ದಕ್ಷಿಣ ಆಫ್ರಿಕಾ ಚುನಾವಣೆಯಲ್ಲಿ ಬಳಕೆಯಾಗಲಿದೆ ಹಳೆಯ 500, 1 ಸಾವಿರ ರೂ. ನೋಟುಗಳು!

Public TV
2 Min Read
500 1000 rs india

ತಿರುವನಂತಪುರಂ: ಕಳೆದ ವರ್ಷ ನಿಷೇಧಗೊಂಡಿರುವ 500 ಮತ್ತು 1 ಸಾವಿರ ರೂ. ನೋಟುಗಳು ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಳಕೆಯಾಗಲಿದೆ.

ಹೌದು. 2019ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈ ವೇಳೆ ಇಲ್ಲಿಯ ಪ್ರಚಾರ ಕಾರ್ಯಗಳಲ್ಲಿ ಹಾರ್ಡ್ ಬೋರ್ಡ್ ಗಳನ್ನು ಬಳಸಲಾಗುತ್ತದೆ. ಈ ಹಾರ್ಡ್ ಬೋರ್ಡ್ ಗಳನ್ನು ಭಾರತದಲ್ಲಿ ನಿಷೇಧಗೊಂಡಿರುವ ನೋಟುಗಳನ್ನು ತಯಾರಿಸಿ ನಿರ್ಮಾಣ ಮಾಡಲಾಗುತ್ತಿದೆ.

ದಕ್ಷಿಣ ಆಫ್ರಿಕಾಗೆ ಹೇಗೆ ಹೋಗುತ್ತೆ?
ನಿಷೇಧಗೊಂಡಿರುವ ನೋಟುಗಳನ್ನು ಸುಟ್ಟರೆ ಪರಿಸರ ಮಾಲಿನ್ಯವಾಗುವ ಕಾರಣ ಆರ್‍ಬಿಐ ಕೇರಳದ ಕಣ್ಣೂರಿನಲ್ಲಿರವ ವೆಸ್ಟರ್ನ್ ಇಂಡಿಯಾ ಪ್ಲೈವುಡ್(ಡಬ್ಲ್ಯೂಐಪಿ) ಕಂಪೆನಿಯನ್ನು ಸಂಪರ್ಕಿಸಿತ್ತು. ಬಳಿಕ ಕಂಪೆನಿ ಹಳೆಯ ನೋಟುಗಳನ್ನು ಬಳಸಿ ಈಗ ಪ್ಲೈವುಡ್ ಹಾರ್ಡ್ ಬೋರ್ಡ್ ಗಳನ್ನು ತಯಾರಿಸಿದೆ.

THE WESTERN INDIA PLYWOODS 5

ಕಂಪನಿಯ ಪ್ರಧಾನ ವ್ಯವಸ್ಥಾಪಕ ಟಿಐ ಬಾವ ಪ್ರತಿಕ್ರಿಯಿಸಿ, ನೋಟ್ ನಿಷೇಧಗೊಂಡ ಬಳಿಕ ತಿರುವನಂತಪುರಂನಲ್ಲಿರುವ ಆರ್‍ಬಿಐ ಕಚೇರಿ ನಮ್ಮನ್ನು ಸಂಪರ್ಕಿಸಿತು. ಬಳಿಕ ನಾವು ನೋಟಿನ ಸ್ಯಾಂಪಲ್ ನೀಡುವಂತೆ ಕೇಳಿದ್ವಿ. ನಮ್ಮ ರಿಸರ್ಚ್ ತಂಡ ನೋಟುಗಳನ್ನು ಬಳಸಿ ಪ್ಲೈವುಡ್ ತಯಾರಿಸುವುದು ಹೇಗೆ ಎನ್ನುವುದನ್ನು ಕಂಡುಹಿಡಿದರು. ಬಳಿಕ ಈ ನೋಟುಗಳನ್ನು ಬಳಸಿ ಪ್ಲೈವುಡ್ ತಯಾರಿಸಲಾಗಿದ್ದು, ಇವುಗಳು 2019ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಳಕೆಯಾಗಲಿದೆ ಎಂದು ಹೇಳಿದರು.

