Connect with us

ಕಾಂಗ್ರೆಸ್‍ಗೆ ನಿಜವಾದ ಸತ್ಯಮೇವ ಜಯತೇ ಆಗಿದೆ: ಸುರೇಶ್ ಕುಮಾರ್

ಕಾಂಗ್ರೆಸ್‍ಗೆ ನಿಜವಾದ ಸತ್ಯಮೇವ ಜಯತೇ ಆಗಿದೆ: ಸುರೇಶ್ ಕುಮಾರ್

ಬೆಂಗಳೂರು: ಗೋವಿಂದರಾಜು ಅವರದ್ದು ಎನ್ನಲಾದ ಡೈರಿಯಲ್ಲಿದ್ದ ಸ್ಫೋಟಕ ಮಾಹಿತಿ ಬಹಿರಂಗವಾಗುತ್ತಿದ್ದಂತೆಯೇ ರಾಜ್ಯ ಬಿಜೆಪಿ ನಾಯಕರು ಫುಲ್ ಅಲರ್ಟ್ ಆದರು. ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮುಖಂಡರಾದ ಸುರೇಶ್ ಕುಮಾರ್ ಹಾಗೂ ಅಶ್ವತ್ಥನಾರಾಯಣ ಅವರು ಸುದ್ದಿಗೋಷ್ಠಿ ನಡೆಸಿದರು.

ನಿಜವಾದ ಸತ್ಯಮೇವ ಜಯತೇ ಆಗಿದೆ. ಹುಚ್ಚಾಸ್ಪತ್ರೆಗೆ ಯಾರನ್ನು ಕಳಿಸಬೇಕು ಕಾಂಗ್ರೆಸ್‍ನವರೇ ಹೇಳಲಿ. ಸಿಎಂ ಇದರಿಂದ ತಪ್ಪಿಸಿಕೊಳ್ಳೋಕೆ ಆಗೋದಿಲ್ಲ. ರಾಜ್ಯದ ಜನ ಕಾಂಗ್ರೆಸ್‍ನವರನ್ನು ತಪ್ಪಿಸಿಕೊಳ್ಳಲು ಬಿಡಬಾರದು. ರಾಜ್ಯದ ಹಣವನ್ನ ಕಪ್ಪ ಕಾಣಿಕೆಯನ್ನಾಗಿ ಸಾವಿರ ಕೋಟಿ ಕಾಂಗ್ರೆಸ್ ಹೈಕಮಾಂಡ್‍ಗೆ ಒಪ್ಪಿಸಿದ್ದಾರೆ. ಹೀಗಾಗಿ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಗೋವಿಂದರಾಜು ಅವರಿಗೆ ಟಾಂಗ್ ನೀಡಿದ ಸುರೇಶ್ ಕುಮಾರ್, ಗೋವಿಂದರಾಜು ಅವರು ಆಡಿಟ್ ಆಫೀಸ್‍ನಲ್ಲಿ ಕೆಲಸ ಮಾಡಬಹುದಿತ್ತು. ಬಹಳ ಚೆನ್ನಾಗಿ ಟೈಮು ಡೇಟ್ ಬರೆದಿಟ್ಟಿದ್ದಾರೆ. ಮೋತಿಲಾಲ್ ವೋರಾಗೆ 40 ಕೋಟಿ, ಆರ್.ಜಿ. ಆಫೀಸ್ ಅಂದ್ರೆ ಯಾರಿಗಾದ್ರೂ ಅದು ರಾಹುಲ್ ಗಾಂಧಿ ಕಚೇರಿ ಅಂತಾ ಗೊತ್ತಾಗುತ್ತೆ. ಸಿಎಂ ಈ ಬಗ್ಗೆ ಸಬೂಬು ನೀಡದೇ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು.

Advertisement
Advertisement