ತುಮಕೂರು: ಜಿಲ್ಲಾಡಳಿತದಿಂದ ಇದೇ ಮೊದಲ ಬಾರಿಗೆ ನಡೆಯುತ್ತಿರುವ ತುಮಕೂರು ದಸರಾ ಆಚರಣೆಯು ಇಂದಿನಿಂದ 10 ದಿನಗಳ ಕಾಲ ನಡೆಯಲಿದ್ದು ಕಾರ್ಯಕ್ರಮಕ್ಕೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ (G Parameshwar) ಚಾಲನೆ ನೀಡಿದ್ದಾರೆ.
ತುಮಕೂರು (Tumakur) ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಜಿ.ಪರಮೇಶ್ವರ್ ಹಾಗೂ ಪತ್ನಿ ಕನ್ನಿಕಾ ಪರಮೇಶ್ವರ್ ಸಮೇತ ಹೋಮದಲ್ಲಿ ಪಾಲ್ಗೊಂಡರು. ಇದನ್ನೂ ಓದಿ: ಇರಾನ್ ತೈಲ ಕೇಂದ್ರಗಳ ಮೇಲೆ ದಾಳಿಗೆ ಇಸ್ರೇಲ್ ಪ್ಲ್ಯಾನ್ – ಜೋ ಬೈಡನ್ ಹೇಳಿದ್ದೇನು?
Advertisement
Advertisement
ಕಾರ್ಯಕ್ರಮದಲ್ಲಿ ಎಲೆರಾಂಪುರ ಹನುಮಂತನಾಥ ಸ್ವಾಮೀಜಿ, ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಟಿ.ಬಿ ಜಯಚಂದ್ರ, ಶಾಸಕ ಜಿ.ಬಿ ಜ್ಯೋತಿಗಣೇಶ್, ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪಂ. ಸಿಇಒ ಪ್ರಭು, ಎಸ್.ಪಿ ಅಶೋಕ್ ಕೆ.ವಿ, ಮಹಾನಗರ ಪಾಲಿಕೆ ಕಮಿಷನರ್ ಅಶ್ವಿಜಾ ಬಿ.ವಿ ಸೇರಿದಂತೆ ಹಲವರು ಭಾಗಿಯಾಗಿದ್ದರು. ಇದನ್ನೂ ಓದಿ: MUDA Scam | ಸಿಎಂ ತಮ್ಮ ಕಾಲಿನ ಮೇಲೆ ಹತ್ತಾರು ಕಲ್ಲು ಹಾಕಿಕೊಂಡು ಔಷಧಿ ಇಲ್ಲದಂತೆ ಮಾಡಿಕೊಂಡಿದ್ದಾರೆ – ಸೋಮಣ್ಣ
Advertisement
Advertisement
ಈ ವೇಳೆ ದಸರಾ ವೇದಿಕೆಯಲ್ಲಿ ಸಿಎಂ ಕುರ್ಚಿಗಾಗಿ ಕೂಗು ಮೊಳಗಿತು. ತುಮಕೂರು ಜಿಲ್ಲೆಗೆ ಸಿಎಂ ಸ್ಥಾನ ಸಿಗಲಿ, ಪರೋಕ್ಷವಾಗಿ ಪರಮೇಶ್ವರ್‌ಗೆ ಸಿಎಂ ಸ್ಥಾನ ಸಿಗಲಿ ಎಂದು ಎಲೆರಾಂಪುರ ಮಠದ ಹನುಮಂತನಾಥ ಸ್ವಾಮಿಜೀ ಹೇಳಿದರು. ಇದನ್ನೂ ಓದಿ: Photo Gallery | ಮಂಗಳೂರಿನಲ್ಲಿ ಕಳೆಗಟ್ಟಿದ ದಸರಾ ಸಂಭ್ರಮ – ಶಾರದಾ ಮಾತೆಗೆ ದಿವ್ಯಾಲಂಕಾರ