ಬೆಂಗಳೂರು : ಈ ಸರ್ಕಾರ ಪಾಪರ್ ಆಗಿದ್ದು ಗುಂಡಿ ಮುಚ್ಚೋಕೆ ಸರ್ಕಾರದ ಬಳಿ ಹಣ ಇಲ್ಲ. ಈ ಸರ್ಕಾರ ಬೆಂಗಳೂರನ್ನು (Bengaluru) ಬ್ರ‍್ಯಾಂಡ್ ಬೆಂಗಳೂರು ಮಾಡುತ್ತಿಲ್ಲ. ಕಾಸು ಇಲ್ಲದ ಬ್ರ‍್ಯಾಂಡ್ ಬೆಂಗಳೂರು ಮಾಡಲು ಹೊರಟಿದ್ದಾರೆ ಎಂದು ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ (R Ashok) ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ (DK Shivakumar) ಅವರು ಬೇಜವಾಬ್ದಾರಿ ಹೇಳಿಕೆ ಕೊಡುತ್ತಿದ್ದಾರೆ. ಕಂಟ್ರಾಕ್ಟರ್ ಪ್ರತಿಭಟನೆ ಮಾಡುತ್ತಿದ್ದಾರೆ. ಕಮೀಷನ್ ಜಾಸ್ತಿ ಆಗಿದೆ ಅಂತಾನೋ? ಬಿಲ್ ಬಂದಿಲ್ಲ ಅಂತ ಮಾಡ್ತಿದ್ದಾರೋ ಗೊತ್ತಿಲ್ಲ. 25% ಹಣ ಅಂದರೆ ಸುಮಾರು 1500 ಕೋಟಿ ಹಣ ತಡೆದು ಹಿಡಿದಿದ್ದಾರೆ. ಬೆಂಗಳೂರಿನಲ್ಲಿ ಮಾತ್ರ ಹಣ ತಡೆ ಹಿಡಿಯಲಾಗಿದೆ. ಯಾಕೆ ಕಮೀಷನ್‌ಗಾಗಿ ತಡೆ ಹಿಡಿಯಲಾಗಿದೆಯಾ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಇಸ್ಲಾಂಗೆ ಮತಾಂತರವಾಗುವಂತೆ ವೈದ್ಯನಿಂದ ಕಿರುಕುಳ – ಉಡುಪಿಯಲ್ಲಿ ಆರೋಪಿ ಬಂಧನ
Advertisement
Advertisement
ಬೆಂಗಳೂರಿನಲ್ಲಿ ರಸ್ತೆ ಮೇಲೆ ಗುಂಡಿ ಬಿದ್ದಿವೆ. ಗುಂಡಿಗಳು ಇರುವುದರಿಂದ ಬಸ್ ಓಡಾಟ ಸರಿಯಾಗಿ ಆಗುತ್ತಿಲ್ಲ. ಗುಂಡಿ ಮುಚ್ಚೋಕು ಈ ಸರ್ಕಾರಕ್ಕೆ ಯೋಗ್ಯತೆ ಇಲ್ವಾ ಎಂದು ಕಿಡಿಕಾರಿದ್ದಾರೆ.
