ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ಇದೆಯಾ? ಒಂದು ಕೈಯಲ್ಲಿ ಕೊಟ್ಟು, ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳೋ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ.
ಬಸ್ ಟಿಕೆಟ್ ದರ (Bus Ticket Price Hike) ಏರಿಕೆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಬೆಲೆ ಏರಿಕೆ ಅಚ್ಚರಿ ತರೋ ವಿಷಯ ಅಲ್ಲ. ರಾಜ್ಯದ ಜನರು ಟಿಕೆಟ್ ಬೆಲೆ ಏರಿಕೆಯನ್ನು 2-3 ದಿನಗಳಲ್ಲಿ ಮರೆತು ಹೋಗುತ್ತಾರೆ. ಎರಡು ದಿನ ಆಕ್ರೋಶ ವ್ಯಕ್ತಪಡಿಸುತ್ತಾರೆ ಅಷ್ಟೇ. ಮೂರನೇ ದಿನ ಜನರೇ ಅಡ್ಜೆಸ್ಟ್ ಆಗುತ್ತಾರೆ. ಇದೇ ಸರ್ಕಾರ ಡೀಸೆಲ್, ಪೆಟ್ರೋಲ್ ಮೇಲೆ ಸೆಸ್ ಹಾಕಿದ್ದರೂ ಪ್ರತಿಭಟನೆ ಮಾಡಿದ್ರಾ? ಅದಕ್ಕೆ ಅಡ್ಜೆಸ್ಟ್ ಆದರು. ಸ್ಟಾಂಪ್ ಡ್ಯೂಟಿ ಜಾಸ್ತಿ ಮಾಡಿದರು. ಗೈಡ್‌ಲೈನ್ಸ್ ವ್ಯಾಲ್ಯೂ, ಮದ್ಯದ ದರ ಏರಿಕೆ ಮಾಡಿದರು. ಈಗ ನೀರಿನ ದರವೂ ಏರಿಕೆ ಆಗುತ್ತಂತೆ. ನೀರಿನ ದರವೂ ಏರಿಕೆ ಆಗುತ್ತೆ. ಹಾಲಿನ ದರ ಏನಾಗಬಹುದು ಎಂದು ಈ ಸರ್ಕಾರ ಹೇಳುತ್ತಿದೆ. ಹೊಸ ವರ್ಷದಲ್ಲಿ ನಾಡಿನ ಜನ ಬೆಲೆ ಏರಿಕೆಗೆ ತಯಾರಾಗಿ ಎಂದು ಈ ಸರ್ಕಾರ (Congress) ಸಂದೇಶ ಕೊಡುತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಡಿಕೆಶಿಗೂ ಶಾಕ್, ಪವರ್ ಶೇರ್ ಕುತೂಹಲಿಗಳಿಗೂ ಶಾಕ್ – ಸಿಎಂ ಡಿನ್ನರ್ ಸಭೆ ಇನ್‌ಸೈಡ್ ಸ್ಟೋರಿ
ಸದ್ಯಕ್ಕೆ ನಾನು ಯಾವುದಕ್ಕೂ ಟೀಕೆ ಮಾಡಲ್ಲ. ಟೀಕೆ ಮಾಡಿ ಏನು ಮಾಡೋದು. ಕೇಳೋಕೆ ಯಾರಿದ್ದಾರೆ ಇಲ್ಲಿ? ರಾಜ್ಯದಲ್ಲಿ ಸರ್ಕಾರ ಇಲ್ಲ. ಸ್ವೇಚ್ಚಾಚ್ಚಾರವಾಗಿ ಸರ್ಕಾರ ನಡೆಸುತ್ತಿದ್ದಾರೆ. ಇವರಿಗೆ ಹೇಳೋರು ಕೇಳೋರು ಯಾರೂ ಇಲ್ಲ. ಜನರ ಕಷ್ಟ, ಸುಖ ಯಾರು ಕೇಳುತ್ತಾರೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧಾರ
ಅನಿವಾರ್ಯ ಇದ್ದಾಗ ಬೆಲೆ ಏರಿಕೆ ಮಾಡೋದು ಬೇರೆ. ಹಿಂದಿನ ಸರ್ಕಾರಗಳಲ್ಲಿ ಅನಿವಾರ್ಯ ಇದ್ದಾಗ ಬೆಲೆ ಏರಿಕೆ, ಕಡಿಮೆ ಮಾಡೋದು ಸಾಮಾನ್ಯ. ಆದರೆ ಇವರ ಬೆಲೆ ಏರಿಕೆ ಇವರೇ ಮೈ ಮೇಲೆ ಎಳೆದುಕೊಂಡಿರೋದು. ಕೆಇಬಿ ಮುಂದೆ ಏನು ಆಗುತ್ತದೋ ನೋಡೋಣ. ಪವರ್ ಸೆಕ್ಟರ್ ಏನಾಗುತ್ತೋ ನೋಡೋಣ. ಯುವನಿಧಿ ಅಂತ ಮಾಡಿದ್ರು. ಎಷ್ಟು ಜನರಿಗೆ ಮಹಾ ದುಡ್ಡು ಕೊಡುತ್ತಿದ್ದಾರೆ ಇವರು. ಸ್ವೇಚ್ಚಾಚ್ಚಾರವಾಗಿ ಜಾಹಿರಾತುಗಳಿಗೆ ಹಣ ಖರ್ಚು ಮಾಡುತ್ತಿದ್ದಾರೆ. ಸಾರ್ವಜನಿಕರ ತೆರಿಗೆ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜನರು ಇದರ ಬಗ್ಗೆ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಕಳ್ಳತನ ಮಾಡಿ ಹಣ ಕೊಡೋಕೆ ಆಗುತ್ತಾ, ಗ್ಯಾರಂಟಿಯಿಂದಾಗಿ ದರ ಹೆಚ್ಚಳ ಆರೋಪ ಸುಳ್ಳು – ಬೋಸರಾಜು
ಈ ಸರ್ಕಾರ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ. ಈ ಸರ್ಕಾರ ಬಂದ ದಿನದಿಂದ ಇದೇ ನಡೆಯುತ್ತಿರುವುದು. ಬಹಳ ವಿಷಯ ಮಾತನಾಡೋದು ಇದೆ. ಒಂದು ವಾರ 10 ದಿನ ಕಳೆಯಲಿ ಮಾತನಾಡುತ್ತೇನೆ. ಸಂಕ್ರಾಂತಿ ಆಗಲಿ, ನಾನು ಎಲ್ಲಾ ವಿಷಯ, ರಾಜ್ಯದಲ್ಲಿ ನಡೆಯುತ್ತಿರೋ ಆಡಳಿತ, ಕಾನೂನು ವ್ಯವಸ್ಥೆ ಏನಾಗಿದೆ ಎಲ್ಲವೂ ಮಾತನಾಡುತ್ತೇನೆ ಎಂದರು. ಇದನ್ನೂ ಓದಿ: ಮತ್ತೆ ಕೈಕೊಟ್ಟ ಟಾಪ್ ಬ್ಯಾಟರ್ಸ್ – ಮೊದಲ ದಿನವೇ ಭಾರತ 185ಕ್ಕೆ ಆಲೌಟ್; ಆಸೀಸ್ 9ಕ್ಕೆ 1 ವಿಕೆಟ್