ಥಾಯ್ ಸ್ಪೆಷಲ್ – ಟೀ ಐಸ್ ಕ್ರೀಮ್ ಮಾಡೋದು ಹೀಗೆ

Public TV
1 Min Read
Thai Tea Ice Cream 2

ಥೈಲ್ಯಾಂಡ್ ಸ್ಪೆಷಲ್ ಐಸ್ಡ್ ಟೀಯನ್ನು ನಾವಿಂದು ಐಸ್ ಕ್ರೀಮ್ ರೂಪದಲ್ಲಿ ಸವಿಯಲಿದ್ದೇವೆ. ಹೌದು, ಈ ಟೀ ಐಸ್ ಕ್ರೀಮ್‌ಗೆ ಯಾವುದೇ ಮೊಟ್ಟೆ ಅಥವಾ ಕಸ್ಟರ್ಡ್ ಅಗತ್ಯವಿಲ್ಲ. ವಿಪ್ಡ್ ಕ್ರೀಮ್, ಕಂಡೆನ್ಸ್‌ಡ್ ಮಿಲ್ಕ್ ಹಾಗೂ ಥಾಯ್ ಸ್ಪೆಷಲ್ ಚಹಾದ ಎಲೆಯ ಸಂಯೋಜನೆಯಿಂದ ನಾವಿಂದು ಟೀ ಐಸ್ ಕ್ರೀಮ್ ಮಾಡೋದು ಹೇಗೆಂದು ಹೇಳಿಕೊಡಲಿದ್ದೇವೆ. ಊಟದ ನಂತರ ಸವಿಯಲು ಬೆಸ್ಟ್ ಆಗಿರೋ ರೆಸಿಪಿಯನ್ನು ಟ್ರೈ ಮಾಡಿ ನೋಡಿ.

Thai Tea Ice Cream

ಬೇಕಾಗುವ ಪದಾರ್ಥಗಳು:
ವಿಪ್ಡ್ ಕ್ರೀಮ್ – ಒಂದೂವರೆ ಕಪ್
ಥಾಯ್ ಚಹಾ ಎಲೆಗಳು – ಕಾಲು ಕಪ್
ಉಪ್ಪು – ಚಿಟಿಕೆ
ಸಿಹಿ ಕಂಡೆನ್ಸ್‌ಡ್ ಮಿಲ್ಕ್ – ಅರ್ಧ ಕ್ಯಾನ್
ಐರಿಷ್ ಕ್ರೀಮ್ – ಒಂದೂವರೆ ಟೀಸ್ಪೂನ್ ಇದನ್ನೂ ಓದಿ: ಸಿನಿಮಾ ಟೈಮ್‌ನಲ್ಲಿ ಟೇಸ್ಟಿ ಟ್ವಿಸ್ಟ್ – ಡಿಫರೆಂಟ್ ಆಗಿ ಹನಿ ಪಾಪ್‌ಕಾರ್ನ್ ಮಾಡಿ

Thai Tea Ice Cream 1

ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಯಲ್ಲಿ ವಿಪ್ಪಿಂಗ್ ಕ್ರೀಮ್ ಅನ್ನು ಹಾಕಿ ಆಗಾಗ ಬೆರೆಸುತ್ತಾ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ.
* ಇದಕ್ಕೆ ಚಹಾ ಎಲೆಗಳು ಮತ್ತು ಚಿಟಿಕೆ ಉಪ್ಪನ್ನು ಸೇರಿಸಿ ಕುದಿಯುವವರೆಗೆ ಬಿಸಿ ಮಾಡಿ.
* ಈಗ ಫಿಲ್ಟರ್ ಅನ್ನು ಬಳಸಿಕೊಂಡು ಕ್ರೀಮ್ ಅನ್ನು ಇನ್ನೊಂದು ಪಾತ್ರೆಗೆ ಸಾಧ್ಯವಾದಷ್ಟು ದ್ರವವನ್ನು ಹಿಂಡಿಕೊಳ್ಳಿ.
* ಕ್ರೀಮ್ ತಣ್ಣಗಾದ ನಂತರ ವಿಪ್ಪಿಂಗ್ ಮಷಿನ್ ಬಳಸಿ ಅದು ಮೃದುವಾಗುವಂತೆ ಮಾಡಿ.
* ಮಿಶ್ರಣಕ್ಕೆ ಸ್ವಲ್ಪ ಹಾಲು ಮತ್ತು ಐರಿಶ್ ಕ್ರೀಮ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಲೋಹದ ಪಾತ್ರೆಗೆ ಇದನ್ನು ವರ್ಗಾಯಿಸಿ, ಸುಮಾರು 2-3 ಗಂಟೆ ಫ್ರೀಜರ್‌ನಲ್ಲಿ ಇಟ್ಟು ಗಟ್ಟಿಯಾಗಲು ಬಿಡಿ.
* ಇದೀಗ ಥಾಯ್ ಟೀ ಐಸ್ ಕ್ರೀಮ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಕರಿ ಎಳ್ಳಿನ ಡಂಪ್ಲಿಂಗ್ – ಇದು ಚೈನೀಸ್ ಸ್ವೀಟ್

Web Stories

Share This Article