ಬೆಂಗಳೂರು: ನಾನು ಇಲ್ಲಿಯವರೆಗೆ 14 ಬಜೆಟ್ ಮಂಡಿಸಿದ್ದೇನೆ. ವಿಪಕ್ಷದಲ್ಲಿ ಒಬ್ಬರೂ ಇಲ್ಲದ ಸಮಯದಲ್ಲಿ ಇದೇ ಮೊದಲ ಬಾರಿ ನಾನು ಉತ್ತರ ಕೊಡುತ್ತಿದ್ದೇನೆ. 1983ರಿಂದ ನಾನು ರಾಜಕೀಯದಲ್ಲಿದ್ದೇನೆ. ವಿಪಕ್ಷ ನಾಯಕರು ಇಲ್ಲದೇ ಇದೇ ಮೊದಲ ಸಲ ಬಜೆಟ್ ಅಧಿವೇಶನ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಬಿಜೆಪಿ (BJP) ವಿರುದ್ಧ ಗುಡುಗಿದ್ದಾರೆ.
ಅಧಿವೇಶನಕ್ಕೆ ವಿಪಕ್ಷ ನಾಯಕರು ಗೈರಾದ ಹಿನ್ನೆಲೆ ಮಾತನಾಡಿದ ಸಿಎಂ, ರಾಷ್ಟ್ರೀಯ ಪಕ್ಷ ಬಿಜೆಪಿಗೆ ಒಬ್ಬ ವಿಪಕ್ಷ ನಾಯಕನ ಆಯ್ಕೆ ಮಾಡಿಕೊಳ್ಳಲು ಆಗುತ್ತಿಲ್ಲ ಎಂದರೆ ಅದು ಪ್ರಜಾಪ್ರಭುತ್ವಕ್ಕೆ ಮಾರಕ. ಬಿಜೆಪಿಯವರಿಗೆ ಸಂಸದೀಯ ವ್ಯವಸ್ಥೆ, ಪ್ರಜಾಪ್ರಭುತ್ವ ವ್ಯವಸ್ಥೆಗಳ ಮೇಲೆ ನಂಬಿಕೆ ಇಲ್ಲ ಎಂದು ಸದನದಲ್ಲಿ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
Advertisement
Advertisement
ಇದೊಂದು ಬಹಳ ದುಃಖದ ವಿಷಯ. ರಾಜ್ಯದ ಇತಿಹಾಸದಲ್ಲಿ ಪ್ರಮುಖವಾದವು ರಾಜ್ಯಪಾಲರ ಭಾಷಣ, ಬಜೆಟ್ ಚರ್ಚೆ ಪ್ರಮುಖ. ಪ್ರತಿಪಕ್ಷ ನಾಯಕನಿಲ್ಲದೇ ಸದನ ನಡೆದದ್ದೇ ಇಲ್ಲ. ನಾನು ಯಾವಾಗಿಂದ ರಾಜಕೀಯದಲ್ಲಿದ್ದೇನೆ, ಅಂದಿನಿಂದ ಸದನವನ್ನು ಹೀಗೆ ನೋಡಿರಲಿಲ್ಲ. ನಾನು ಟೀಕೆ ಮಾಡಿದವರನ್ನೂ ಸ್ವಾಗತಿಸುತ್ತೇನೆ. ಹೊಸಬರು ಬಜೆಟ್ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಅವರು ಚರ್ಚೆ ವೇಳೆ ಸಲಹೆ ಕೊಟ್ಟಿದ್ದಾರೆ. ಚರ್ಚೆಯಲ್ಲಿ ಭಾಗವಹಿಸಿದವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ನೆರೆದವರಿಗೆ ತಿಳಿಸಿದರು. ಇದನ್ನೂ ಓದಿ: ಭಾರತದ ಶ್ರೀಮಂತ ಶಾಸಕರಲ್ಲಿ ಡಿ.ಕೆ. ಶಿವಕುಮಾರ್ ನಂ.1
Advertisement
Advertisement
ಬಿಜೆಪಿಯವರು ಕೋಮುವಾದಿ ಶಕ್ತಿ, ವಿಚ್ಛಿದ್ರಕಾರಿ ಶಕ್ತಿ, ಧರ್ಮ ಧರ್ಮಗಳ ನಡುವೆ ದ್ವೇಷ ಹಬ್ಬಿಸುವ ಶಕ್ತಿ. ಅವರು ಯಾವತ್ತೂ ಅಧಿಕಾರಕ್ಕೆ ಬರಬಾರದು. ಅವರು ಯಾವಾಗಲೂ ವಿಪಕ್ಷವಾಗಿಯೇ ಇರಬೇಕು. ನಾನು ಬಿಜೆಪಿ ಮುಕ್ತ ಭಾರತ ಆಗಲಿ, ಬಿಜೆಪಿ ಮುಕ್ತ ಕರ್ನಾಟಕ ಆಗಲಿ ಅಂತ ಹೇಳಲ್ಲ. ಬಿಜೆಪಿ ಅವನತಿ ಕರ್ನಾಟಕದಿಂದ ಪ್ರಾರಂಭವಾಗಿದೆ. ಬಿಜೆಪಿಯವರು ಮೋದಿ ಮೇಲೆ ಅವಲಂಬನೆ ಆಗಿದ್ದಾರೆ. ಆದರೆ ಮೋದಿಯವರ ಪಾಪ್ಯುಲಾರಿಟಿ ದಿನೇ ದಿನೇ ಮಸುಕಾಗ್ತಿದೆ ಎಂದು ತಿರುಗೇಟು ನೀಡಿದರು.
ಬುಧವಾರ ಬಿಜೆಪಿಯವರು ಅನಾಗರಿಕರ ರೀತಿ ವರ್ತಿಸಿದ್ದಾರೆ. ಅಸಭ್ಯ ಅನ್ನೋದು ಗೌರವಯುತ ಪದ, ಅಸಭ್ಯ ಎಂದು ಕರೆಯಲ್ಲ ನಾನು. ಇವರನ್ನು ಅನಾಗರಿಕರು ಎಂದು ಕರೀತೀನಿ. ಸ್ಪೀಕರ್ ಮೇಲೆ, ಅವರ ಮುಖದ ಮೇಲೆ ಪತ್ರ ಎಸೆದರು. ಮಾರ್ಷಲ್‌ಗಳು ಇಲ್ಲದಿರುತ್ತಿದ್ದರೆ ಸ್ಪೀಕರ್ ಮೇಲೆಯೇ ಬಿಜೆಪಿಯವರು ಹಲ್ಲೆ ಮಾಡುತ್ತಿದ್ದರೇನೋ! ಪಾಪ ರುದ್ರಪ್ಪ ಲಮಾಣಿ ಅವರ ಮುಖ ನಿನ್ನೆಯಿಂದ ಸಪ್ಪೆಯಾಗಿ ಹೋಗಿದೆ. ಹೆದರಬೇಡಿ ಲಮಾಣಿ ಅವರೇ ನಾವಿದ್ದೇವೆ. ಶತಶತಮಾನಗಳಿಂದ ಶೋಷಣೆಗೊಳಪಟ್ಟ ಸಮಾಜದವರು ಲಮಾಣಿ ಎಂದು ಡೆಪ್ಯೂಟಿ ಸ್ಪೀಕರ್ ಮೇಲೆ ಅನುಕಂಪ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿಮಾನ ತುರ್ತು ಭೂಸ್ಪರ್ಶದ ಬಳಿಕ ಸೋನಿಯಾ ಗಾಂಧಿ ಆರೋಗ್ಯ ವಿಚಾರಿಸಿದ ಮೋದಿ
Web Stories