‘ಬಿಗ್ ಬಾಸ್ ಕನ್ನಡ 12 ಗ್ರಾಂಡ್ ಫಿನಾಲೆ’ ಮುಕ್ತಾಯಕ್ಕೆ ಕೆಲವೇ ಕ್ಷಣಗಳು ಬಾಕಿಯಿದ್ದು, ಈಗಾಗಲೇ 3ನೇ ರನ್ನರ್‌ಅಪ್ ಆಗಿ ಕಾವ್ಯ ಶೈವ (Kavya Shaiva) ಮನೆಯಿಂದ ಹೊರಬಂದಿದ್ದಾರೆ.
ಹೊರ ಬಂದ ಕಾವ್ಯಗೆ ಬಿಗ್ ಬಾಸ್ ವೇದಿಕೆಯಲ್ಲಿ ಕೊನೇ ಮಾತುಗಳನ್ನಾಡೋಕೆ ಅವಕಾಶ ನೀಡಲಾಗಿತ್ತು. ಈ ವೇಳೆ ಮನಬಿಚ್ಚಿ ಮಾತನಾಡಿದ ಕಾವ್ಯ, ಗಿಲ್ಲಿ ಮತ್ತು ತನ್ನ ಬಗ್ಗೆ ಆಗಿದ್ದ ಪ್ರಚಾರಗಳಿಗೆ ಕ್ಲ್ಯಾರಿಟಿ ಕೊಟ್ಟರು. ಇದನ್ನೂ ಓದಿ: BBK Season 12 | 3ನೇ ರನ್ನರ್‌ಅಪ್ ಕಾವ್ಯ ಶೈವ ಔಟ್ – ಸಿಕ್ಕ ಬಹುಮಾನ ಎಷ್ಟು?

ಗಿಲ್ಲಿ ನನ್ನ ಹೆಸರು ಹೇಳಿದಾಗಷ್ಟೇ ಕಾಣಿಸಿಕೊಂಡು ಬರೋಕೆ ಇದು ಕಪಲ್ ಶೋ ಅಲ್ಲ. ಅಥವಾ ಅಶ್ವಿನಿ ಮೇಡಂ ವಿಷಯದಲ್ಲಿ ಮಾತ್ರ ಮಾತಾಡಿದ್ರೆ ಜನ ಹೊರಗೆ ಕಳಿಸ್ತಿದ್ರು. ಎಲ್ಲಾ ಕಡೆ ಜೋರಾಗಿ ಮಾತಾಡಬೇಕು ಅನ್ನೋ ಅವಶ್ಯಕತೆಯೂ ಇರಲಿಲ್ಲ. ಎಲ್ಲಿ ಜೋರಾಗಿ ಹೇಳ್ಬೇಕೋ ಅಲ್ಲಿ ಹೇಳ್ತಿದ್ದೆ, ಎಲ್ಲಿ ಮೆಲ್ಲಗೆ ಹೇಳ್ಬೇಕೋ ಅಲ್ಲಿ ಮೆಲ್ಲಗೆ ಹೇಳ್ತಿದ್ದೆ ಎಂದು ಸ್ಪಷ್ಟಪಡಿಸಿದ್ರು. ಮುಂದುವರಿದು… ನನ್ನನ್ನ 4ನೇ ಸ್ಥಾನಕ್ಕೆ ತಂದು ನಿಲ್ಲಿಸಿದ ಎಲ್ಲಾ ಅಭಿಮಾನಿಗಳಿಗೆ ಕೋಟಿ ಕೋಟಿ ನಮನ ಅಲ್ಲಿಸುತ್ತೇನೆ ಎನ್ನುತ್ತಾ ಮನೆಯಿಂದ ಆಚೆ ಬಂದರು.
ಕಾವ್ಯಗೆ ಸಿಕ್ಕ ಬಹುಮಾನ ಎಷ್ಟು?
ಬಿಗ್ ಮನೆಯಿಂದ ಹೊರ ಬಂದ 4ನೇ ರನ್ನರ್ ಅಪ್ ಆಗಿ ಹೊರ ಬಂದ ರಘುಗೆ ಇಬ್ಬರು ಪ್ರಾಯೋಜಕರಿಂದ 3.50 ಲಕ್ಷ ರೂ. ಬಹುಮಾನ ಸಿಕ್ಕರೇ, ಕಾವ್ಯ ಶೈವಗೆ 10 ಲಕ್ಷ ರೂ. ಬಹುಮಾನ ಸಿಕ್ಕಿತು. ಇದನ್ನೂ ಓದಿ: BBK Season 12 | ಗ್ರ್ಯಾಂಡ್ ಫಿನಾಲೆಯಿಂದ ರಗಡ್ ರಘು ಔಟ್

