ಬೆಂಗಳೂರು: ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರು ಇನ್ಸ್ಟಾಗ್ರಾಂನಲ್ಲಿ ಫೋಟೋ ಹಾಕಿ ಜೀವನ ಹೇಗೆ ಬದಲಾಗುತ್ತೆ ಎಂದು ಪೋಸ್ಟ್ ಮಾಡಿದ್ದಾರೆ.
ರಾಧಿಕಾ ತಮ್ಮ ಪತಿ, ನಟ ಯಶ್ ಜೊತೆ ಮಗಳಿಗಾಗಿ ಶಾಪಿಂಗ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, “ನಮಗಾಗಿ ಶಾಪಿಂಗ್ ಮಾಡಲು ಹೋಗಿ ವರ್ಷಗಳೇ ಕಳೆದಿವೆ. ಆದರೆ ಈಗ ಐರಾಳಿಗಾಗಿ ಕೆಲವು ಆಟಿಕೆಗಳನ್ನು ತೆಗೆದುಕೊಳ್ಳಲು ಮಾಲ್ಗೆ ಬಂದಿದ್ದೇವೆ. ಜೀವನ ಹೇಗೆ ಬದಲಾಗುತ್ತದೆ ನೋಡಿ. ಶಾಪಿಂಗ್ ಮಾಲಿನ ಆಟಿಕೆ ಅಂಗಡಿಯಲ್ಲಿ ನಮಗೆ ಒಳ್ಳೆಯ ಮನೆರಂಜನೆ ಸಿಕ್ಕಿದೆ” ಎಂದು ಪೋಸ್ಟ್ ಮಾಡಿದ್ದಾರೆ.
ಭಾನುವಾರ ಯಶ್ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಮಗಳೊಂದಿಗಿದ್ದ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋದಲ್ಲಿ ಯಶ್ ಐರಾಳನ್ನು ಆಟವಾಡಿಸುತ್ತಾ ಮಾತನಾಡಿಸಿದ್ದಾರೆ. ಆಗ ಐರಾ ತೊದಲ ಮಾತನ್ನಾಡಿದ್ದಾರೆ. ನಂತರ ಯಶ್ ಐರಾ ಬೇಬಿ ಟಾಟಾ ಮಾಡು ಎಂದು ಹೇಳುತ್ತಾರೆ. ಅಪ್ಪ ಕರೆದ ತಕ್ಷಣ ಐರಾ ಬಂದು ಎಲ್ಲರಿಗೂ ಕೈಯಿಂದ ಹಾಯ್ ಮಾಡಿದ್ದಾಳೆ. ಈ ವಿಡಿಯೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದರು.
ಸದ್ಯಕ್ಕೆ ಯಶ್ `ಕೆಜಿಎಫ್ -2′ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿದ್ದರು ಅವರು ತಮ್ಮ ಪತ್ನಿ ರಾಧಿಕಾ ಹಾಗೂ ಮಗಳು ಐರಾಳ ಜೊತೆ ಸಮಯ ಕಳೆಯುತ್ತಾರೆ. ಇತ್ತ ರಾಧಿಕಾ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಚಿತ್ರರಂಗಿದಂದ ದೂರಯಿರುವ ರಾಧಿಕಾ ಅವರು ಮನೆಯಲ್ಲಿ ಮಗಳು ಐರಾಳ ಜೊತೆ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.