Advertisement
ಲೋಕಾಯುಕ್ತರು ರಸ್ತೆ ಕಸ ನೋಡಿ ಛೀಮಾರಿ ಹಾಕಿದ್ದಾರೆ. ಗುಂಡಿ, ಕಸ ಏನು ಈ ಸರ್ಕಾರಕ್ಕೆ ಕಾಣುತ್ತಿಲ್ಲ. ಎಲ್ಲಾ ಕಡೆ ಪ್ರವಾಹ ಜಾಸ್ತಿ ಆಗಿದೆ. ಅದಕ್ಕೂ ಹಣ ಬಿಡುಗಡೆ ಮಾಡಿಲ್ಲ. ಸಿಎಂ ಎಲ್ಲೂ ಹಣ ಬಿಡುಗಡೆ ಬಗ್ಗೆ ಮಾತಾಡಿಲ್ಲ. ಯಾದಗಿರಿ, ಕಲಬುರಗಿ, ಹಲವು ಭಾಗದಲ್ಲಿ ಅನಾಹುತ ಆಗುತ್ತಿದೆ. ಸರ್ಕಾರ ಏನು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ನಾನು ಛಲವಾದಿ, ನನ್ನ ವಿರುದ್ಧ ದೂರು ಕೊಟ್ಟರೂ ನಾನು ಹೆದರಲ್ಲ: ನಾರಾಯಣಸ್ವಾಮಿ
Advertisement
ರಾಜ್ಯದ ರಸ್ತೆಗಳು ಹದಗೆಟ್ಟಿವೆ. ಸರ್ಕಾರ 5 ಗ್ಯಾರಂಟಿ ಜೊತೆಗೆ ಸುಲಲಿತವಾಗಿ ರಸ್ತೆಯಲ್ಲಿ ಓಡಾಡೋ ಗ್ಯಾರಂಟಿ ಕೊಡಬೇಕು. ಈ ಸರ್ಕಾರ ಕೋಮಾ ಸ್ಥಿತಿಗೆ ಹೋಗಿದೆ. ನಿತ್ಯ ಒಬ್ಬೊಬ್ಬರು ಸಿಎಂ ಸ್ಥಾನದ ಮೇಲೆ ಕಲರ್ ಕಲರ್ ಟವಲ್ ಹಾಕಿ ಹೋಗುತ್ತಿದ್ದಾರೆ ವ್ಯಂಗ್ಯವಾಡಿದರು. ಇದನ್ನೂ ಓದಿ: ರಾಮಕೃಷ್ಣ ಹೆಗಡೆಯಂತೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ: ಆರ್.ಅಶೋಕ್
ಜಮೀರ್, ದೇಶಪಾಂಡೆ, ಪರಮೇಶ್ವರ್, ಜಾರಕಿಹೋಳಿ ಒಂದೊಂದು ರೀತಿ ಸಿಎಂ ಸ್ಥಾನದ ಮೇಲೆ ಟವಲ್ ಹಾಕುತ್ತಿದ್ದಾರೆ. ಮುಡಾ ಎಂಬ ಮ್ಯೂಸಿಕಲ್ ಚೇರ್ ನಡೆಯುತ್ತಿದೆ. ಮ್ಯೂಸಿಕ್ ನಿಂತ ಕೂಡಲೇ ಸಿಎಂ ಸ್ಥಾನದ ಮೇಲೆ ಕೂತುಕೊಳ್ಳೋಕೆ ಟವಲ್ ಹಾಕುತ್ತಿದ್ದಾರೆ. ಸಿದ್ದರಾಮಯ್ಯ (CM Siddaramaiah) ಸಿಎಂ ಸ್ಥಾನದಿಂದ ಕೆಳಗಿಳಿದರೆ ಕುಳಿತುಕೊಳ್ಳೋಣ ಎಂದು ಸಿದ್ಧರಾಗಿದ್ದಾರೆ. ಈ ಸರ್ಕಾರಕ್ಕೆ ಲಂಗು ಲಗಾಮು ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಅಂಗನವಾಡಿ ಕಟ್ಟಡಗಳು ಸರಿಯಿಲ್ಲ. ಅಂಗನವಾಡಿಯವರಿಗೆ ಕೊಡಲು ಸಂಬಳವಿಲ್ಲ. ಹೀಗಿದ್ದರೂ ರೀಲ್ಸ್ ಮಾಡಿ ಕಳಿಸಿ ಅಂತ ಸಚಿವರು ಹೇಳುತ್ತಿದ್ದಾರೆ ಅಂತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಹಾವೇರಿ ವಿವಿಯ ಕುಲಸಚಿವರಾಗಿದ್ದ ದಿನೇಶ್ ಕುಮಾರ್ ನೇಮಕಾತಿ ರದ್ದು