ಹೇಗೆ ಹಾರ್ಡ್ ಬೋರ್ಡ್ ತಯಾರಿಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ, ಹೆಚ್ಚಿನ ಶಾಖದಲ್ಲಿ ನೋಟಿನ ಚೂರುಗಳನ್ನು ಕುದಿಸಿ ಹಿಟ್ಟು ಮಾಡಲಾಗುತ್ತದೆ. ಈ ಹಿಟ್ಟಿನ ಜೊತೆ ಮರದ ಹಿಟ್ಟನ್ನು ಮಿಶ್ರಣ ಮಾಡಿ ಪ್ಲೈವುಡ್ ಬೋರ್ಡ್ ತಯಾರಿಸಲಾಗಿದೆ. ಇಂತಹ ಬೋರ್ಡ್ ಗಳಿಗೆ ಆಫ್ರಿಕಾ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳಲ್ಲಿ ಬೇಡಿಕೆಯಿದೆ ಎಂದು ಬಾವ ಉತ್ತರಿಸಿದರು.

ಪ್ರಸ್ತುತ ಭಾರತದಲ್ಲಿ ನೋಟನ್ನು ಸಂಸ್ಕರಿಸಿ ಅದನ್ನು ಪ್ಲೈವುಡ್ ಮಾಡುವ ತಂತ್ರಜ್ಞಾನ ಡಬ್ಲ್ಯೂಐಪಿ ಕಂಪೆನಿ ಬಳಿ ಮಾತ್ರ ಇದೆ. ಇದೂವರೆಗೆ 750 ಟನ್ ಹಳೆಯ ನೋಟುಗಳನ್ನು ನಾವು ಸ್ವೀಕರಿಸಿದ್ದೇವೆ. ಒಂದು ಟನ್ ನೋಟಿಗೆ 128 ರೂ. ನೀಡಿದ್ದೇವೆ. ಈ ಎಲ್ಲ ಪ್ರಕ್ರಿಯೆ ಕಣ್ಣೂರಿನ ವಾಲಪಟ್ಟನಂಲ್ಲಿರುವ ಕೇಂದ್ರ ಕಚೇರಿಯಲ್ಲಿ ನಡೆದಿದೆ ಎಂದು ಅವರು ವಿವರಿಸಿದರು.

ನಾವು ತಯಾರಿಸಿದ ಹಾರ್ಡ್ ಬೋರ್ಡ್ ಗಳು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಈ ಬೋರ್ಡ್ ನೋಟ್ ನಿಂದ ತಯಾರಿಸಲಾಗಿದೆ. ಹೀಗಾಗಿ ಇದಕ್ಕೆ ಬೆಲೆ ಜಾಸ್ತಿ ಎಂದು ಹೇಳಿ ಮಾರಾಟ ಮಾಡುತ್ತಿದ್ದಾರೆ. ಆದರೆ ನಾವು ಆ ರೀತಿ ಮಾಡದೇ ಒಂದೇ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿದರು..

ಆರ್‍ಬಿಐಗೆ  ಎಷ್ಟು ನೋಟು ಬಂದಿದೆ?
ರದ್ದಾಗಿರುವ 500 ಮತ್ತು 1 ಸಾವಿರ ರೂ. ಮುಖಬೆಲೆಯ 15.44 ಲಕ್ಷ ರೂ. ಮೌಲ್ಯದ ನೋಟುಗಳ ಪೈಕಿ 15.28 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಆರ್‍ಬಿಐಗೆ ವಾಪಸ್ ಬಂದಿದೆ. 16 ಸಾವಿರ ಕೋಟಿ ರೂ. ಮೌಲ್ಯದ ನೋಟುಗಳು ಅಥವಾ ಶೇ.1.4 ರಷ್ಟು ನೋಟುಗಳು ವಾಪಸ್ ಬಂದಿಲ್ಲ. ಶೇ.98.6ರಷ್ಟು ನೋಟುಗಳು ವಾಪಸ್ ಬಂದಿದೆ ಎಂದು ಆರ್‍ಬಿಐ ಆಗಸ್ಟ್ 30ರಂದು ಮಾಹಿತಿ ನೀಡಿತ್ತು.

THE WESTERN INDIA PLYWOODS 2

THE WESTERN INDIA PLYWOODS 3

THE WESTERN INDIA PLYWOODS 4

 

THE WESTERN INDIA PLYWOODS 6

THE WESTERN INDIA PLYWOODS 1

Share This Article
Leave a Comment

Leave a Reply

Your email address will not be published. Required fields are marked *