– ನಿಖಿಲ್ ಪರ ಯದುವೀರ್ ಮತಯಾಚನೆ
ರಾಮನಗರ: ಇದು ರಾಜ್ಯದ ಭವಿಷ್ಯ ರೂಪಿಸುವ ಉಪಚುನಾವಣೆ. ಯುವನಾಯಕ ನಿಖಿಲ್ (Nikhil Kumaraswamy) ಭವಿಷ್ಯದ ನಾಯಕನಾಗುವ ಎಲ್ಲಾ ಗುಣಗಳು ಇವೆ. ಅದಕ್ಕೆ ಇಲ್ಲಿಂದ ಗೆಲ್ಲಿಸಿ ಶಕ್ತಿ ತುಂಬಬೇಕು ಎಂದು ಸಂಸದ ಯದುವೀರ್ (Yaduveer Wadiyar) ಹೇಳಿದ್ದಾರೆ.
ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಕೂಡ್ಲೂರು ಗ್ರಾಮದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಜಯಚಾಮರಾಜೇಂದ್ರ ಒಡೆಯರ್ ಈ ಗ್ರಾಮಕ್ಕೆ ಬಂದಿದ್ದರು. ನನಗೂ ಕೂಡ ಇಂದು ಆ ಭಾಗ್ಯ ಸಿಕ್ಕಿದೆ. ಇಲ್ಲಿನ ರಾಮಮಂದಿರಕ್ಕೆ ಭೇಟಿ ನೀಡಿದ್ದು ಖುಷಿ ಆಯಿತು. ಕಳೆದ ಹತ್ತು ವರ್ಷಗಳಲ್ಲಿ ಮೋದಿ ಅವರು ಉತ್ತಮ ಆಡಳಿತ ನೋಡುತ್ತಿದ್ದೀರಿ. ಮತ್ತೊಂದೆಡೆ ರಾಜ್ಯದಲ್ಲಿ ಆರ್ಥಿಕತೆ ಅಧೋಗತಿಗೆ ಹೋಗುತ್ತಿರುವುದನ್ನು ಗಮನಿಸಿದ್ದೆ. ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅನೇಕ ಹಗರಣಗಳ ಕುರಿತು ಹೋರಾಟ ಮಾಡಿ ಯುವ ನಾಯಕನಾಗಿ ನಿಖಿಲ್ ಗುರುತಿಸಿಕೊಂಡಿದ್ದಾರೆ. ಅವರಿಗೆ ಒಂದು ಅವಕಾಶ ನೀಡಿ ಎಂದರು. ಇದನ್ನೂ ಓದಿ: ಸಂಡೂರು| ಅಭ್ಯರ್ಥಿ ಪರ ಪ್ರಚಾರದಿಂದ ಕಾಂಗ್ರೆಸ್ ಶಾಸಕರು ದೂರ ದೂರ
ಅರಸು ಸಮುದಾಯ ಧರ್ಮದ ರಕ್ಷಣೆಗೆ ಇರೋ ಸಮುದಾಯ. ಜನರ ಸೇವೆ ಮಾಡುವುದು ನಮ್ಮ ಕರ್ತವ್ಯ. ಧರ್ಮದ ರಕ್ಷಣೆ, ದೇಶದ ಪರಂಪರೆ ಉಳಿಸಲು ಎನ್‌ಡಿಎ ಹೋರಾಟ ಮಾಡುತ್ತಿದೆ. ಮೋದಿ ಹತ್ತು ವರ್ಷಗಳಲ್ಲಿ ವಿಕಸಿತ ಭಾರತ ಮಾಡಿ, ಮುಂದುವರಿದ ರಾಷ್ಟ್ರಗಳ ಮಟ್ಟಕ್ಕೆ ಪ್ರಗತಿ ಕಾಣುತ್ತಿದೆ. ನಮ್ಮ ಭಾರತದ ಪರಂಪರೆ ಉಳಿಸಲು ಎನ್‌ಡಿಎ ಹೋರಾಡುತ್ತಿದೆ. ಹಾಗಾಗಿ ನಿಖಿಲ್ ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಬದಲಾವಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಶಿಗ್ಗಾಂವಿಯಲ್ಲಿ ಅಬ್ಬರದ ಪ್ರಚಾರ – 10,000 ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದ ಭರತ್ ಬೊಮ್ಮಾಯಿ