ವಾಷಿಂಗ್ಟನ್: ಭಾರತ ಒಂದೇ ಬಾರಿಗೆ 104 ಉಪಗ್ರಹಗಳನ್ನ ಯಶಸ್ವಿಯಾಗಿ ಉಡಾವಣೆ ಮಾಡಿದ ಸುದ್ದಿ ಓದಿ ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕ ಶಾಕ್ ಆದ್ರಂತೆ.
ಹೌದು. ಈ ಬಗ್ಗೆ ಮಂಗಳವಾರದಂದು ಹೇಳಿಕೆ ನೀಡಿರೋ ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕ ಡಾನ್ ಕೋಟ್ಸ್, ಸುದ್ದಿ ಓದಿ ನನಗೆ ಶಾಕ್ ಆಯಿತು ಎಂದಿದ್ದಾರೆ. ಗುಪ್ತಚರ ಸೆನೆಟ್ ಆಯ್ಕೆ ಸಮಿತಿ ಉದ್ದೇಶಿಸಿ ಮಾತನಾಡಿದ ಕೋಟ್ಸ್, ಅಂದು ನಾನು, ಭಾರತ ಒಂದೇ ರಾಕೆಟ್‍ನಲ್ಲಿ 100ಕ್ಕೂ ಹೆಚ್ಚು ಉಪಗ್ರಹಗಳನ್ನ ಉಡಾವಣೆ ಮಾಡಿದೆ ಎಂಬ ಸುದ್ದಿ ಓದಿ ಶಾಕ್ ಆದೆ. ಅಮೆರಿಕ ಹಿಂದೆ ಉಳಿಯೋದನ್ನ ನೋಡಲು ಸಾಧ್ಯವಿಲ್ಲ ಅಂದ್ರು.
Advertisement
ಉಪಗ್ರಹಗಳು ಗಾತ್ರದಲ್ಲಿ ಚಿಕ್ಕದಿರಬಹುದು ಅಘವಾ ಏನೇ ಇರಬಹುದು ಆದ್ರೆ ಒಂದೇ ರಾಕೆಟ್‍ನಲ್ಲಿ ಉಡಾವಣೆ ಮಾಡಿದ್ದಾರೆ ಅಂದ್ರು.
Advertisement
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಫೆಬ್ರವರಿ 15 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಒಂದೇ ರಾಕೆಟ್‍ನಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದೆ. 104 ಉಪಗ್ರಹಗಳ ಪೈಕಿ ಭಾರತದ 4, ಅಮೆರಿಕದ 96 ಉಪಗ್ರಹಗಳು ಕಕ್ಷೆ ಸೇರಿದವು. ಉಳಿದಂತೆ ಇಸ್ರೇಲ್, ಕಜಕಿಸ್ತಾನ, ನೆದರ್ಲೆಂಡ್, ಸ್ವಿಜರ್ಲೆಂಡ್ ಹಾಗೂ ಯುಎಇಯ ತಲಾ ಒಂದು ಉಪಗ್ರಹ ಇಸ್ರೋ ರಾಕೆಟ್‍ನಲ್ಲಿ ಕಕ್ಷೆ ಸೇರಿದವು. ಈ ಮೂಲಕ ಬಾಹ್ಯಾಕಾಶ ಇತಿಹಾಸದಲ್ಲಿ ಮೊದಲ ಬಾರಿಗೆ ದೇಶವೊಂದು ಉಡಾವಣೆಯಲ್ಲಿ ಶತಕದ ಸಾಧನೆಯನ್ನು ಮಾಡಿದ ಹೆಗ್ಗಳಿಕೆ ಭಾರತಕ್ಕೆ ಸಿಕ್ಕಿತು.
Advertisement
2014ರಲ್ಲಿ ರಷ್ಯಾ ಒಂದೇ ರಾಕೆಟ್‍ನಲ್ಲಿ 37 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ್ದೇ ಈ ಹಿಂದಿನ ದಾಖಲೆಯಾಗಿತ್ತು. ಅಮೆರಿಕದ ನಾಸಾಕ್ಕೆ ಹೋಲಿಸಿದರೆ ಇಸ್ರೋದ ಉಡಾವಣೆ ದರ ಅಗ್ಗವಾಗಿರುವ ಹಿನ್ನೆಲೆಯಲ್ಲಿ ವಿದೇಶಿ ಕಂಪನಿಗಳು ಉಪಗ್ರಹ ಉಡಾವಣೆಗೆ ಇಸ್ರೋವನ್ನು ಅವಲಂಬಿಸಿವೆ.