ಬೆಂಗಳೂರು: ಪವರ್ ಮಿನಿಸ್ಟರ್ ಡಿಕೆ ಶಿವಕುಮಾರ್ ಮೇಲಿನ ಐಟಿ ದಾಳಿ ನಿನ್ನೆ, ಮೊನ್ನೆಯ ಪ್ಲ್ಯಾನ್ ಅಲ್ಲ. ಕಳೆದ 6 ತಿಂಗಳಿಂದ ಐಟಿ ದಾಳಿ ನಡೆಸಲು ಚಕ್ರವ್ಯೂಹ ಬೀಸಿದ್ರು. ಹಾಗಿದ್ರೆ ಡಿಕೆಶಿ ಈ ಚಕ್ರವ್ಯೂಹದಲ್ಲಿ ಸಿಲುಕಿದ್ದು ಹೇಗೆ? ಏನೆಲ್ಲಾ ಪ್ಲ್ಯಾನ್ ಮಾಡಿದ್ರು. 6 ತಿಂಗಳಲ್ಲಿ ಏನೆಲ್ಲಾ ನಡೆದಿದೆ ಅನ್ನೋದರ ಸಂಪೂರ್ಣ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಕಳೆದ 6 ತಿಂಗಳಿಂದ ಐಟಿ ದಾಳಿ ವ್ಯೂಹ ರಚಿಸಿದ್ರು. ಐಟಿ ದಾಳಿಯ ನೇತೃತ್ವ ವಹಿಸಿದ್ದು ಚೆನ್ನೈ ಪ್ರಾದೇಶಿಕ ಡಿಜಿಪಿ ಬಾಲಕೃಷ್ಣ. ಇವರು ತಮಿಳುನಾಡಿನಲ್ಲಿ ಅಕ್ರಮ ಗುಟ್ಕಾ ಮಾರಾಟ ಹಗರಣ ಬಯಲಿಗೆಳೆದಿದ್ದ ಖಡಕ್ ಅಧಿಕಾರಿ. ಡಿಕೆಶಿ ಕೋಟೆ ಒಡೆಯಲು 300 ಮಂದಿ ಐಟಿ ಅಧಿಕಾರಿಗಳ ಬೃಹತ್ ತಂಡ ರೆಡಿಯಾಗಿತ್ತು. ಮೇ 29ರಂದು ಐಟಿ ಅಧಿಕಾರಿಗಳಿಂದ ಡಿಕೆಶಿ ವಿರುದ್ಧ ಕಾರ್ಯಾಚರಣೆ ಆರಂಭವಾಗಿತ್ತು. ಜುಲೈ 31ರಂದು ಹೈದ್ರಾಬಾದ್‍ನಿಂದ ಸಿಆರ್‍ಪಿಎಫ್ ತಂಡ ಬಂದಿತ್ತು. ಆದ್ರೆ ಬೆಂಗಳೂರಿಗೆ ಕರೆಸಿಕೊಂಡಿದ್ಯಾಕೆ ಅನ್ನೋ ಮಾಹಿತಿ ಕಮಾಂಡೆಂಟ್‍ಗೆ ಬಿಟ್ಟು ಬೇರೆ ಯಾರಿಗೂ ಗೊತ್ತಿರಲಿಲ್ಲ. ಅಸಲಿಗೆ ಐಟಿ ಅಧಿಕಾರಿಗಳ ಕಾರ್ಯಾಚರಣೆಗೆ ಬಂದಿರೋದು ಅನ್ನೋದು ಸಿಬ್ಬಂದಿಗೆ ಗೊತ್ತಿರಲಿಲ್ಲ. ಕಾವೇರಿ ಗಲಾಟೆಗೆ ನಮ್ಮನ್ನು ಕರೆಸಿಕೊಂಡಿರಬಹುದು ಅಂತ ತಿಳಿದುಕೊಂಡಿದ್ರು.
Advertisement
ಆಗಸ್ಟ್ 1 ರಂದು ಮಧ್ಯರಾತ್ರಿ 2 ಗಂಟೆಗೆ ಸಿಆರ್‍ಪಿಎಫ್ ಸಿಬ್ಬಂದಿ ಎಂಟ್ರಿ ಕೊಟ್ಟರು. ಎರಡು ಗಂಟೆಗೆ ಒಂದು ಬ್ಯಾಚ್ ಐಟಿ ಅಧಿಕಾರಿಗಳು ಡಿಕೆಶಿ ಮನೆ ಮುಂದೆ ಮೊಕ್ಕಾಂ ಹೂಡಿದ್ರು. ಈ ವೇಳೆ ಬೀಟ್‍ನಲ್ಲಿದ್ದ ಹೊಯ್ಸಳ ಪ್ರಶ್ನೆ ಮಾಡಿದಾಗಲೂ ಐಟಿ ಅಧಿಕಾರಿಗಳು ಉತ್ತರ ನೀಡಿರಲಿಲ್ಲ. ಹೊಯ್ಸಳ ಪ್ರಶ್ನೆಯ ನಂತರ ಮನೆಯ ಬಳಿಯಿಂದ ಐಟಿ ಅಧಿಕಾರಿಗಳು ನಿರ್ಗಮಿಸಿದ್ದರು. ಐಟಿ ಅಧಿಕಾರಿಗಳ 4 ತಂಡ ಬೆಳಗ್ಗೆ ತನಕ ಮನೆಯ ಸುತ್ತ ಗಸ್ತು ತಿರುಗಿದ್ದರು. ಬೆಳಗ್ಗೆ 7 ಗಂಟೆಗೆ ಸಿಆರ್‍ಪಿಎಫ್ ಅಧಿಕಾರಿಗಳೊಂದಿಗೆ 20 ಅಧಿಕಾರಿಗಳು ಡಿಕೆಶಿ ಮನೆಗೆ ಎಂಟ್ರಿ ನೀಡಿದ್ರು.
