ಬೆಂಗಳೂರು: ಮಂಡ್ಯ ಲೋಕಸಭಾ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಅನುಭವ ಹಾಗೂ ಅರ್ಹತೆ ಇಲ್ಲ ಎಂದು ಬೆಂಗಳೂರು ಕೇಂದ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಹೇಳಿದ್ದಾರೆ.
ಬೆಂಗಳೂರು ಪ್ರೆಸ್‍ಕ್ಲಬ್ ನಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಖಿಲ್‍ಗೆ ಅನುಭವ ಹಾಗೂ ಅರ್ಹತೆ ಇಲ್ಲ. ನಿಖಿಲ್ ಯುವಕ ಅಂದ್ರೆ ಇದು ರನ್ನಿಂಗ್ ರೇಸ್ ಕಾಂಪಿಟೇಶನ್ ಅಲ್ಲ. ಅರ್ಹತೆ ಅಂದರೆ ವಯಸ್ಸಲ್ಲ, ಅವರ ನಡೆ, ಮಾತು, ಅನುಭವ ಮುಖ್ಯ. ಅರ್ಹತೆ ಇದ್ದರೆ ಕುಟುಂಬ ರಾಜಕಾರಣ ಆಗಲ್ಲ. ಅರ್ಹತೆ ಇಲ್ಲದಿದ್ದರೆ ಅದು ಕುಟುಂಬ ರಾಜಕಾರಣ ಆಗುತ್ತೆ ಎಂದರು.
ಸುಮಲತಾ ಅವರ ಬಗ್ಗೆ ಮಾತನಾಡಿದ ಅವರು, ಸುಮಲತಾ ಅವರಿಗೆ ರಾಜಕೀಯದ ಬಗ್ಗೆ ಗೊತ್ತಿದೆ, ಅವರು ಗೆಲ್ಲಬೇಕು. ನಿಖಿಲ್ ಗೆ ಅನುಭವ ಇಲ್ಲ. ಸುಮಲತಾ ಸ್ಪರ್ಧೆ ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿದೆ. ಸುಮಲತಾಗಿಂತ ಯೋಗ್ಯ ಅಭ್ಯರ್ಥಿ ಎದುರಾಳಿ ಆಗಿದ್ದರೆ ಅವರನ್ನು ಬೆಂಬಲಿಸಬಹುದಿತ್ತು ಎಂದು ಹೇಳಿದರು.