– 224 ಶಾಸಕರ ಮೇಲೆ ಕಳಂಕ ಬಂದಿದೆ ಎಂದ ವಿಜಯೇಂದ್ರ
ಬೆಂಗಳೂರು: ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಮಾನ ಮರ್ಯಾದೆ ಇಲ್ಲದ ಅಶ್ಲೀಲ ಸರ್ಕಾರ ಅಂತ ವಿಪಕ್ಷ ನಾಯಕ ಆರ್. ಅಶೋಕ್ ಸಿಡಿಮಿಡಿಗೊಂಡರು.
ವಿಪಕ್ಷಗಳ 18 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ರೂಲಿಂಗ್ ಹೊರಡಿಸಿದ್ದನ್ನು ಖಂಡಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನ್ಯಾಯಕ್ಕಾಗಿ ಹೋರಾಟ ಮಾಡಿದ್ದು, ನಮ್ಮ ಮೇಲೆ ಗದಪ್ರಹಾರ ಮಾಡಿದ್ದೀರಿ. ಒಬ್ಬ ಮಂತ್ರಿ ಬಂದ ಹನಿಟ್ರ್ಯಾಪ್ ಆಗಿದೆ ಅಂತ ಅಂಗಲಾಚುತ್ತಿದ್ದಾರೆ. ಆದ್ರೆ ಇದು ಕಾಂಗ್ರೆಸ್‌ನ ಸಿಎಂಗೆ, ಸಚಿವರಿಗೆ ಅಶ್ಲೀಲ ಅಂತ ಅನ್ನಿಸಲೇ ಇಲ್ಲ. ಹನಿ ತಿಂದವರು ಕಾಂಗ್ರೆಸ್‌ನವರು, ಅವರನ್ನ ಅಮಾನತು ಮಾಡಬೇಕಿತ್ತು. ಈ ರೀತಿ ಸದನವನ್ನ ನಾವು ಒಪ್ಪಲ್ಲ ಎಂದು ಆಕ್ರೋಶ ಹೊರಹಾಕಿದರು.
ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆಯುತ್ತಿದ್ದೀರಿ, ಇದು ಅಶ್ಲೀಲ ಸರ್ಕಾರ, ಮಾನಮರ್ಯಾದೆ ಇಲ್ಲದ ಸರ್ಕಾರ ವಿಧಾನಸಭೆಯಲ್ಲಿ ಅಶೋಕ್ ಕಿಡಿ ಕಾರಿದರು. ಇದನ್ನೂ ಓದಿ: ದೆಹಲಿ ಹೈಕೋರ್ಟ್ ಜಡ್ಜ್ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ – ವರ್ಗಾವಣೆ ಕ್ರಮದ ಭಾಗವಲ್ಲ ಎಂದ ಸುಪ್ರೀಂ
ನಮ್ಮ ಶಾಸಕರು ಈ ಹಿಂದೆ ವಿಡಿಯೋ ನೋಡುತ್ತಿದ್ದರು ಅಂತ ಕಾಂಗ್ರೆಸ್‌ನವರು ಕುಣಿದಿದ್ದೇ ಕುಣಿದಿದ್ದು, ಈಗ ಸ್ವತಃ ಸಚಿವರೇ ಹನಿಟ್ರ್ಯಾಪ್ ಆಗಿದೆ ಅಂದಾಗ ಅದು ಅಶ್ಲೀಲ ಅನ್ನಿಸಲೇ ಇಲ್ಲ. ಸದನದ ಗೌರವ ಕಾಪಾಡಬೇಕು ಅಂತ ನಾವು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಕೇಳಿದ್ದೀವಿ. ಆದ್ರೆ ಸಿಎಂ ಸಚಿವರ ಪರವಾಗಿದ್ದೀನಿ ನ್ಯಾಯ ಕೊಡಿಸ್ತಿನಿ ಅಂತಾರೆ. ನ್ಯಾಯ ಕೇಳಿದವರ ಮೇಲೆ ಗದಾಪ್ರಹಾರ ಆಗಿದೆ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: 1 ತಿಂಗಳು ನಂದಿ ಬೆಟ್ಟದ ರಸ್ತೆ ಬಂದ್ – ಪ್ರವಾಸಿಗರೇ ಈ ಸುದ್ದಿ ನೋಡಿ…
224 ಶಾಸಕರ ಮೇಲೆ ಕಳಂಕ ಬಂದಿದೆ
ಇನ್ನೂ ವಿಧಾನಸೌಧದಲ್ಲಿ ಶಾಸಕ ವಿಜಯೇಂದ್ರ ಮಾತನಾಡಿ, 18 ಶಾಸಕರನ್ನು ಅಮಾನತು ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ಸಚಿವ ರಾಜಣ್ಣ ಅವರು ಸದನದಲ್ಲಿ ಅಂಗಲಾಚಿದ್ದಾರೆ. 48ಕ್ಕೂ ಹೆಚ್ಚು ಮುಖಂಡರು ಹನಿಟ್ರ್ಯಾಪ್‌ಗೆ ಒಳಗಾಗಿದ್ದಾರೆ ಅಂತಾರೆ. ಅವರಿಗೆ ರಕ್ಷಣೆ ಕೊಡಬೇಕಾದ ಕರ್ತವ್ಯ ಸಿಎಂ ಅವರದಿತ್ತು. 224 ಶಾಸಕರ ಮೇಲೆ ಕಳಂಕ ಬಂದಿದೆ, 224 ಶಾಸಕರ ಸುರಕ್ಷತೆ ನೋಡಿಕೊಳ್ಳಬೇಕಾದ ಹೊಣೆ ಸಿಎಂ ಅವರದ್ದು ಅಂತ ವಿಜಯೇಂದ್ರ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು | ಕುಡಿದ ಮತ್ತಲ್ಲಿ ಹುಚ್ಚಾಟ – ತಮಾಷೆಗೆ 40 ಕಿಮೀ ದೂರದಿಂದ ಅಂಬುಲೆನ್ಸ್ ಕರೆಸಿದ ಕುಡುಕ!