂಗ್ರೆಸ್ ಸರ್ಕಾರ ಏನೇನೋ ಮಾಡುತ್ತಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಸ್ವಾತಂತ್ರ್ಯದ ಬಳಿಕ ಮಡಿಕೇರಿ ದಸರಾ ಸಾಗಿ ಬಂದ ಹಾದಿ
ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದಿರೋ ವಿಚಾರವಾಗಿ ಮಾತನಾಡಿ, ನಾವು ಇದನ್ನು ಬಿಡುವುದಿಲ್ಲ. ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಸಭೆ ಮಾಡಿ ಹೋರಾಟದ ಸಿದ್ಧತೆ ಮಾಡುತ್ತೇವೆ. ಪ್ರಿಯಾಂಕ್ ಖರ್ಗೆ ಅವರು ಸಿ.ಟಿ.ರವಿ (C T Ravi) ಅವರ ಕೇಸ್ ವಾಪಸ್ ಪಡೆದಿದ್ದೇವೆ ಅಂತಾರೆ. ಸಿಟಿ ರವಿ ಅವರ ಮೇಲೆ ಯಾವ ಕೇಸ್ ಇರಲಿಲ್ಲ. ಸುಮ್ನೆ ವಿಷಯ ತಿರುಚುವುದಕ್ಕೆ ಹೀಗೆ ಮಾಡುತ್ತಿದ್ದಾರೆ. ರೈತರ ಹೋರಾಟದ ವಿಚಾರ ಬಿಟ್ಟು ಮತ್ತೆ ಎರಡು ಜಿಲ್ಲೆಯಲ್ಲಿ ಬೇರೆ ಯಾವ ಕೇಸ್ ಇರಲಿಲ್ಲ ಎಂದರು. ಇದನ್ನೂ ಓದಿ: ದುಷ್ಟ ಶಕ್ತಿ ಯಾರಾದರೂ ರಾಜ್ಯದಲ್ಲಿ ಇದ್ದಾರೆ ಅಂದರೆ ಅದು ಸಿದ್ದರಾಮಯ್ಯ: ಛಲವಾದಿ ನಾರಾಯಣಸ್ವಾಮಿ