Connect with us

Cricket

ಟೀಂ ಇಂಡಿಯಾಗೆ ಧೋನಿಯೇ ಈಗಲೂ ನಾಯಕರಂತೆ!

Published

on

ನವದೆಹಲಿ: ವಿರಾಟ್ ಕೊಹ್ಲಿ ಟೀಂ ಇಂಡಿಯಾದ ನಾಯಕರಾಗಿದ್ದರೂ, ಆನ್ ಫೀಲ್ಡ್ ನಲ್ಲಿ ಮಹೇಂದ್ರ ಸಿಂಗ್ ಧೋನಿಯೇ ನಿಜವಾದ ನಾಯಕರಂತೆ. ಇದನ್ನು ಈ ಹಿಂದಿನ ಹಲವು ಪಂದ್ಯಗಳಲ್ಲಿನ ಧೋನಿ ಮತ್ತು ಕೊಹ್ಲಿ ನಡೆ ಸಾಬೀತು ಪಡಿಸಿದ್ದರೂ ಈಗ ಭಾರತದ ತಂಡದ ಯುವ ಆಟಗಾರ ಚಾಹಲ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಮಾತನ್ನು ಒಪ್ಪಿಕೊಂಡಿದ್ದಾರೆ.

ಭಾರತ ಕ್ರಿಕೆಟ್ ಕಂಡ ಶ್ರೇಷ್ಟ ನಾಯಕರಲ್ಲಿ ಒಬ್ಬರದ ಧೋನಿ ನಾಯಕತ್ವದಿಂದ ಕೆಳಗಿಳಿದಿದ್ದರೂ ಇಂದಿಗೂ ಅವರೇ ಟೀಂ ಇಂಡಿಯಾದ ನೈಜ ನಾಯಕ. ಆನ್ ಫೀಲ್ಡ್ ನಲ್ಲಿ ಆಟಗಾರರಿಗೆ ಇಂದಿಗೂ ತಮ್ಮ ಸಲಹೆಗಳನ್ನು ನೀಡುವ ಮೂಲಕ ತಂಡದ ಗೆಲುವಿಗೆ ಕಾರಣರಾಗುತ್ತಿದ್ದಾರೆ. ಪಂದ್ಯದ ಹೆಚ್ಚು ಒತ್ತಡ ವೇಳೆಯಲ್ಲಿ ಕೊಹ್ಲಿ ಸೇರಿದಂತೆ ಎಲ್ಲಾ ಯುವ ಆಟಗಾರರಿಗೂ ಧೋನಿಯವರೇ ಸಲಹೆ ನೀಡುತ್ತಾರೆ ಎಂದು ಚಹಲ್ ಹೇಳಿದರು.

ಧೋನಿ ಅವರೊಂದಿಗೆ ಮೈದಾನದಲ್ಲಿ ಆಟವಾಡುವುದು ಹೆಮ್ಮೆ ಅನಿಸುತ್ತದೆ. ಕೊಹ್ಲಿ ಪಂದ್ಯದ ಸಮಯದಲ್ಲಿ ಮಿಡನ್‍ನಲ್ಲಿ ಫಿಲ್ಡಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಬೌಲರ್‍ಗಳಿಗೆ ಬೇಕಾದ ಸಲಹೆ ನೀಡಲು ಬರಲು ಆಗಮಿಸುತ್ತಾರೆ. ಇಂತಹ ಸಂದರ್ಭದಲ್ಲಿ ಧೋನಿ ನಾನು ನೋಡಿಕೊಳ್ಳುತ್ತೇನೆ ಎಂದು ನಮ್ಮ ಬಳಿಗೆ ಬಂದು ಸಲಹೆ ನೀಡುತ್ತಾರೆ. ಇದರಿಂದ ತಂಡದ ಸಮಯವು ಉಳಿತಾಯವಾಗುತ್ತದೆ ಎಂದು ಚಹಲ್ ವಿವರಿಸಿದರು.

ಇನ್ನೂ ಡಿಆರ್‍ಎಸ್ ತೆಗೆದುಕೊಳ್ಳುವ ಸಮಯದಲ್ಲೂ ಧೋನಿ ಸಲಹೆಯನ್ನು ಕೊಹ್ಲಿ ತಪ್ಪದೇ ಪಡೆಯುತ್ತಾರೆ. ಸ್ಪೀನ್ ಬೌಲರ್‍ಗಳಿಗೆ ಧೋನಿ ನೀಡುವ ಸಲಹೆಗಳು ಹೆಚ್ಚು ಉಪಯುಕ್ತ. ಇದಕ್ಕೆ ಆಶ್ವಿನ್ ಹಾಗೂ ಜಡೇಜಾ ಅವರ ಪ್ರದರ್ಶನವೇ ಸಾಕ್ಷಿಯಾಗಿದೆ ಎಂದು ಚಹಾಲ್ ಸಂದರ್ಶನದ ವೇಳೆಯಲ್ಲಿ ಧೋನಿ ಕುರಿತ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *