ಬೆಂಗಳೂರು: ಈ ಬಾರಿಯ ಬಜೆಟ್ (Karnataka Budget) ಅಭಿವೃದ್ಧಿಯ ಬಜೆಟ್. ಈ ಸಲ ಗ್ಯಾರಂಟಿ ಮೀರಿ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ವಿಧಾನಸೌಧದ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ಅವರು ಸಹೋದ್ಯೋಗಿಗಳಿಗೆ ಬಜೆಟ್ ದಿಕ್ಕಿನ ಬಗ್ಗೆ ಸೂಕ್ಷ್ಮವಾಗಿ ತಿಳಿಸಿದರು. ಇದನ್ನೂ ಓದಿ: ಸದ್ಯಕ್ಕೆ ಹೊಸ ರೇಷನ್ ಕಾರ್ಡ್ ಇಲ್ಲ – ಆಹಾರ ಸಚಿವ ಮುನಿಯಪ್ಪ ಹೇಳಿದ್ದೇನು?
Advertisement
ಈ ಕುರಿತು ಮಾತನಾಡಿದ ಸಿಎಂ, ಸಾಲವೂ ಇದೆ. ಆದರೆ ವಿತ್ತೀಯ ಶಿಸ್ತಿನೊಳಗೆ ಇದೆ. ಜಿಎಸ್‌ಡಿಪಿ 25% ಒಳಗೆ ಇದೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ ಎಂದರು. ಇದನ್ನೂ ಓದಿ: ಇಂದು ರಾಜ್ಯ ಬಜೆಟ್ ಮಂಡನೆ – ಬಜೆಟ್‌ಗೂ ಮುನ್ನ ಬಿಜೆಪಿ, ಜೆಡಿಎಸ್ ಪ್ರತಿಭಟನೆ
Advertisement
Advertisement
ಈ ಬಾರಿ ಸಿದ್ದರಾಮಯ್ಯ ದಾಖಲೆಯ 16ನೇ ಬಜೆಟ್ ಮಂಡಿಸುತ್ತಿದ್ದು, ಬಜೆಟ್ ಗಾತ್ರ 4.09 ಲಕ್ಷ ಕೋಟಿ ಇದೆ. ಬಜೆಟ್‌ಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. ಕಳೆದ ಬಾರಿಯ ಬಜೆಟ್ ಗಾತ್ರ 3.71 ಲಕ್ಷ ಕೋಟಿ ಇತ್ತು. ಇದನ್ನೂ ಓದಿ: ತಿರುಪತಿ ಅನ್ನ ಪ್ರಸಾದಕ್ಕೆ ಮಸಾಲೆ ವಡೆ ಸೇರ್ಪಡೆ- ತಿಮ್ಮಪ್ಪನ ಭಕ್ತರಿಗೆ ದ.ಭಾರತದ ಖಾದ್ಯ
Advertisement