Advertisement
Advertisement
ಇಂಧನ ಸಚಿವ ಡಿಕೆ ಶಿವಕುಮಾರ್ ಆಪ್ತರು, ಸಂಬಂಧಿಕರು, ಪಾಲುದಾರಿಕೆ ಹೊಂದಿರುವ ಸಂಸ್ಥೆಗಳ ಮೇಲೂ ತಪಾಸಣೆ ಶುರು ಮಾಡಿದ್ರು. ಈ ಸಂಸ್ಥೆಗಳ ಮೇಲೆ ದಾಳಿಗೆ ಡಿಜಿಪಿ ಬಾಲಕೃಷ್ಣ 39 ಸರ್ಚ್ ವಾರೆಂಟ್ ನೀಡಿದ್ದರು. ಚೆನ್ನೈ, ದೆಹಲಿ, ಬೆಂಗಳೂರು, ಮೈಸೂರು, ಕನಕಪುರದ 60 ಸ್ಥಳಗಳ ಮೇಲೆ ದಾಳಿ ನಡೆಯಿತು. ಚೆನ್ನೈ ಮೂಲದ ಎಲ್‍ಇಡಿ ಕಂಪನಿಯೊಂದರಲ್ಲಿ ಡಿಕೆಶಿ ಪಾಲುದಾರಿಕೆ ಇರುವ ಬಗ್ಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಆ ಕಂಪನಿಯನ್ನೂ ಐಟಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
Advertisement
ಡಿಕೆ`ಶಿಕಾರಿ’ಗೆ `ಲಕ್ಷ್ಮೀ’ ಕಂಟಕ!?: ಡಿಕೆಶಿ ಮೇಲಿನ ದಾಳಿಗೆ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರಣರಾದ್ರಾ ಎಂಬ ಅನುಮಾನ ಮೂಡಿದೆ. ಮೂರು ತಿಂಗಳ ಹಿಂದೆ ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು. ನೋಟು ನಿಷೇಧದ ವೇಳೆ ಅಕ್ರಮ ಹಣ ಹರಿದಿದೆ ಎಂದು ಐಟಿ ದಾಳಿ ಮಾಡಿತ್ತು. ಲಕ್ಷ್ಮೀ ಹೆಬ್ಬಾಳ್ಕರ್ ಸಾಲ ಪಡೆಯಲು ಸೂಚಿಸಿದ್ದು ಡಿಕೆಶಿಯಂತೆ. ಅಲ್ಲಿಂದಲೇ ಶುರುವಾಯ್ತು ಡಿ.ಕೆ ಶಿವಕುಮಾರ್ ಮೇಲಿನ ಗುಮಾನಿ. ಅಲ್ಲದೆ ಗೋವಿಂದರಾಜು ಡೈರಿಯಲ್ಲಿ ಡಿಕೆಶಿ ಹೆಸರಿದ್ದಿದ್ದು ಮತ್ತೊಂದು ಸೂಚನೆ. ಎಂಎಲ್‍ಸಿ ಎಸ್.ರವಿ ಡಿಕೆಶಿ ಸೋದರ ಸಂಬಂಧಿಯಾಗಿದ್ದು ಮತ್ತಷ್ಟು ಪುಷ್ಟಿ ನೀಡಿತ್ತು. ಈ ಎಲ್ಲಾ ಮಾಹಿತಿ ಸಂಗ್ರಹಿಸಿ ಬುಧವಾರ ಬೆಳ್ಳಂಬೆಳಗ್ಗೆ ಡಿಕೆಶಿಗೆ ಐಟಿ ತಂಡ ಶಾಕ್ ನೀಡಿತ್ತು. ಸತತ ಎರಡನೇ ದಿನವಾದ ಇಂದು ಕೂಡಾ ಡಿಕೆಶಿ ಮನೆಯಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಪವರ್ ಮಂತ್ರಿ ಸಾಮ್ರಾಜ್ಯಕ್ಕೆ ಐಟಿ ಕನ್ನ- ಸತತ 2ನೇ ದಿನವೂ ಶೋಧ ಕಾರ್ಯ https://t.co/aXforuKLrR @IamDKShivakumar #ITRaid #Bengaluru pic.twitter.com/vsTcp5oVmD
— PublicTV (@publictvnews) August 3, 2017
ಗಾಲ್ಫ್ ಆಡೋ ನೆಪದಲ್ಲಿ ಎಂಟ್ರಿಕೊಟ್ಟು ಡಿಕೆಶಿಗೆ ಐಟಿ ಅಧಿಕಾರಿಗಳು ಶಾಕ್ ಕೊಟ್ಟಿದ್ದು ಹೀಗೆ. ಯಾವ ಸಮಯದಲ್ಲಿ ಏನಾಯ್ತು? https://t.co/qkWiNFQwsU #DKShivakumar pic.twitter.com/1ZdFdWf6vB
— PublicTV (@publictvnews) August 2, 2017