ಮಾಸ್ಕೋ: ಭಾರತದ (India) ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ (S Jaishankar) ಅವರು ಇಂದು ರಷ್ಯಾಗೆ (Russia) ಭೇಟಿ ನೀಡಿದ್ದು, ಅಲ್ಲಿ ರಷ್ಯಾ ಉಕ್ರೇನ್ (Ukraine) ಮೇಲೆ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆ ಬಗ್ಗೆ ಮಾತನಾಡಿ, ಇದು ಯುದ್ಧದ (War) ಸಮಯವಲ್ಲ ಎಂದು ಪುನರುಚ್ಚರಿಸಿದ್ದಾರೆ.
ರಷ್ಯಾದ ರಾಜಧಾನಿ ಮಾಸ್ಕೋಗೆ (Moscow) ತೆರಳಿದ ಜೈಶಂಕರ್ ಅವರು ಇಂದು ತಮ್ಮ ಸಹವರ್ತಿ ಸರ್ಗೆ ಲಾವ್ರೋ (Sergey Lavrov) ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಜೈಶಂಕರ್, ಅಂತಾರಾಷ್ಟ್ರೀಯ ಪರಿಸ್ಥಿತಿಗೆ ಸಂಬಂಧಿಸಿದಂತೆ, ಕಳೆದ ಕೆಲವು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕ, ಹಣಕಾಸಿನ ಒತ್ತಡಗಳು ಮತ್ತು ವ್ಯಾಪಾರದ ತೊಂದರೆಗಳಿಂದ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಆದರೆ ಇದೀಗ ಮತ್ತೆ ಉಕ್ರೇನ್‌ನೊಂದಿಗಿನ ಸಂಘರ್ಷದ ಪರಿಣಾಮವನ್ನು ನೋಡುತ್ತಿದ್ದೇವೆ ಎಂದು ಹೇಳಿದರು.
Advertisement
Advertisement
ಭಯೋತ್ಪಾದನೆ ಮತ್ತು ಹವಾಮಾನ ಬದಲಾವಣೆ ಹೆಚ್ಚು ದೀರ್ಘಕಾಲಿಕ ಸಮಸ್ಯೆಗಳು. ಇವೆರಡೂ ಪ್ರಗತಿ ಮತ್ತು ಸಮೃದ್ಧಿಯ ಮೇಲೆ ಭೀಕರ ಪರಿಣಾಮವನ್ನು ಬೀರುತ್ತವೆ. ನಮ್ಮ ಮಾತುಕತೆಗಳು ಒಟ್ಟಾರೆಯಾಗಿ ಜಾಗತಿಕ ಪರಿಸ್ಥಿತಿ ಮತ್ತು ನಿರ್ದಿಷ್ಟ ಪ್ರಾದೇಶಿಕ ಕಾಳಜಿಯನ್ನೇ ವಹಿಸುತ್ತದೆ ಎಂದು ವಿದೇಶಾಂಗ ಸಚಿವರು ಹೇಳಿದರು. ಇದನ್ನೂ ಓದಿ: ಅಕ್ರಮ ಆಸ್ತಿ ಮಾಡಿದ್ದಾರೆಂಬ ವೈರಲ್ ಸುದ್ದಿ ವಿರುದ್ಧ ಹೆಚ್.ಆರ್.ರಂಗನಾಥ್ ದೂರು
Advertisement
ಭಾರತ ಮತ್ತು ರಷ್ಯಾ ವಿವಿಧ ಹಂತಗಳಲ್ಲಿ ಬಲವಾದ ಮತ್ತು ನಿರಂತರ ಸಂಪರ್ಕವನ್ನು ನಿರ್ವಹಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ಸಮರ್ಕಂಡ್‌ನಲ್ಲಿ ಭೇಟಿಯಾಗಿದ್ದಾರೆ. ಉಕ್ರೇನ್‌ನೊಂದಿಗಿನ ಯುದ್ಧದ ನಡುವೆಯೂ ಭಾರತ ರಷ್ಯಾದಿಂದ ತೈಲವನ್ನು ಖರೀದಿಸುತ್ತಿದೆ. ಆದರೆ ಇದು ಪಾಶ್ಚಿಮಾತ್ಯರ ಅಸಮಾಧಾನಕ್ಕೆ ಕಾರಣವಾಗಿದ್ದು, ರಷ್ಯಾದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವಂತೆ ಒತ್ತಡವನ್ನೂ ಹಾಕಿದೆ ಎಂದರು.
Advertisement
???????????????????? #Jaishankar: I believe this is the fifth time we are meeting this year. I think that speaks of our long term partnership and the importance that we attach to each other. And I am really glad to be here today in #Moscow to carry forward this dialogue. https://t.co/TTiHjl4q1s pic.twitter.com/0CLMuxnDJM
— Russia in India ???????? (@RusEmbIndia) November 8, 2022
ರಷ್ಯಾದ ತೈಲ ಖರೀದಿಯನ್ನು ಮಿತಿಗೊಳಿಸುವಂತೆ ಪಶ್ಚಿಮದ ಕರೆಗಳ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, ನಮಗೆ ಇಂಧನ ಮಾರುಕಟ್ಟೆಯ ಮೇಲೆ ನಿಜವಾಗಿಯೂ ಒತ್ತಡವಿದೆ. ತೈಲ ಮತ್ತು ಅನಿಲದ ಮೂರನೇ ಅತಿದೊಡ್ಡ ಗ್ರಾಹಕವಾಗಿರುವ ಭಾರತದಲ್ಲಿ ಆದಾಯ ಕಡಿಮೆಯಿರುವುದರಿಂದ ನಾವು ಕೈಗೆಟಕುವ ಮೂಲಗಳನ್ನು ಹುಡುಕಬೇಕಾಗಿದೆ. ಆದ್ದರಿಂದ ಭಾರತ ಹಾಗೂ ರಷ್ಯಾದ ಸಂಬಂಧ ಅನುಕೂಲಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದೆ. ನಾವು ಅದನ್ನು ಹೀಗೆಯೇ ಮುಂದುವರಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಟ್ವಿಟ್ಟರ್ ಖಾತೆ ಬ್ಲಾಕ್ ಆದೇಶ ರದ್ದು – ಕೆಜಿಎಫ್ ಹಾಡು ಬಳಸಿದ್ದ ಕಾಂಗ್ರೆಸ್‌ಗೆ ಬಿಗ್ ರಿಲೀಫ್