ಪಾಕ್ ಉಗ್ರರ ವಿರುದ್ಧ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರಕ್ಕೆ (Operation Sindoor) ಪ್ರಶಂಸೆ ವ್ಯಕ್ತಪಡಿಸಿರುವ ತಮಿಳು ನಟ ಶಿವಕಾರ್ತಿಕೇಯನ್ (Sivakarthikeyan), ಇದು ನಮ್ಮ ಸೇನೆಯ ನಿಜವಾದ ಮುಖ ಎಂದು ಹೇಳಿಕೊಂಡಿದ್ದಾರೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿದ್ದ ಉಗ್ರರ ದಾಳಿಗೆ ಪ್ರತಿಯಾಗಿ ಪಾಕ್ ನೆಲದಲ್ಲಿರುವ ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ಸೇನೆ ಈ ದಾಳಿ ನಡೆಸಿದೆ. ಆಪರೇಷನ್ ಸಿಂಧೂರ ಹೇಸರಿನ ಈ ಕಾರ್ಯಾಚರಣೆಗೆ ದೇಶಾದ್ಯಂತ ವ್ಯಾಪಕ ಪ್ರಶಂಸೆಗಳು ಬರುತ್ತಿವೆ. ಇದರ ಬೆನ್ನಲ್ಲೇ ನಟ ಶಿವಕಾರ್ತಿಕೇಯನ್ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ಕೇವಲ ಒಂದು ಧ್ಯೇಯವಲ್ಲ ಇದು ಪವಿತ್ರ ಪ್ರತಿಜ್ಞೆ: ಸುದೀಪ್
#OperationSindoor
This is the face of the Indian Army
Jai Hind 🇮🇳🫡
— Sivakarthikeyan (@Siva_Kartikeyan) May 7, 2025
ಕಳೆದ ವರ್ಷ ಬಿಡುಗಡೆಯಾದ ಶಿವಕಾರ್ತಿಕೇಯನ್ ಅಭಿನಯಿಸಿದ್ದ ಅಮರನ್ ಚಿತ್ರದಲ್ಲಿ ಅವರು ಕಮಾಂಡರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೇ ಚಿತ್ರದ ಫೋಟೋವನ್ನು ಅವರ ಟಿಟ್ಟರ್‌ನ ಪ್ರೋಫೈಲ್ ಫೋಟೋ ಆಗಿ ಹಾಕಿಕೊಂಡಿದ್ದಾರೆ. ಇದು ಭಾರತೀಯ ಸೇನೆಗೆ ಹಾಗೂ ಆಪರೇಷನ್ ಸಿಂಧೂರಕ್ಕೆ ಅವರು ನೀಡುವ ಬೆಂಬಲವನ್ನು ಸೂಚಿಸುತ್ತದೆ.
ಆಪರೇಷನ್ ಸಿಂಧೂರಕ್ಕೆ ನಟ ರಜನಿಕಾಂತ್, ವಿಜಯ್ ಸೇರಿದಂತೆ ಚಿತ್ರರಂಗದ ದಿಗ್ಗಜರು ಹೃದಯಸ್ಪರ್ಶಿ ಪೋಸ್ಟ್‌ಗಳನ್ನು ಹಾಕಿ ಬೆಂಬಲ ಸೂಚಿಸಿದ್ದಾರೆ. ತಮಿಳು ಚಲನಚಿತ್ರೋದ್ಯಮವು ರಾಷ್ಟ್ರದ ರಕ್ಷಕರಿಗೆ ಬೆಂಬಲವಾಗಿ ಒಗ್ಗಟ್ಟಿನಿಂದ ನಿಂತಿದೆ ಎಂದು ಈ ಮೂಲಕ ತೋರಿಸಿಕೊಂಡಿದ್ದಾರೆ.
ಭಾರತೀಯ ಸೇನೆ ರಾತ್ರೋ ರಾತ್ರಿ ಪಾಕಿಸ್ತಾನ ಮತ್ತು ಪಾಕ್ ಅಕ್ರಮಿತ ಕಾಶ್ಮೀರದಲ್ಲಿರುವ 9 ಅಡಗುತಾಣಗಳ ಮೇಲೆ ದಾಳಿ ನಡೆಸಿತ್ತು. ಈ ಪ್ರತೀಕಾರದ ದಾಳಿಯಲ್ಲಿ (Pahalgam Terrorist Attack) ನಿಷೇಧಿತ ಮೂರು ಉಗ್ರ ಸಂಘಟನೆಗಳಾದ ಜೈಶ್ ಎ ಮೊಹಮ್ಮದ್, ಲಷ್ಕರ್ ಎ ತೈಬಾ (LET) ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ಪ್ರಧಾನ ಕಚೇರಿಗಳು ಧ್ವಂಸವಾಗಿವೆ. ಇದನ್ನೂ ಓದಿ: ‘ಆಪರೇಷನ್ ಸಿಂಧೂರ’ಗೆ ಜೈ ಹಿಂದ್ ಎಂದ ಮೆಗಾಸ್ಟಾರ್ ಚಿರಂಜೀವಿ