ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಕ್ಷೇತ್ರ ಆಯ್ಕೆಗೆ ಕಸರತ್ತು ನಡೆಯುತ್ತಿದೆ. ಕೋಲಾರ (Kolar) ಘೋಷಣೆ ಮಾಡಿಬಿಡಿ ಎಂದ ಆಪ್ತರಿಗೆ ಸಿದ್ದರಾಮಯ್ಯ ಈ ಸಲ ರಿಸ್ಕ್ ಗೆ ನಾನು ರೆಡಿ ಇಲ್ಲ. ನೀವು ಸುಮ್ನಿರ್ರಪ್ಪಾ ಎಂದು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
ಮೊದಲು ನಾಮಿನೇಶನ್‍ಗೆ ಬರ್ತೀನಿ ಎಂದು ಹೇಳಿದ ಕೆಲ ಗಂಟೆಗಳಲ್ಲಿಯೇ ಸಿದ್ದರಾಮಯ್ಯ ಉಲ್ಟಾ ಹೊಡೆದಿದ್ದಾರೆ. ಮಾತಿನ ಭರದಲ್ಲಿ ಮಾತನಾಡಿ ಆ ಬಳಿಕ ಎಚ್ಚೆತ್ತುಕೊಂಡು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಈಗಲೇ ಒಂದು ಕ್ಷೇತ್ರವನ್ನ ಫಿಕ್ಸ್ ಮಾಬಿಟ್ಟರೆ ವಿರೋಧಿಗಳು ಒಂದಾಗುವ ಆತಂಕ ಎದುರಾಗಿದೆ. ಇದನ್ನೂ ಓದಿ: ಮುಸ್ಲಿಮರ ವೋಟು ಪಡೆಯೋಕೆ ಕಾಂಗ್ರೆಸ್ ಕೇಸರಿ ವಿರೋಧ ಮಾಡ್ತಿದೆ – ಬಿ.ಸಿ.ನಾಗೇಶ್ ಕಿಡಿ
Advertisement
Advertisement
ವಿಪಕ್ಷ, ಸ್ವಪಕ್ಷೀಯ ವಿರೋಧಿಗಳ ತಂತ್ರಗಾರಿಕೆ ಫಲ ಕೊಡಬಾರದೆಂಬ ಲೆಕ್ಕಚಾರದಲ್ಲಿ ಸಿದ್ದರಾಮಯ್ಯ ಗಂಟೆಗಳಲ್ಲೇ ಉಲ್ಟಾ ಹೊಡೆದು ಹೈಕಮಾಂಡ್ ಕಡೆ ಬೊಟ್ಟು ಮಾಡಿದ್ದಾರೆ. ನವೆಂಬರ್ 13ರಂದೇ ಸಿದ್ದರಾಮಯ್ಯ ಕ್ಷೇತ್ರ ಘೋಷಣೆ ಮಾಡಿಬಿಡಿ ಎಂದ ಆಪ್ತರಿಗೂ ಬುದ್ಧಿಮಾತು ಹೇಳಿದ್ದಾರೆ. ಇದು ನನ್ನ ಕೊನೆ ಚುನಾವಣೆ, ರಿಸ್ಕ್‍ಗೆ ನಾನು ರೆಡಿ ಇಲ್ಲ, ಸುಮ್ಮನಿರಿ ಎಂದಿದ್ದಾರೆ.
Advertisement
ಇತ್ತ ಪುತ್ರ ಯತೀಂದ್ರ (Yathindra) ಭವಿಷ್ಯವನ್ನೂ ಲೆಕ್ಕಚಾರ ಮಾಡಿ ಕ್ಷೇತ್ರ ಘೋಷಣೆ ಮಾಡದೇ ಬಿಟ್ಟಿದ್ದಾರೆ. ನಾನು ಕ್ಷೇತ್ರವನ್ನೂ ಎಲ್ಲಿಯಾದ್ರೂ ಪಿಕ್ ಮಾಡಬಹುದು, ಮಗ ಎಲ್ಲಿ ಹೋಗಬೇಕು ಎಂಬ ಆತಂಕ ಇದೆ. ಅದಕ್ಕಾಗಿ ಸಿದ್ದರಾಮಯ್ಯ ಎರಡು ಆಯ್ಕೆಗಳನ್ನ ಮುಂದಿಟ್ಟುಕೊಂಡು ಪೊಲಿಟಿಕಲ್ ಗೇಮ್ ಆರಂಭಿಸಿದ್ದಾರೆ.