ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ 1 ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಕಂಪ್ಲಿ ಶಾಸಕರ ಗಣೇಶ್ ಅವರನ್ನು ಬಿಡದಿ ಪೊಲೀಸರು ಗುಜರಾತ್‍ನ ಸೋಮನಾಥ ದೇವಾಲಯದ ಬಳಿ ಬಂಧಿಸಿದ್ದಾರೆ. ಈ ಬಗ್ಗೆ ಗಣೇಶ್ ಸಹೋದರ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.
ಸತ್ಯ ಅಸತ್ಯತೆಯ ಬಗ್ಗೆ ಇನ್ನೂ ಏನೂ ಹೊರಗಡೆ ಬಂದಿಲ್ಲ. ಇದು ಕೇವಲ ಒಂದು ಸೈಡ್ ಸ್ಟೋರಿಯಾಗಿದೆ. ನಮ್ಮ ಕಡೆಯಿಂದ ಯಾವುದೇ ಹೇಳಿಕೆ ಪಡೆದುಕೊಂಡಿಲ್ಲ. ಗಣೇಶ್ ಕೂಡ ಇನ್ನೂ ಏನೂ ಹೇಳಿಲ್ಲ ಎಂದು ಹೇಳಿದ್ದಾರೆ.
Advertisement
ಆತ ಕಾನೂನು ರೀತಿಯಲ್ಲಿ ಗೌರವ ಕೊಡಲೇ ಬೇಕು. ಆಗಿರುವಂತಹ ಸತ್ಯವನ್ನು ಹೇಳಿಕೊಳ್ಳಲು ನಮಗೆ ಇಂದಿನವರೆಗೂ ಅವಕಾಶ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬರೋಬ್ಬರಿ ಒಂದು ತಿಂಗ್ಳ ಬಳಿಕ ಶಾಸಕ ಗಣೇಶ್ ಸಿಕ್ಕಿಬಿದ್ದಿದ್ದು ಹೇಗೆ?
Advertisement
Advertisement
ಯಾವುದೇ ಒಂದು ಘಟನೆಯ ಬೇಕಂದ್ರೆ ಅದು ಒಬ್ಬರಿಂದ ಸಾಧ್ಯವಿಲ್ಲ. ಆನಂದ್ ಸಿಂಗ್ ಅವರು ವಿಜಯನಗರ ಕ್ಷೇತ್ರಕ್ಕೆ 3 ಬಾರಿ ಆಯ್ಕೆಯಾಗಿದ್ದಾರೆ. ಹೀಗಾಗಿ ಅವರು ಹಿರಿಯರು. ಅವರು ಆಗಿರುವಂತಹ ಘಟನೆಯ ಬಗ್ಗೆ ಹೇಳಿದ್ರೆ ರೆಸಾರ್ಟ್ ನಲ್ಲಿ ಇಬ್ಬರೂ ಮದ್ಯಪಾನ ಸೇವಿಸಿದ್ದಾರೆ. ತಲೆಗೆ ಏಟು ಆಗಿರುವಂತದ್ದು ಕೂಡ ನಿಜ. ಆದ್ರೆ ಅಂತಹ ಓರ್ವ ದೊಡ್ಡ ವ್ಯಕ್ತಿಗೆ ಗಣೇಶ್ ಹೊಡೆದಿದ್ದಾರೆ ಅಂದ್ರೆ ಅದಕ್ಕೆ ಕಾರಣ ಇದ್ದೇ ಇರುತ್ತದೆ ಎಂದು ಹೇಳಿದ್ರು. ಇದನ್ನೂ ಓದಿ: ಶಾಸಕ ಗಣೇಶ್ ರನ್ನು ಬೆಂಗ್ಳೂರಿಗೆ ಕರೆತಂದ ಪೊಲೀಸರು!
Advertisement
ಮನುಷ್ಯನ ಸ್ವಾಭಿಮಾನಕ್ಕೆ ಧಕ್ಕೆ ಬರುವಂತಹ ಮಾತು ಹೇಳಿದ್ರೆ ಇದ್ದೂ ಸತ್ತಂಗೆ ಅಲ್ವ. ಆ ರೀತಿ ಅವರು ಕೂಡ ಮಾತನಾಡಬಾರದು. ಅವರೊಬ್ಬರು ಹಿರಿಯರು, ಗೌರವ ಸ್ಥಾನದಲ್ಲಿ ಇರುವವರು. ಅವರು ಯಾಕೆ ಆ ರೀತಿ ಮಾತಾಡಬೇಕು ಎಂದು ಪ್ರಶ್ನಿಸಿದ್ರು.
ಕಂಪ್ಲಿ ಕ್ಷೇತ್ರದ ಜನ ಗಣೇಶ್ ಅವರಿಗೆ ನ್ಯಾಯ ಕೊಟ್ಟಿದ್ದಾರೆ. ಅಧಿಕಾರ ಕೊಟ್ಟಿದ್ದಾರೆ. ಆದ್ರೆ ಗಣೇಶ್ ಅವರು ಕ್ಷೇತ್ರದ ಜನತೆಗೆ ಮೋಸ ಮಾಡಿಲ್ಲ. ರೆಸಾರ್ಟ್ ನಲ್ಲಿ ಆಗಿರುವುದು ವೈಯಕ್ತಿಕ ವಿಚಾರ. ಆನಂದ್ ಸಿಂಗ್ ಹಾಗೂ ಗಣೇಶ್ ಜಗಳಕ್ಕೆ ಕಾರಣ ಭೀಮಾ ನಾಯ್ಕ್. ಆದ್ರೆ ಇಲ್ಲಿ ಅವರ ಬಗ್ಗೆ ಒಂದು ಚಕಾರವೇ ಎತ್ತದಿರುವುದು ಬೇಸರದ ಸಂಗತಿಯಾಗಿದೆ ಎಂದರು.
https://www.youtube.com/watch?v=SgEiX7OC5ak
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv