ಪೋಷಕರ ನಡವಳಿಕೆಗಳು ಮಕ್ಕಳ ವ್ಯಕ್ತಿತ್ವದ ಮೇಲೆ ಹೇಗೆ ಪ್ರಭಾವ ಬೀರುತ್ತೆ ಗೊತ್ತಾ?

Public TV
2 Min Read
mother daughter

ಗುವಾಗಿರುವುದೆಂದರೆ ಅದು ನಿರಾತಂಕದ ಸಮಯ. ಮಗು ಬೆಳೆಯುತ್ತಾ ಹೋದಂತೆ, ಆ ಮಗುವಿನ ಮೇಲೆ ಪೋಷಕರು ಬೀರುವ ಪ್ರಭಾವವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಹೆತ್ತವರು ಮಕ್ಕಳೊಂದಿಗೆ ಸ್ನೇಹಿತರಂತೆಯೇ ಇರಲಿ ಅಥವಾ ಅಷ್ಟೇನು ಹತ್ತಿರದವರಾಗದಂತೆ ಇದ್ದರೂ, ಮಕ್ಕಳು ಬೆಳೆಯುತ್ತಾ ಹೋದಂತೆ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವಕ್ಕೆ ಒಳಗಾಗಿರುತ್ತದೆ.

ಪೋಷಕರ ಕೆಲ ನಡವಳಿಕೆಗಳು ಮಕ್ಕಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆದರೆ ಅದು ಮಕ್ಕಳಿಗೆ ಅರಿವಿರುವುದಿಲ್ಲ. ಬದಲಾಗಿ ಅವರ ಮನಸ್ಸಿನಲ್ಲಿ ಅಚ್ಚೊತ್ತಿರುತ್ತದೆ. ಅದಕ್ಕಾಗಿ ಕೆಲವರು ಮಕ್ಕಳ ಬಗ್ಗೆ ಮಾತನಾಡುವಾಗ, ʼಅಪ್ಪನ ಗುಣ.. ಅಮ್ಮನ ಗುಣ..ʼ ಅಂತ ಹೇಳೋದು. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

father and douther

ಮಕ್ಕಳು ಅಥವಾ ಅವರ ಮುಂದೆ ಪೋಷಕರು ಯಾರಿಗಾದರೂ ಸುಳ್ಳು ಹೇಳಿದ್ರೆ
ಪೋಷಕರು ಯಾವುದೋ ಉದ್ದೇಶಗಳಿಗಾಗಿ ಮಕ್ಕಳಿಗೆ ಸುಳ್ಳು ಹೇಳಬಹುದು. ಅದು ಪೋಷಕರಿಗೆ ಸರಿ ಎನಿಸಬಹುದು. ಆದರೆ ಮಕ್ಕಳಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮನೋವೈದ್ಯ ಡಾ. ಕ್ಯಾರೋಲ್ ಲೈಬರ್‌ಮ್ಯಾನ್ ಪ್ರಕಾರ, ಮಕ್ಕಳಿಗೆ ಪೋಷಕರು ಸುಳ್ಳು ಹೇಳಿದರೆ, ತಮ್ಮ ಮೇಲೆ ಮಕ್ಕಳು ಇಟ್ಟಿರುವ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಮುಂದೆ ಮಕ್ಕಳು ಯಾವುದೇ ರೀತಿಯಲ್ಲೂ ಪೋಷಕರನ್ನು ನಂಬದ ಸ್ಥಿತಿಗೆ ತರಬಹುದು. ಅಲ್ಲದೇ ಪೋಷಕರು ತಮ್ಮ ಮಕ್ಕಳ ಮುಂದೆ ಯಾರಿಗಾದರೂ ಸುಳ್ಳನ್ನು ಹೇಳುವುದನ್ನು ನೋಡಿದರೆ, ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಸುಳ್ಳು ಹೇಳುವುದು ಸರಿ ಎಂದು ನಂಬಲು ಪ್ರಾರಂಭಿಸುತ್ತಾರೆ. ಅದು ನಂತರ ದೊಡ್ಡ ಸಮಸ್ಯೆಯಾಗಿ ಬದಲಾಗಬಹುದು.

