ಮಂಗಳೂರು: ಕೊಲ್ಲೂರು ದೇಗುಲದಿಂದ ಪಡೆದ ಹಣ ಅವ್ಯವಹಾರವಾಗಿದೆ. ದೇಣಿಗೆ ಹಣದಲ್ಲಿ ಪ್ರಭಾಕರ್ ಭಟ್ಟರು ರಿಯಲ್ ಎಸ್ಟೇಟ್ ಮಾಡುತ್ತಾರೆ ಅಂತ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.
ಕಲ್ಲಡ್ಕ ವಿದ್ಯಾಕೇಂದ್ರಗಳ ಅನುದಾನ ಕಡಿತ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕಲ್ಲಡ್ಕದ ಎರಡೂ ಶಾಲೆಗಳು ಆರ್ಥಿಕ ಸದೃಢವಾಗಿವೆ. ದೇಗುಲದ ಹಣವನ್ನು ಖಾಸಗಿ ಶಾಲೆಗೆ ನೀಡಲು ಅವಕಾಶ ಇಲ್ಲ. ಉಭಯ ಜಿಲ್ಲೆಗಳಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಹಲವಾರು ಶಾಲೆಗಳಿವೆ ಅಂತ ಹೇಳಿದ್ದಾರೆ.
Advertisement
ಹಾಲಿವುಡ್, ಬಾಲಿವುಡ್ ನಟರು, ಉದ್ಯಮಿಗಳಿಂದ ದೇಗುಲಕ್ಕೆ ದೇಣಿಗೆ ಬರುತ್ತೆ. ಈ ಹಣವನ್ನು ಪ್ರಭಾಕರ್ ಭಟ್ ನಗದು ರೂಪದಲ್ಲಿ ಪಡೆದು ದುರುಪಯೋಗ ಮಾಡುತ್ತಿದ್ದಾರೆ. ಹೀಗಾಗಿ ಭಟ್ಟರ ಅವ್ಯವಹಾರದ ಬಗ್ಗೆ ಕೂಡಲೇ ತನಿಖೆ ಆಗಬೇಕು ಅಂತ ಅವರು ಒತ್ತಾಯಿಸಿದ್ದಾರೆ.
Advertisement
ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ್ ಶಾಲೆಗೆ ಬರುತ್ತಿದ್ದ ಅನುದಾನ ಕಡಿತಗೊಳಿಸಿದ ಸರ್ಕಾರ
Advertisement
ಕಲ್ಲಡ್ಕ ಶಾಲೆಯ ನೂರು ಮೀಟರ್ ದೂರದಲ್ಲಿ ಸರ್ಕಾರಿ ಶಾಲೆ ಇದೆ. ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲಿ. ಈ ಎರಡೂ ಶಾಲೆಗಳು ಮತೀಯವಾದ ಸೃಷ್ಟಿಸುವ ಕಾರ್ಖಾನೆಗಳಾಗಿವೆ. ಮಕ್ಕಳ ಕೈಯಲ್ಲಿ ತಟ್ಟೆ ಕೊಟ್ಟು ರಾಜಕೀಯ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಣ ಸಂಗ್ರಹಕ್ಕೆ ಅಭಿಯಾನ ಮಾಡುತ್ತಿದ್ದು, ಇದೊಂದು ದುಡ್ಡು ಮಾಡುವ ದಂಧೆಯಾಗಿದೆ ಅಂತ ಅವರು ತಿರುಗೇಟು ನೀಡಿದ್ದಾರೆ.
Advertisement
ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ್ ಶಾಲೆಗೆ ಅನುದಾನ ಕಟ್- ತಟ್ಟೆ ಹಿಡಿದು ಸರ್ಕಾರದ ವಿರುದ್ಧ ಮಕ್ಕಳ ಧಿಕ್ಕಾರ
ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ ಭಟ್ಟರ ಹಿಂದೂ ಧರ್ಮಕ್ಕೆ ಧಿಕ್ಕಾರ, ಮೋದಿ ದೊಡ್ಡ ಜಾದೂಗಾರ: ಅಮೀನ್ ಮಟ್ಟು
ಇದನ್ನೂ ಓದಿ: ಸರ್ಕಾರದಿಂದ ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಗೆ ಬರುತ್ತಿದ್ದ ಅನುದಾನ ಕಟ್: ರಮಾನಾಥ ರೈ ಹೀಗಂದ್ರು!