mother son

ಪೋಷಕರು ಮಕ್ಕಳನ್ನು ಪ್ರೀತಿಸಿ ಕೇರ್‌ ಮಾಡಿದ್ರೆ
ಪೋಷಕರು ತಮ್ಮ ಮಕ್ಕಳನ್ನು ಪ್ರೀತಿಸಿದರೆ ಮತ್ತು ಕೇರ್‌ ಮಾಡಿದರೆ, ಅವರು ಶಾಲೆಗಳಲ್ಲಿ ಒಳ್ಳೆಯ ಹೆಸರು ಮಾಡುತ್ತಾರೆ. US ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ ನಡೆಸಿರುವ ಅಧ್ಯಯನದಲ್ಲಿ ಈ ಅಂಶ ಬಹಿರಂಗವಾಗಿದೆ. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?

ಪೋಷಕರು ಮನೆಗೆಲಸ ಮಾಡೋದನ್ನ ನೋಡಿದ್ರೆ
ಪೋಷಕರನ್ನು ನೋಡಿ ಮಕ್ಕಳು ಮನೆಗೆಲಸ ಮಾಡುವುದನ್ನು ಕಲಿತರೆ, ವಯಸ್ಕರಾದಂತೆ ಅವರು ಸ್ವತಂತ್ರ್ಯರಾಗಿ ಇರಬಲ್ಲರು. ಯಾವುದೇ ಕಲಸವನ್ನು ನಾನು ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಅವರಲ್ಲಿ ಮೂಡುತ್ತದೆ. ನಂತರದ ಜೀವನದಲ್ಲಿ ಅವರ ಸಹೋದ್ಯೋಗಿಗಳೊಂದಿಗೆ ಹೆಚ್ಚು ಸಹಕರಿಸಲು ಮತ್ತು ಕೆಲಸದ ಸ್ಥಳದಲ್ಲಿ ಹೆಚ್ಚು ಅನುಭೂತಿ ಹೊಂದಲು ಸಹಾಯ ಮಾಡುತ್ತದೆ ಎಂದು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ಫ್ರೆಶ್‌ಮೆನ್‌ನ ಮಾಜಿ ಡೀನ್, ಲೇಖಕ ಜೂಲಿ ಲಿಥ್‌ಕಾಟ್-ಹೇಮ್ಸ್ ಉಲ್ಲೇಖಿಸಿದ್ದಾರೆ.

parents children

ಮಕ್ಕಳನ್ನು ಸದಾ ನಿಂದಿಸಿದರೆ
ಪೋಷಕರು ಮಕ್ಕಳನ್ನು ಸದಾ ನಿಂದಿಸಿದರೆ ಅವರಲ್ಲಿನ ಆತ್ಮವಿಶ್ವಾಸ ಕುಗ್ಗುತ್ತದೆ. ಮಕ್ಕಳು ಬೆಳೆದಂತೆ ತಮ್ಮ ವ್ಯಕ್ತಿತ್ವದಲ್ಲೂ ಟೀಕಾತ್ಮಕ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ. ಮಕ್ಕಳನ್ನು ಟೀಕಿಸಿದಾಗ ಅವರಲ್ಲಿ ಸ್ವಾಭಿಮಾನದ ಮನೋಭಾವಕ್ಕೆ ತೊಂದರೆಯಾಗಬಹುದು. ಬಾಂಧವ್ಯದಲ್ಲಿ ಅಸಮಾಧಾನದ ಭಾವನೆ ಮೂಡಬಹುದು ಎಂದು ಕನ್ಸಲ್ಟೆಂಟ್ ಕ್ಲಿನಿಕಲ್ ಸೈಕಾಲಜಿಸ್ಟ್ ಎಲೆನಾ ಟೌರೊನಿ ಇನ್ಸೈಡರ್ಗೆ ಅಭಿಪ್ರಾಯಪಡುತ್ತಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *